LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

₹1.5 ಕೋಟಿ ಹವಲಾ ಹಣ ದರೋಡೆ ಆರೋಪ :   ಕಾನ್‌ಸ್ಟೇಬಲ್ ಅರೆಸ್ಟ್

Advertisement

ಉತ್ತರ ಕನ್ನಡ: ಬರೋಬ್ಬರಿ 1.15 ಕೋಟಿ ರೂಪಾಯಿಮೌಲ್ಯದ ಹವಾಲಾ ಹಣ ದರೋಡೆ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಲಾಕ್ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕಾರವಾರ ಟ್ರಾಫಿಕ್ ಠಾಣೆಯ ಕಾನ್‌ಸ್ಟೇಬಲ್ ಶ್ರೀಶೈಲ್ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ.ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಅಧಿಕೃತ ಮಾಹಿತಿಯನ್ನ ನಿರೀಕ್ಷಿಸಲಾಗಿದೆ.

ಹವಾಲಾ ಹಣ ಎನ್ನಲಾಗುತ್ತಿರುವ 1.15 ಕೋಟಿ ರೂಪಾಯಿ ಮೌಲ್ಯದ ಹಣವನ್ನು ದಾವಣಗೆರೆಯಿಂದ ಮಂಗಳೂರಿಗೆ ಸಾಗಿಸಲಾಗುತ್ತಿತ್ತು. ಸತ್ಯನಾರಾಯಣ ಅನ್ನೋ ಈ ಹಣವನ್ನು ಸಾಗಿಸುತ್ತಿದ್ದರು.

 ಈ ವಿಚಾರ ದುಷ್ಕರ್ಮಿಗಳ ಗ್ಯಾಂಗ್‌ಗೆ ಗೊತ್ತಾಗಿದೆ. ಮಾರ್ಗ ಮಧ್ಯೆ ಸತ್ಯನಾರಾಯಣ ಅವರನ್ನು ತಡೆದ ಗ್ಯಾಂಗ್, ಅವರ ಬಳಿಯಿದ್ದ 1.15 ಕೋಟಿ ರೂಪಾಯಿ ಲೂಟಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಬೆನ್ನಲ್ಲೇ ಸತ್ಯನಾರಾಯಣ ಅನ್ನೋರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ತನಿಖೆ ಕೈಗೆತ್ತಿಕೊಂಡ ಮಂಗಳೂರು ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ಪೊಲೀಸರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸತ್ಯನಾರಾಯಣ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ನಂತರ ಪ್ರಕರಣದ ಹಿಂದೆ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬನ ಪಾತ್ರ ಇರೋದು ಗೊತ್ತಾಗಿದೆ.

ಈ ಪ್ರಕರಣದಲ್ಲಿ ಆತನೇ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ಕಾರವಾರದ ಕಾನ್‌ಸ್ಟೇಬಲ್ ಎನ್ನಲಾಗುತ್ತಿರುವ ಶ್ರೀಶೈಲ್ ಸ್ಥಳೀಯ ಯುವಕರ ತಂಡವನ್ನು ಕಟ್ಟಿಕೊಂಡಿದ್ದ. ಅಂತೆಯೇ ಆ ಗ್ಯಾಂಗ್‌ನೊಂದಿಗೆ ದರೋಡೆಗೆ ಪ್ಲಾನ್ ರೂಪಿಸಿದ್ದ ಎನ್ನಲಾಗಿದೆ.

ಹಣ ದರೋಡೆಗಾಗಿ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಗಣೇಶ್ ಕೋಳಂಕರ್ ಎಂಬಾತನಿಗೆ ಈ ಕೃತ್ಯದ ಹೊಣೆ ನೀಡಲಾಗಿತ್ತು.

 ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಒಂದೊಂದೇ ಸುಳಿವು ಸಿಗುತ್ತ ಹೋದವು. ಕೊನೆಗೆ ಮಂಗಳೂರು ಪೊಲೀಸರು ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ ಎಂದು ತಿಳಿದುಬಂದಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
₹1.5 ಕೋಟಿ ಹವಲಾ ಹಣ ದರೋಡೆ ಆರೋಪ :   ಕಾನ್‌ಸ್ಟೇಬಲ್ ಅರೆಸ್ಟ್ಬರೋಬ್ಬರಿ 6.5ಕೆಜಿ ಚಿನ್ನ, 380 ಕ್ಯಾರೆಟ್ ವಜ್ರದಿಂದ ದೀಪಾವಳಿ ರಂಗೋಲಿ ಹಾಕಿದ ಮಾಲ್ರಾಜ್ಯದ ಅರ್ಹ ರೈತರಿಗೂ ಕನಿಷ್ಠ ₹5,000 ಬರ ಪರಿಹಾರ ಖಚಿತ : ಡಿಕೆ ಶಿವಕುಮಾರ್ ಸ್ಪಷ್ಟನೆ ನಾನು ಪ್ರಧಾನಿ ಆಗೋದು ರಾಹುಲ್, ಪ್ರಿಯಾಂಕಾಗೆ ಇಷ್ಟವಿರಲಿಲ್ಲ" : ಆತ್ಮಕಥನದಲ್ಲಿ ಬಹಿರಂಗಶಾಕ್ ಮೇಲೆ ಶಾಕ್ : ಪ್ರತಿ ಕ್ವಿಂಟಲ್ ಗೋಧಿ 600 ರಿಂದ 1000 ಏರಿಕೆ! ಸೇಹವಾಗ್ ಸೂಪರ್ ಶತಕ : ಭಾರತ ಕಿರಿಯರ ತಂಡಕ್ಕೆ ಸುಲಭ ಗೆಲುವು ಗುಲಾಬಿ ಹೂವಿನ ಗಿಡದ ಕೆಳಗೆ ಮಗುವಿನ ಅಂತ್ಯಕ್ರಿಯೆ: ಸೋನಿಯಾ ಆತ್ಮಕಥನದಲ್ಲಿ ಮನಕಲಕುವ ಸಂಗತಿ ಹೈಕೋರ್ಟ್ ಆದೇಶ ಪಾಲಿಸದೇ ನ್ಯಾಯಾಂಗ ನಿಂದನೆ: ಜಿಲ್ಲಾಧಿಕಾರಿಗೆ 6 ತಿಂಗಳು ಜೈಲು ಶಿಕ್ಷೆಪ್ರಯಾಣಿಕರಿಗೆ ಮತ್ತೊಂದು ಶಾಕ್: ಲಗೇಜ್ ದರ ದುಪ್ಪಟ್ಟು ಹೆಚ್ಚಳ, ಹೊಸ ದರಪಟ್ಟಿ ಇಲ್ಲಿದೆ ಗವಿಮಠದ ಜಾತ್ರೆಗೆ ಭರ್ಜರಿ ಸಿದ್ಧತೆ : ಕಟ್ಟಿಗೆ ಹೊತ್ತು ಶ್ರೀಗಳ ಕಾಯಕ ಸೇವೆ