ನೇಪಾಳ : ಕಳೆದ ಆಗಸ್ಟ್ ತಿಂಗಳ ಭೀಕರ ಪ್ರವಾಹದ ಕಹಿನೆನಪು ಮಾಸುವ ಮುನ್ನವೇ ಮತ್ತೊಂದು ದಿಢೀರ್ ಪ್ರವಾಹ ಕಾಣಿಸಿಕೊಂಡಿದ್ದು, ಜನತೆಯನ್ನು ಆತಂಕಕ್ಕೊಳಪಡಿಸಿದೆ.
ಗೋರ್ಖಾ ಜಿಲ್ಲೆಯಲ್ಲಿ ಹರಿಯುವ ಬುಧಿ ಗಂಡಕಿ ನದಿಯಲ್ಲಿ ಭಾನುವಾರ ಹಠಾತ್ ಪ್ರವಾಹ ಸಂಭವಿಸಿದ್ದು, ಭಾರೀ ಅನಾಹುತ ಉಂಟಾಗಿದೆ.
ನದಿಯ ರಭಸಕ್ಕೆ 15ಕ್ಕೂ ಹೆಚ್ಚು ಮನೆಗಳು, ಸೇತುವೆ ಹಾಗೂ ಎರಡು ಜಲವಿದ್ಯುತ್ ಯೋಜನೆಗಳ ಘಟಕಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಈ ದಿಢೀರ್ ಪ್ರವಾಹದಿಂದಾಗಿ ಸ್ಥಳದಲ್ಲಿ ತೀವ್ರ ಅವಾಂತರ ಸೃಷ್ಟಿಯಾಗಿದ್ದು, ಸುಮಾರು 50 ಮಂದಿಯನ್ನು ರಕ್ಷಿಸುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಆದರೆ, 10ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರ ಹುಡುಕಾಟ ಮುಂದುವರಿದಿದೆ. ಸ್ಥಳೀಯರ ಪ್ರಕಾರ, ಲೋಕ್ಷಾ ಮತ್ತು ಚುಮುಲಿಂಗ್ ನಡುವೆ ಗಂಡಕಿ ನದಿಯ ಉಪನದಿಯಾದ ಸ್ಯಾರ್‌ನಲ್ಲಿ ನೀರಿನ ಹರಿವಿಗೆ ತಡೆ ಉಂಟಾಗಿದ್ದರಿಂದ ಈ ದಿಢೀರ್ ಪ್ರವಾಹ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.


