LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಪೂಜೆ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: 11 ಆರೋಪಿಗಳು ಅರೆಸ್ಟ್

Advertisement

ಬಳ್ಳಾರಿ: ಬಡ ಹೆಣ್ಣು ಮಕ್ಕಳನ್ನು ಹಾಗೂ ಮೂಢನಂಬಿಕೆಗಳನ್ನು ನಂಬುವಂತಹ ಹೆಣ್ಣು ಮಕ್ಕಳನ್ನು ನಂಬಿಸಿ ಲಕ್ಷ್ಮೀ ಪೂಜೆ ಮಾಡಿ ಹಣದ ಹೊಳೆ ಹರಿಸುವುದಾಗಿ ಹೇಳಿ ಯುವತಿಯರನ್ನು ವಂಚಿಸಿ, ಲೈಂಗಿಕ ದೌರ್ಜನ್ಯ ಹಾಗೂ ಹೈಟೆಕ್ ವೇಶ್ಯಾವಾಟಿಕೆ ದಂಧೆಗೆಬಳಸಿಕೊಳ್ಳುತ್ತಿದ್ದ ಬೃಹತ್ ಅಂತರಾಜ್ಯ ಗ್ಯಾಂಗ್ ನ್ನು ಅಕ್ಕ ಪಡೆ ಪೊಲೀಸರು ಭೇದಿಸಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಅಕ್ಕ ಪಡೆ'ಯ ಮಹಿಳಾ ಪೊಲೀಸ್ ಸಿಬ್ಬಂದಿಯ ಎರಡು ತಿಂಗಳ ನಿರಂತರ ರಹಸ್ಯ ಕಾರ್ಯಾಚರಣೆಯ ಫಲವಾಗಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ.

ಆರ್ಥಿಕ ಸಂಕಷ್ಟದಲ್ಲಿರುವ ಮತ್ತು ಮೂಢನಂಬಿಕೆಗಳನ್ನು ನಂಬುವ ಅವಿವಾಹಿತ ಯುವತಿಯರನ್ನೇ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಸುಂದರವಾಗಿರುವ, ಕನಿಷ್ಠ 5 ಅಡಿ 6 ಇಂಚು ಎತ್ತರವಿರುವ ಕನ್ಯೆಯರು ವಿಶೇಷ ಲಕ್ಷ್ಮೀ ಪೂಜೆ ಮಾಡಿದರೆ ಹಣದ ಮಳೆ ಸುರಿಯುತ್ತದೆ" ಎಂದು ನಂಬಿಸಿ ಯುವತಿಯರ ಮನವೊಲಿಸಲಾಗುತ್ತಿತ್ತು. ಆರಂಭದಲ್ಲಿ ಯುವತಿಯರ ಬಲಗೈ ಮತ್ತು ಬಲಗಾಲಿನ ಪ್ರತ್ಯೇಕ ಫೋಟೋಗಳನ್ನು ಪಡೆಯುತ್ತಿದ್ದ ಆರೋಪಿಗಳು, ಪೂಜೆಯಿಂದ ಬರುವ ಹಣದಲ್ಲಿ ಯುವತಿಗೆ, ಪೂಜೆ ಮಾಡುವ ಸ್ವಾಮೀಜಿಗೆ ಹಾಗೂ ಏಜೆಂಟ್‌ಗೆ ತಲಾ ಒಂದೊಂದು ಪಾಲು ಸಿಗುತ್ತದೆ ಎಂದು ಆಮಿಷವೊಡ್ಡುತ್ತಿದ್ದರು.

ಆದರೆ, ಪೂಜೆಯ ನೆಪದಲ್ಲಿ ಯುವತಿಯರನ್ನು ಕರೆಸಿಕೊಂಡು ಅವರ ಬೆತ್ತಲೆ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ವೇಶ್ಯಾವಾಟಿಕೆ ಮತ್ತು ಮಹಿಳಾ ಮಾರಾಟ ದಂಧೆಗೆ ಬಳಸಿಕೊಳ್ಳಲಾಗುತ್ತಿತ್ತು.

ಈ ದಂಧೆಯ ಕುರಿತು ಮಹಿಳೆಯೊಬ್ಬರು ನೀಡಿದ ಖಚಿತ ಮಾಹಿತಿ ಮೇರೆಗೆ ಬಳ್ಳಾರಿ ಪೊಲೀಸರು ವಿಶೇಷ ತಂಡ ರಚಿಸಿದ್ದರು. 'ಅಕ್ಕ ಪಡೆ'ಯ ಮಹಿಳಾ ಪೊಲೀಸರೇ ಬಡ ಮಹಿಳೆಯರ ಸೋಗಿನಲ್ಲಿ ಈ ಜಾಲದ ಸಂಪರ್ಕ ಬೆಳೆಸಿದ್ದರು.

ಸತತ ಎರಡು ತಿಂಗಳ ಕಾಲ ರಹಸ್ಯವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಗ್ಯಾಂಗ್ ನ ಸಂಪೂರ್ಣ ಮಾಹಿತಿ ಕಲೆಹಾಕಿ ದಾಳಿ ನಡೆಸುವ ಮೂಲಕ 11 ಆರೋಪಿಗಳನ್ನು ಬಂಧಿಸಿದ್ದಾರೆ.

ಬಳ್ಳಾರಿ, ಚಿಕ್ಕಮಗಳೂರು, ಮೈಸೂರು ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲಿ ಈ ಗ್ಯಾಂಗ್ ಸಕ್ರಿಯವಾಗಿತ್ತು.

ಈ ಜಾಲವು ಪೊಲೀಸರ ಕಣ್ಣುತಪ್ಪಿಸಲು 'ಮೀಡಿಯಾ', 'ಪೇಪರ್' ಸೇರಿದಂತೆ ಹಲವು ಕೋಡ್ ವರ್ಡ್‌ಗಳನ್ನು ಬಳಸಿ ವ್ಯವಹಾರ ನಡೆಸುತ್ತಿತ್ತು.

ಈ ಇಡೀ ದಂಧೆಯ ಸೂತ್ರಧಾರ ಎನ್ನಲಾದ ಸ್ವಾಮೀಜಿಯೊಬ್ಬ ಡಿಆರ್‌ಎ (DRA) ಎಂಬ ಕೋಡ್ ವರ್ಡ್ ಮೂಲಕ ವ್ಯವಹರಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸ್ವಾಮೀಜಿಯ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡ್ರಾದತ್ತ ಮುಖ ಮಾಡಿದ ಪಾಕಿಸ್ತಾನ- ಶ್ರೀಲಂಕಾ ಮೊದಲ ಟೆಸ್ಟ್ ಚುನಾವಣೆ ಮಾದರಿಯಲ್ಲಿ ಕಟ್ಟುನಿಟ್ಟಿನಲ್ಲಿ KPSC ಪರೀಕ್ಷೆ: ಸಿಎಂ ಘೋಷಣೆ ಪೂಜೆ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: 11 ಆರೋಪಿಗಳು ಅರೆಸ್ಟ್ಕೊಲೆಯಾದ ಮಹಿಳೆ ದಿಢೀರ್ ಪ್ರತ್ಯಕ್ಷ: ಪೊಲೀಸರ ಎಡವಟ್ಟಿಗೆ 2.5 ವರ್ಷ ಜೈಲು ಶಿಕ್ಷೆ ಅನುಭವಿಸಿದ ನಿರಪರಾಧಿ ವಿಎಒ ಪರೀಕ್ಷಾ ಅಕ್ರಮ: ನಾಲ್ವರು ಕಾನ್ಸ್‌ಟೆಬಲ್‌ಗಳು ಸಸ್ಪೆಂಡ್, ಪಿಎಸ್‌ಐ, ಸಿಪಿಐಗೆ ಸಂಕಷ್ಟ ಮಕ್ಕಳಾಗಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿ : ಚಾಕುವಿನಿಂದ ಇರಿದು ಕೊಂದ ಪತ್ನಿಬಾಗಲಕೋಟೆ ಜಿಲ್ಲೆಯ ಆರು ಪಟ್ಟಣ ಪಂಚಾಯತಿಗಳ ಮೇಲೆ ಲೋಕಾಯುಕ್ತ ದಾಳಿಡಿ.2ರಿಂದ ಬೆಳಗಾವಿ ಅಧಿವೇಶನ: 5,000ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆಬಂಗಾರದ ಬೆಲೆಯಲ್ಲಿ ಭಾರಿ ಕುಸಿತ : ಖರೀದಿಗೆ ಇದೇ ಬೆಸ್ಟ್ ಟೈಂ! ಭ್ರಷ್ಟಾಚಾರ ಆರೋಪ ಹೊತ್ತಿರುವ ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ: ದೂರು