ತುಮಕೂರು : ಕನಕಲಬಂಡೆ ವೆಂಕಟೇಶ್ ನಕ್ಸಲ್ ಅಲ್ಲ..
ಆತನಿಗೆ ನಕ್ಸಲ್ ಚಟುವಟಿಕೆ, ನಕ್ಸಲ್ ಸಂಪರ್ಕ, ಸಂಬಂಧ ಇಲ್ಲ..
ಆತನ ಮೇಲೆ ಆಂಧ್ರ ಮತ್ತು ಕರ್ನಾಟಕದಲ್ಲಿ ಒಟ್ಟು13 ಪ್ರಕರಣಗಳಿವೆ..
ಆಂಧ್ರದ ಕಂಬದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಕೇಸ್ ಇದೆ.
ಒಂದು ಕೊಲೆ ಕೇಸ್ ನಲ್ಲಿ ಆರೋಪಿಯಾಗಿರುವ ವೆಂಟೇಶ್..
ಸ್ವಂತ ಅಕ್ಕನ ಗಂಡನನ್ನ ಕೊಲೆ ಮಾಡಿರುವ ವೆಂಕಟೇಶ್..
ದರೋಡೆ, ಬೆದರಿಕೆ ಪ್ರಕರಷಗಳಲ್ಲಿರುವ ವೆಂಕಟೇಶ್..
ನಕ್ಸಲ್ ಶಂಕಿತ ಕನಕಲಬಂಡೆ ವೆಂಕಟೇಶ್ ವಿರುದ್ಧ ಪಾವಗಡ ಪೊಲೀಸ್ ಠಾಣೆಯಲ್ಲಿ ಮೊಕದ್ದಮ್ಮೆ ಸಂಖ್ಯೆ: 254/2026, ಬಿ.ಎನ್.ಎಸ್-2023 ಕಲಂ: 62, 308(4), 351(2) ರೆ/ವಿ 3(5)) ಪ್ರಕರಣ ದಾಖಲಾಗಿತ್ತು.
ಈತ, ಖಚಿತ ಮಾಹಿತಿಯ ಮೇರೆಗೆ ದಿನಾಂಕ 15/09/2026 ರ ರಾತ್ರಿ ಕಡಮಲಕುಂಟೆ ಗ್ರಾಮದ ಹೊರವಲಯದ ಬೆಟ್ಟದಲ್ಲಿ ಅಡಗಿಕೊಂಡಿದ್ದಾಗ ವಿಶೇಷ ತಂಡದ ಕೈಗೆ ಸಿಕ್ಕಿಬಿದ್ದಿದ್ದಾನೆ.
ಐ.ಪಿ.ಎಸ್., ಹೆಚ್ಚುವರಿ ಎಸ್ಪಿಗಳಾದ ಸಿ.ಗೋಪಾಲ್, ಪುರುಷೋತ್ತಮ.ಎಂ.ಎಲ್. ಹಾಗೂ ಮಧುಗಿರಿ ಡಿ.ವೈ.ಎಸ್.ಪಿ ಮಂಜುನಾಥ್ ಬಿ. ರವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಕೆ. ಸುರೇಶ್ ಹಾಗೂ ವಿಶೇಷ ಸಿಬ್ಬಂದಿಯ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಆರೋಪಿಯನ್ನು ಬಂಧಿಸುವಲ್ಲಿ ಶ್ರಮಿಸಿದ ತನಿಖಾ ತಂಡದ ಕಾರ್ಯವನ್ನು ಎಸ್‌ಪಿ ಅಶೋಕ್.ಕೆ.ವಿ ಹಾಗೂ ಕೇಂದ್ರ ವಲಯ ಡಿ.ಐ.ಜಿ.ಪಿ ಎಸ್. ಗಿರೀಶ್ ರವರುಗಳು ಪ್ರಶಂಸಿಸಿದ್ದಾರೆ.
ವರದಿ : ಶಿವಾನಂದ


