ಬೆಂಗಳೂರು : ಬೆಂಗಳೂರು ಉತ್ತರ ಪಾಲಿಕೆಯಲ್ಲಿ ಸುಮಾರು ವರ್ಷಗಳಿಂದ ಯಾವುದೇ ಅಭಿವೃದ್ಧಿ ಮಾಡುತ್ತಿರಲಿಲ್ಲ ಆದಿಕಾರಿಗಳು ಬೇಜವಾಬ್ದಾರಿತನದಿಂದ ಕಡತಗಳನ್ನು ಮೂಲೆಗೆ ಕಟ್ಟಿ ಹಾಕಿದ್ದರು. ಒಂದು ವಾರದೊಳಗೆ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಕ್ರಮ ಕೈಗೊಳ್ಳಲಾಗಿದೆ'ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಬಾಗಲಗುಂಟೆಯ ಜಿಬಿಎ ಕಚೇರಿಯಲ್ಲಿ ಜಂಟಿ ಆಯುಕ್ತೆ ಪಲ್ಲವಿ ಅವರೊಂದಿಗೆ ಅಧಿಕಾರಿಗಳನ್ನು ಸಭೆ ಕರೆದು ಮಾತನಾಡಿದರು.
ಜಂಟಿ ಆಯುಕ್ತರು ಸಹ ಒಂದು ವಾರದೊಳಗೆ ಕೆಲಸದ ಪ್ರಕ್ರಿಯೆ ಪ್ರಾರಂಭಿಸಲು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಕೆಲವು ಅಧಿಕಾರಿಗಳು ಸೆನ್ಸೆಸ್ ಡ್ಯೂಟಿಗೆ ಹೋಗಿದ್ದಾರೆ' ಎಂದರು.
ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ಸ್ವಲ್ಪ ನೀರಿನ ಸಮಸ್ಯೆ ಉಲ್ಬಾಣಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರಕ್ಕೆ ಮೂರು ಬಾರಿ ಕಾವೇರಿ ನೀರು ಮತ್ತು ಕೆಲವು ಕಡೆ ಬೋರ್ ವೆಲ್ ನೀರನ್ನು ನೀಡಲಾಗುತ್ತಿದೆ. ಚಿಕ್ಕಬಾಣಾವರ ವ್ಯಾಪ್ತಿಗೆ 20 ಬೋರ್ ವೆಲ್ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ಅನುಮತಿ ನೀಡಿದರೆ ಅಲ್ಲೂ ಸಹ ನೀರಿನ ಸಮಸ್ಯೆ ಬಗೆಹರಿಯಲಿದೆ' ಎಂದು ತಿಳಿಸಿದರು.
ವರದಿ : ಅಯ್ಯಣ್ಣ ಮಾಸ್ಟರ್

