LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಊಟದ ವಿಚಾರಕ್ಕೆ ಜಗಳ: ಮಾಜಿ ಸೈನಿಕ ಪತಿಯನ್ನೇ ಚಾಕುವಿನಿಂದ ಇರಿದು ಕೊಲೆಗೈದ ಪತ್ನಿ 

Advertisement

ಗಾಂಧಿನಗರ: ಊಟಕ್ಕೆ ಪಲ್ಯ ಏನು ಮಾಡಿದ್ದೀಯಾ? ಎಂದು ಪತಿ ಪತ್ನಿಯನ್ನು ಪ್ರಶ್ನಿಸಿದ್ದ ತಪ್ಪಾಯ್ತು. ಕೋಪದ ಬರದಲ್ಲಿ ಪತ್ನಿ ಪತಿಯನ್ನೇ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.ಪತಿ-ಪತ್ನಿ ನಡುವೆ ಕ್ಷುಲ್ಲಕ ಕಾರಣ ಆರಂಭವಾದ ಜಗಳ ಎಂಥಹ ಅನಾಹುತವನ್ನೇ ಮಾಡಿದೆ ನೋಡಿ.

ಕೋಪದಲ್ಲಿ ಪತ್ನಿ ಮಾಜಿ ಸೈನಿಕನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಮೃತನನ್ನು ಮಾಜಿ ಸೈನಿಕ ದಿಲೀಪ್ ಖರಾಡೆ ಎಂದು ಗುರುತಿಸಲಾಗಿದೆ.

ಊಟಕ್ಕೆ ಯಾವ ತರಕಾರಿ ಪಲ್ಯ ಮಾಡಿದ್ದೀಯಾ ಎಂದು ಕೇಳಿದ್ದಕ್ಕೆ ಈ ಕೊಲೆ ನಡೆದಿದೆ. ಮೃತ ದಿಲೀಪ್ ಖರಾಡೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಆರ್ಮಿಯಿಂದ ಬಂದ ನಂತರ ಅವರು ಅಹಮದಾಬಾದ್‌ನ ನರೋಡಾ ಪ್ರದೇಶದಲ್ಲಿ ಪತ್ನಿ ನಿರ್ಮಲಾ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು.

ಜೀವನೋಪಾಯಕ್ಕಾಗಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಮೇಲ್ನೋಟಕ್ಕೆ ಸುಂದರ ಸಂಸಾರದಂತೆ ಕಂಡರೂ, ದಂಪತಿ ನಡುವೆ ದೀರ್ಘಕಾಲದಿಂದ ಕೌಟುಂಬಿಕ ಸಮಸ್ಯೆಗಳಿದ್ದವು ಮತ್ತು ಆಗಾಗ ಜಗಳಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ರಾತ್ರಿ ಊಟದ ವೇಳೆ ದಿಲೀಪ್ ಪತ್ನಿ ನಿರ್ಮಲಾಗೆ "ಇವತ್ತು ಯಾವ ತರಕಾರಿ ಪಲ್ಯ ಮಾಡಿದ್ದೀಯಾ?" ಎಂದು ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ನಿರ್ಮಲಾತಕ್ಷಣವೇ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದು ದಿಲೀಪ್ ಅವರ ಎದೆಯ ಭಾಗಕ್ಕೆ ಬಲವಾಗಿ ಇರಿದಿದ್ದಾಳೆ.

ನಂತರ ಆಕೆಯೇ ಪತಿಯನ್ನು ತಾನೇ ಸ್ವತಃ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಆದರೆ, ಚಾಕು ನೇರವಾಗಿ ಹೃದಯದ ಮೇಲ್ಭಾಗಕ್ಕೆ ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ದಿಲೀಪ್, ಆಸ್ಪತ್ರೆ ತಲುಪುವಷ್ಟರಲ್ಲೇ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಂಗ್ರೆಸ್‌ನಲ್ಲಿದ್ದಾಗ ಛಲವಾದಿ, ಬಿಜೆಪಿಗೆ ಹೋದ ಮೇಲೆ ಮನುವಾದಿ : ನಾರಾಯಣಸ್ವಾಮಿ ವಿರುದ್ಧ ಕಾಂಗ್ರೆಸ್ ಆಕ್ರೋಶ ಬೆಂಗಳೂರು ಮೆಟ್ರೋ, ಹುಬ್ಬಳ್ಳಿ-ಬೆಳಗಾವಿ ಪಾಲಿಕೆಗಳಿಗೆ ಬಾಂಬ್ ಬೆದರಿಕೆಜಿಂಬಾಬೆ- ಅಪಘಾನಿಸ್ತಾನ್ ಮೊದಲ ಟೆಸ್ಟ್ ಡ್ರಾ ದಲ್ಲಿ ಅಂತ್ಯ ಭೀಕರ ಅಗ್ನಿ ಅವಘಡ : 40ಕ್ಕೂ ಹೆಚ್ಚು ಗುಡಿಸಲು, ಅಂಗಡಿಗಳು ಸುಟ್ಟು ಭಸ್ಮಮಗಳಿಗೆ ಅಂತರ್ಜಾತಿ ಮದುವೆ ಮಾಡಿಸಿದ ಜ್ಯೋತಿಷಿಯ ಪ್ರಾಣ ತೆಗೆದ ತಂದೆಕಾನೂನು ಅರಿವಿನಿಂದ ಉತ್ತಮ ನಾಗರಿಕರಾಗಿ ಆನಂದ ಹೆಚ್. ಕೊಣ್ಣೂರುಕಾನೂನು ಅರಿವಿನಿಂದ ಉತ್ತಮ ನಾಗರಿಕರಾಗಿ ಆನಂದ ಹೆಚ್. ಕೊಣ್ಣೂರುಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿ : ಸಚಿವ ಸಂತೋಷ ಲಾಡ್ಬೇಡಕಿಹಾಳದ ವೆಂಕಟೇಶ್ವರ ಪಾವರ್ ಪ್ರಾಜೆಕ್ಟ್ ಸಕ್ಕರೆ ಕಾರ್ಖಾನೆ ಯಿಂದ ರಾಜ್ಯದಲ್ಲಿಯೇ ಪ್ರತಿ ಟನ್ ಕಬ್ಬಿಗೆ 4200 ರೂಪಾಯಿ ದಾಖಲೆ ದರ ಘೋಷಣೆ  ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ ಗೆ 1-0 ಟೆಸ್ಟ್ ಸರಣಿ ಜಯ