LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಹಾಡ ಹಗಲೇ ಡಬಲ್ ಮರ್ಡರ್ : ಗ್ರಾಂ.ಪಂ ಒಳಗಡೆಯೇ ತಂದೆ-ಮಗಳ ಬರ್ಬರ ಹತ್ಯೆ

Advertisement

ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ ಭೀಕರ ಕೊಲೆಯೊಂದು ನಡೆದಿದ್ದು, ಆಸ್ತಿ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ಮಗಳನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿವೃತ್ತ ಯೋಧ ರುದ್ರಪ್ಪ ಕುಂದರಗಿ (67) ಮತ್ತು ಅವರ ಪುತ್ರಿ ಶಶಿಕಲಾ (26) ಕೊಲೆಯಾದ ದುರದೃಷ್ಟಕರ ಸೈನಿಕ ಕುಟುಂಬದ ಸದಸ್ಯರು.

ಘಟನೆಯಲ್ಲಿ ರುದ್ರಪ್ಪ ಅವರ ಕಾರು ಚಾಲಕನಿಗೂ ತೀವ್ರ ಗಾಯಗಳಾಗಿದ್ದು, ಆತನನ್ನು ಚಿಕಿತ್ಸೆಗಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ತಿಪಾಲು ಮಾಡಿಕೊಳ್ಳಲು ಅರ್ಜಿ ಸಲ್ಲಿಸುವ ಉದ್ದೇಶದಿಂದ ರುದ್ರಪ್ಪ ಅವರು ತಮ್ಮ ಮಗಳು ಹಾಗೂ ಚಾಲಕನೊಂದಿಗೆ ಗ್ರಾಮ ಪಂಚಾಯಿತಿ ಕಚೇರಿಗೆ ಬಂದಿದ್ದರು.

ಈ ವಿಷಯ ತಿಳಿದ ರುದ್ರಪ್ಪ ಅವರ ಇಬ್ಬರು ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ರುದ್ರಪ್ಪ ಅವರ ಓರ್ವ ಪುತ್ರ ಸೇರಿಕೊಂಡು ಕಚೇರಿ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.

ಕೊಡಲಿ ಮತ್ತು ಕುಡುಗೋಲುಗಳಂತಹ ಮಾರಕಾಸ್ತ್ರಗಳಿಂದ ಸಜ್ಜಾಗಿ ಬಂದಿದ್ದ ಆರೋಪಿಗಳು ಕಚೇರಿಯ ಒಳಗಡೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಜಪಾನ್ ಮಹಿಳೆಯರ ಪಂದ್ಯ ಪದಕಗಳ ಭೇಟೆಗೆ ಭಾರತೀಯ ಕ್ರೀಡಾಳುಗಳು ಸಜ್ಜು ಬಿಜೆಪಿ ವತಿಯಿಂದ ಒಂದು ತಿಂಗಳು 'ಸೇವಾ ಸಂಕಲ್ಪ ದಿನ' ಆಚರಣೆ : ಮಾಜಿ ಎಂ.ಎಲ್.ಸಿ ಮಹಾಂತೇಶ ಕವಟಗಿಮಟ್ಟ.ಕುಡಿದು ಕೋರ್ಟ್ ನಲ್ಲಿ ಗಲಾಟೆ : ವಕೀಲನಿಗೆ ಒಂದು ದಿನ ಜೈಲು ಶಿಕ್ಷೆ, 2 ಸಾವಿರ ದಂಡ ವಿಧಿಸಿದ ಹೈಕೋರ್ಟ್ ಪ್ರೀತಿಸಿ ಮದುವೆಯಾದ ಹೆಂಡತಿಯನ್ನ ಲಾಡ್ಜ್‌ನಲ್ಲಿ ಕೊಂದ ಕಿರಾತಕ ಗಂಡ ಭಾರತದ ಕ್ರೀಡಾ ಪಟುಗಳಿಗೆ ಅದ್ದೂರಿ ಸ್ವಾಗತ ಪಾವಗಡಕ್ಕೆ ತಕ್ಷಣ ಭದ್ರಾ ಮೇಲ್ದಂಡೆ ನೀರು ಹರಿಸಿ :  ರೈತ ಸಂಘದಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು : ಜಿಲ್ಲಾಧ್ಯಕ್ಷ ಪೂಜಾರಪ್ಪ ನಕ್ಸಲ್ ಶಂಕಿತ ಕನಕಲಬಂಡೆ ವೆಂಕಟೇಶ್ ಬಂಧನ ಹಿನ್ನೆಲೆ : ಎಸ್ಪಿ ಅಶೋಕ್ ಸ್ಪಷ್ಟನೆಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಸೆ.17ರಿಂದ ಅ.17ರವರೆಗೆ ಒಂದು ತಿಂಗಳ ಕಾಲ ‘ಸೇವಾ ಸಂಕಲ್ಪ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಅಕ್ರಮ ಪಂಪ್‌ಸೆಟ್ ತೆರವುಗೊಳಿಸಿ, ಶಿರಾಡೋಣ–ಹಾಲಹಳ್ಳಿ ರೈತರಿಗೆ ನೀರು ಒದಗಿಸಲು ಆಗ್ರಹ