ನೇಪಾಳದ (Nepal) ಸೊಲುಖುಂಬು ಜಿಲ್ಲೆಯ ಫೆರಿಚೆ ಹೆಲಿಪ್ಯಾಡ್ನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಒಬ್ಬ ವಿದೇಶಿ ಪ್ರಜೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಈ ಸಂಪೂರ್ಣ ಅಪಘಾತದ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯವಾಗಿ ತೀವ್ರ ಆತಂಕ ಮೂಡಿಸಿದೆ.
ಮಂಗಳವಾರ ಬೆಳಿಗ್ಗೆ ಸುಮಾರು 8:11 ರ ಸುಮಾರಿಗೆ ಡೈನಾಸ್ಟಿ ಏರ್ ಮತ್ತು ಫಿಶ್ಟೇಲ್ ಏರ್ ಸಂಸ್ಥೆಗಳಿಗೆ ಸೇರಿದ ಎರಡು ಹೆಲಿಕಾಪ್ಟರ್ಗಳು ಫೆರಿಚೆ ಪ್ರದೇಶದಲ್ಲಿ ಏಕಕಾಲದಲ್ಲಿ ಭೂಸ್ಪರ್ಶ (ಲ್ಯಾಂಡಿಂಗ್) ಮಾಡಲು ಪ್ರಯತ್ನಿಸುತ್ತಿದ್ದವು.
ಈ ವೇಳೆ ಉಭಯ ಹೆಲಿಕಾಪ್ಟರ್ಗಳ ರೆಕ್ಕೆಗಳು (ರೋಟರ್ ಬ್ಲೇಡ್ಗಳು) ಪರಸ್ಪರ ಡಿಕ್ಕಿಹೊಡೆದಿವೆ. ಡಿಕ್ಕಿಯ ತೀವ್ರತೆಗೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಒಬ್ಬ ವಿದೇಶಿ ಪ್ರಜೆ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರ ನಿಖರವಾದ ಗುರುತುಗಳು ಇನ್ನುಷ್ಟೇ ಪತ್ತೆಯಾಗಬೇಕಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿಯ ಮಾಹಿತಿ ಅಧಿಕಾರಿಯಾದ ಪೊಲೀಸ್ ಇನ್ಸ್ಪೆಕ್ಟರ್ ಮೌಸಮ್ ತಮಾಂಗ್ ತಿಳಿಸಿದ್ದಾರೆ.


