Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಮಲಿ ಜೋಡಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

Advertisement
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿಯ ರಿಷಿ ಹಾಗೂ ಕಮಲಿ ಜೋಡಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಈ ಜೋಡಿಯ ಬಗ್ಗೆ ಆಗಾಗ ಗಾಳಿ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಕಮಲಿ ಪಾತ್ರಧಾರಿ ನಟಿ ಅಮೂಲ್ಯ ಗೌಡ ಪ್ರೀತಿಯಲ್ಲಿ ಬಿದ್ದಿದ್ದು, ಕನ್ನಡ ಕಿರುತೆರೆಯ ನಟನನ್ನೇ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಕಮಲಿ ಧಾರಾವಾಹಿಯ ನಾಯಕ ರಿಷಿ ಪಾತ್ರದಲ್ಲಿ ನಟಿಸಿದ್ದ ನಟ ನಿರಂಜನ್‌ ಬಿಎಸ್‌ ಹಾಗೂ ಕಮಲಿ ಪಾತ್ರಧಾರಿ ನಟಿ ಅಮೂಲ್ಯ ಗೌಡ ನಿಜ ಜೀವನದಲ್ಲಿಯೂ ಪ್ರೀತಿಸುತ್ತಿದ್ದು, ಸದ್ಯದಲ್ಲೇ ಗುಡ್‌ನ್ಯೂಸ್‌ ಕೊಡಲಿದ್ದಾರೆ ಎನ್ನುವ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದವು. ಇದೀಗ ಈ ಗಾಳಿ ಸುದ್ದಿಗೆ ಒಂದು ಸಿಹಿಯಾದ ಸ್ಟಷ್ಟನೆ ಸಿಕ್ಕಿದ್ದು, ನಟ ನಿರಂಜನ್‌ ಜೊತೆ ಪ್ರೀತಿಗೆ ಅಮೂಲ್ಯ ಗೌಡ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

ನಮಗ್ಯಾರು ದಿಕ್ಕು..ನಾವಾದ ಮೇಲೆ ಅವನಿಗೆ ಯಾರು ದಿಕ್ಕು: ಮೌನ ಮುರಿದ ಮಾಳವಿಕಾ ಅವಿನಾಶ್‌ ಈ ಬಗ್ಗೆ ಸ್ವತಃ ಅಮೂಲ್ಯ ಗೌಡ ಮಾತನಾಡಿದ್ದು, 'ಕಮಲಿ ಧಾರಾವಾಹಿ ಶುರುವಾದ ದಿನದಿಂದಲೂ ಈ ಒಂದು ಗಾಸಿಪ್‌ ಇದ್ದೇ ಇತ್ತು. ನನ್ನ ಪುಟ್ಟ ಪ್ರಪಂಚದಲ್ಲಿ ನಿರಂಜನ್‌ ಅವರು ಕೂಡ ಇದ್ದಾರೆ. ಕಮಲಿ ಧಾರಾವಾಹಿ ಮಾಡುವ ಸಮಯದಿಂದಲೂ ಅವರ ಕುಟುಂಬಕ್ಕೆ ನಾನು ಗೊತ್ತು. ನನ್ನ ಕುಟುಂಬಕ್ಕೆ ಅವರು ಗೊತ್ತು. ನಾವೆಲ್ಲಾ ಒಂದು ಫ್ಯಾಮಿಲಿ ಫ್ರೆಂಡ್ಸ್‌ ತರ ಕ್ಲೋಸ್‌ ಆಗಿದ್ದೇವೆ' ಎಂದರು.

'ನಾವಿಬ್ಬರು ಪ್ರೀತಿಸುತ್ತಿದ್ದೇವಾ, ಇಲ್ಲವಾ ಎನ್ನುವುದು ನಿಜ ಹೇಳಬೇಕು ಅಂದರೆ ನನಗೆ ಸಹ ಗೊತ್ತಿಲ್ಲ. ನೋಡೋಣ ಸದ್ಯ ಗೊತ್ತಿಲ್ಲ. ಮುಂದೆ ಆದರೂ ಆಗಬಹುದು. ಹೇಳಲು ಆಗುವುದಿಲ್ಲ. ನಮ್ಮಿಬ್ಬರ ಮಧ್ಯೆ ಪ್ರೀತಿ ಇಲ್ಲ ಅಂತಾ ನಾನು ಹೇಳುವುದಿಲ್ಲ. ಇವಾಗ ನಾನು ಇಲ್ಲ ಅಂತಾ ಹೇಳಿ ಮುಂದೆ ನಾವಿಬ್ಬರು ಪ್ರೀತಿಸಿದರೆ ಸೋಶಿಯಲ್‌ ಮೀಡಿಯಾದಲ್ಲಿ ಏನೇನು ಕಮೆಂಟ್‌ ಬರಬಹುದು ಅಂತಾ ನನಗೆ ಗೊತ್ತು' ಎಂದು ಪರೋಕ್ಷವಾಗಿ ನಿರಂಜನ್‌ ಜೊತೆಗಿನ ಪ್ರೀತಿ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್