LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News

ಬರೋಬ್ಬರಿ 6.5ಕೆಜಿ ಚಿನ್ನ, 380 ಕ್ಯಾರೆಟ್ ವಜ್ರದಿಂದ ದೀಪಾವಳಿ ರಂಗೋಲಿ ಹಾಕಿದ ಮಾಲ್

Advertisement

ಬರೋಬ್ಬರಿ 6.5 ಕೆಜಿ ಚಿನ್ನ ಹಾಗೂ 380 ಕ್ಯಾರೆಟ್ ಚಿನ್ನ ಬಳಸಿ ಈ ರಂಗೋಲಿ ಬಿಡಿಸಲಾಗಿದೆ. ಇಡೀ ರಂಗೋಲಿಯಲ್ಲಿ ಬಣ್ಣದ ಪುಡಿ, ಅಕ್ಕಿ ಹಿಟ್ಟು ಸೇರಿದಂತೆ ಸಾಂಪ್ರದಾಯಿಕ ರಂಗೋಲಿಗೆ ಬಳಸುವ ಯಾವುದೇ ಸಾಮಾಗ್ರಿ ಬಳಸಿಲ್ಲ. ಇದು ಅತ್ಯಂತ ದುಬಾರಿ ರಂಗೋಲಿ.

ಈ ರಂಗೋಲಿ ಹಾಕಿದ್ದು ಎಲ್ಲಿ

ಐಷಾರಾಮಿ ಜೀವನಶೈಲಿಗೆ ಜನಪ್ರಿಯಗೊಂಡಿರುವ ದುಬೈನಲ್ಲಿ ದೀಪಾವಳಿಗೆ ಹಾಕಿದ ರಂಗೋಲಿ ಇದು. ದುಬೈನ ಸಿಟಿ ಸೆಂಟರ್ ಡೇರಾ ಮಾಲ್‌ನಲ್ಲಿ ದೀಪಾಳಿ ಹಬ್ಬಕ್ಕೆ ರಂಗೋಲಿ ಹಾಕಲಾಗಿದೆ. 

ಅತೀ ಹೆಚ್ಚು ಭಾರತೀಯರು ಇರುವ ದುಬೈ ಸೇರಿದಂತೆ ಅರಬ್ ರಾಷ್ಟ್ರದಲ್ಲಿ ಭಾರತೀಯರು ದೀಪಾವಳಿ ಆಚರಿಸುತ್ತಾರೆ. ದೀಪಾವಳಿ ಹಬ್ಬಕ್ಕೆ ಭಾರತೀಯರು ಸೇರಿದಂತೆ ಎಲ್ಲರನ್ನು ಶಾಪಿಂಗ್ ಮಾಲ್‌ಗೆ ಆಕರ್ಷಿಸಲು ಕೋಟಿ ಕೋಟಿ ರೂಪಾಯಿ ಮೌಲ್ಯದ ರಂಗೋಲಿ ಹಾಕಲಾಗಿದೆ

ಏನಿದರ ವಿಶೇಷತೆ

ಸಿಟಿ ಸೆಂಟರ್ ದೇರಾ ಶಾಪಿಂಗ್ ಮಾಲ್‌ನಲ್ಲಿ ದಮಾಸ್ (ದುಬೈನ ಅತ್ಯಂತ ಜನಪ್ರಿಯ ಜ್ಯುವೆಲ್ಲರಿ ಶಾಪ್) ಹಾಗೂ ದುಬೈ ಫೆಸ್ಟಿವಲ್ ಹಾಗೂ ರಿಟೇಲ್ ಎಸ್ಟಾಬ್ಲಿಷ್‌ಮೆಂಟ್ ಜಂಟಿಯಾಗಿ ಈ ರಂಗೋಲಿ ಬಿಡಿಸಿದೆ .

213 ವಿಶೇಷ ಚಿನ್ನದ ಆಭರಬಣಗಳನ್ನು ಬಳಸಲಾಗಿದೆ. ಇದರ ತೂಕ ಒಟ್ಟು 6.5 ಕೆಜಿ. ಚಿನ್ನದ ಸರ, ಕುತ್ತಿಗೆ ಆಭರಣ, ಬಳೆ, ಪೆಂಡೆಂಟ್ ಸೇರಿದಂತೆ ಹಲವು ಚಿನ್ನದ ಆಭರಣಗಳನ್ನು ಈ ರಂಗೋಲಿಗೆ ಬಳಸಲಾಗಿದೆ. ದುಬಾರಿ ಬೆಲೆಯ 380 ಕ್ಯಾರೆಟ್ ವಜ್ರಗಳನ್ನು ಅಲಂಕಾರಕ್ಕಾಗಿ ಬಳಸಲಾಗಿದೆ.

16 ಗಂಟೆಗಳ ಪರಿಶ್ರಮ

ದುಬೈ ಸಿಟಿ ಸೆಂಟರ್ ದೇರಾ ಶಾಪಿಂಗ್ ಮಾಲ್ ಈ ಬಾರಿಯ ದೀಪಾವಳಿಗೆ ವಿಶೇಷ ರಂಗೋಲಿ ಬಿಡಿಸಲು ಮುಂದಾಗಿತ್ತು.

ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ರಂಗೋಲಿ ಎಲ್ಲರನ್ನು ಆಕರ್ಷಿಸುವಂತಿರಬೇಕು, ಇದು ದುಬೈ ಐಷಾರಾಮಿತನದ ಕನ್ನಡಿಯಾಗಿರಬೇಕು. 

ಜೊತೆಗೆ ಅದ್ಧೂರಿತನಕ್ಕೂ ಸಾಕ್ಷಿಯಾಗಬೇಕು ಎಂದು ಸೂಚನೆ ನೀಡಲಾಗಿತ್ತು. ಹೀಗಾಗಿ ದೀಪಾವಳಿ ರಂಗೋಲಿಯನ್ನು ವಜ್ರಾಭರಣಗಳ ಮೂಲಕ ಬಿಡಿಸಲು ಪ್ಲಾನ್ ಮಾಡಲಾಯಿತು. 10 ಕುಶಲಕರ್ಮಿಗಳು ನಿರಂತರ 16 ಗಂಟೆಗಳ ಶ್ರಮಿಸಿ ರಂಗೋಲಿ ಬಿಡಿಸಲಾಗಿದೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
₹1.5 ಕೋಟಿ ಹವಲಾ ಹಣ ದರೋಡೆ ಆರೋಪ :   ಕಾನ್‌ಸ್ಟೇಬಲ್ ಅರೆಸ್ಟ್ಬರೋಬ್ಬರಿ 6.5ಕೆಜಿ ಚಿನ್ನ, 380 ಕ್ಯಾರೆಟ್ ವಜ್ರದಿಂದ ದೀಪಾವಳಿ ರಂಗೋಲಿ ಹಾಕಿದ ಮಾಲ್ರಾಜ್ಯದ ಅರ್ಹ ರೈತರಿಗೂ ಕನಿಷ್ಠ ₹5,000 ಬರ ಪರಿಹಾರ ಖಚಿತ : ಡಿಕೆ ಶಿವಕುಮಾರ್ ಸ್ಪಷ್ಟನೆ ನಾನು ಪ್ರಧಾನಿ ಆಗೋದು ರಾಹುಲ್, ಪ್ರಿಯಾಂಕಾಗೆ ಇಷ್ಟವಿರಲಿಲ್ಲ" : ಆತ್ಮಕಥನದಲ್ಲಿ ಬಹಿರಂಗಶಾಕ್ ಮೇಲೆ ಶಾಕ್ : ಪ್ರತಿ ಕ್ವಿಂಟಲ್ ಗೋಧಿ 600 ರಿಂದ 1000 ಏರಿಕೆ! ಸೇಹವಾಗ್ ಸೂಪರ್ ಶತಕ : ಭಾರತ ಕಿರಿಯರ ತಂಡಕ್ಕೆ ಸುಲಭ ಗೆಲುವು ಗುಲಾಬಿ ಹೂವಿನ ಗಿಡದ ಕೆಳಗೆ ಮಗುವಿನ ಅಂತ್ಯಕ್ರಿಯೆ: ಸೋನಿಯಾ ಆತ್ಮಕಥನದಲ್ಲಿ ಮನಕಲಕುವ ಸಂಗತಿ ಹೈಕೋರ್ಟ್ ಆದೇಶ ಪಾಲಿಸದೇ ನ್ಯಾಯಾಂಗ ನಿಂದನೆ: ಜಿಲ್ಲಾಧಿಕಾರಿಗೆ 6 ತಿಂಗಳು ಜೈಲು ಶಿಕ್ಷೆಪ್ರಯಾಣಿಕರಿಗೆ ಮತ್ತೊಂದು ಶಾಕ್: ಲಗೇಜ್ ದರ ದುಪ್ಪಟ್ಟು ಹೆಚ್ಚಳ, ಹೊಸ ದರಪಟ್ಟಿ ಇಲ್ಲಿದೆ ಗವಿಮಠದ ಜಾತ್ರೆಗೆ ಭರ್ಜರಿ ಸಿದ್ಧತೆ : ಕಟ್ಟಿಗೆ ಹೊತ್ತು ಶ್ರೀಗಳ ಕಾಯಕ ಸೇವೆ