LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News

ವಿಶ್ವಪ್ರಸಿದ್ಧ ಬ್ರಿಟಿಷ್ ಲೇಖಕ ಜೆಫ್ರಿ ಆಚರ್ ಇನ್ನಿಲ್ಲ 

Advertisement

ಲಂಡನ್: ವಿಶ್ವಪ್ರಸಿದ್ಧ ಬ್ರಿಟಿಷ್(UK) ಕಾದಂಬರಿಕಾರ (Writer) ಹಾಗೂ ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ಮಾಜಿ ಸಂಸದ ಜೆಫ್ರಿ ಆಚರ್ (Jeffrey Archer) (86) ಅವರು ‌ನಿಧನರಾಗಿದ್ದಾರೆ.

 ತಮ್ಮ ಬರವಣಿಗೆಯ ನಡುವೆಯೇ ಅವರು ತಮ್ಮ ನಿವಾಸದಲ್ಲಿ ಹಠಾತ್ತಾಗಿ ಹಾಗೂ ಪ್ರಶಾಂತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪ್ರಕಾಶನ ಸಂಸ್ಥೆಯಾದ ಹಾರ್ಪರ್ ಕಾಲಿನ್ಸ್ ತಿಳಿಸಿದೆ.

ಆಚರ್ ಅವರ ನಿಧನದ ಸುದ್ದಿ ಪ್ರಕಟವಾಗುತ್ತಿದ್ದಂತೆ ಸಾಹಿತ್ಯ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕಂಬನಿ ವ್ಯಕ್ತವಾಗಿದೆ.

ಕೃತಿಗಳ ಸಂಪಾದಕಿ ಕೇಟ್ ಎಲ್ಟನ್, ಜೆಫ್ರಿ ಆಚರ್ ಅವರನ್ನು "ಕಥೆ ಹೇಳುವುದರಲ್ಲಿ ಸಿದ್ಧಹಸ್ತ ಹಾಗೂ ಪ್ರಕಾಶಕರ ಪಾಲಿನ ಕನಸಿನ ಲೇಖಕ" ಎಂದು ಸ್ಮರಿಸಿದ್ದಾರೆ.

ತಮ್ಮ 50 ವರ್ಷಗಳ ಸುದೀರ್ಘ ಸಾಹಿತ್ಯ ಪಯಣದ ಕೊನೆಯ ಕಾದಂಬರಿ ಎಂದು ಬಣ್ಣಿಸಲಾಗಿದ್ದ "ಆಡಮ್ ಅಂಡ್ ಈವ್" ಬಿಡುಗಡೆಗೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ.

ಪ್ರಸ್ತುತ ವಾರದಲ್ಲಿ ನಡೆಯಲಿರುವ ಚೆಲ್ಟೆನ್‌ಹ್ಯಾಮ್ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ತಮ್ಮ ನೂತನ ಪುಸ್ತಕದ ಬಗ್ಗೆ ಚರ್ಚಿಸಲು ಅವರು ಯೋಜಿಸಿದ್ದರು.

ಭಾನುವಾರಷ್ಟೇ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಮಾನಿಗಳಿಗೆ ಪುಸ್ತಕಗಳ ಮೇಲೆ ಸಹಿ ಹಾಕಿ ಕೊಟ್ಟಿದ್ದರು. 2014ರಲ್ಲಿ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.

ಸಾಹಿತ್ಯ ಲೋಕದಲ್ಲಿ ಬ್ಲಾಕ್‌ಬಸ್ಟರ್ ಕ್ರಾಂತಿ

ತಮ್ಮ ವೆಬ್‌ಸೈಟ್‌ ಮಾಹಿತಿಯಂತೆ ಜೆಫ್ರಿ ಆಚರ್ ಬರೆದ ಕೃತಿಗಳು ಜಗತ್ತಿನಾದ್ಯಂತ 30 ಕೋಟಿಗೂ ಅಧಿಕ ಪ್ರತಿಗಳು ಮಾರಾಟವಾಗಿವೆ.

1969ರಲ್ಲಿ ತಮ್ಮ 29ನೇ ವಯಸ್ಸಿನಲ್ಲಿ ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿದ್ದಾಗ ಕನ್ಸರ್ವೇಟಿವ್ ಪಕ್ಷ ಸೇರಿ ಸಂಸದರಾಗಿ (ಎಂಪಿ) ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಆದರೆ 1974ರಲ್ಲಿ ಕೆನಡಾದ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿ ದಿವಾಳಿಯಾದ ಕಾರಣ ಅವರ ರಾಜಕೀಯ ಜೀವನಕ್ಕೆ ತಾತ್ಕಾಲಿಕ ತಡೆ ಬಿದ್ದಿತ್ತು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಯುಪಡೆ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ ಹಾಲಿನ ದರ ಏರಿಕೆ ಫಿಕ್ಸ್ : ಲೀಟರ್‌ಗೆ ₹8 ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ಸೌರವ್ ಗಂಗೂಲಿ ದೆಹಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಾಜ್ಯದಲ್ಲಿ ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಗಳಾಗಿವೆ: ಆರ್.ಅಶೋಕ್ ಕಿಡಿಅಯ್ಯೋ ಸಿಎಂ ತುಂಬಾ ಬ್ಯೂಸಿ, ನನ್ನ ಫೋನ್​​ಗೂ ಸಿಗಲ್ಲ : ಲಕ್ಷ್ಮಿ ಹೆಬ್ಬಾಳ್ಕರ್ ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತರಿಗೆ ಗ್ರೂಪ್ ಬಿ ಹುದ್ದೆ : ಜಿ. ಪರಮೇಶ್ವರ್ ಘೋಷಣೆಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದವರಿಗೆ 1 ಕೋಟಿ, ಬೆಳ್ಳಿ ಗೆದ್ದವರಿಗೆ ₹75 ಲಕ್ಷ ನಗದು : ಸಿಎಂ ಘೋಷಣೆ ನಾಯಕತ್ವ ಸ್ಥಾನದಿಂದ ಹಿಂದೆ ಸರಿದ ಹರಮನ್ ಪ್ರೀತ್ ಕೌರ್ ಪಾವಗಡದಲ್ಲಿ 'ದಳ-ಕಮಲ' ಜಂಟಿ ರಣಕಹಳೆ:ತಹಶೀಲ್ದಾರ್ ಕಚೇರಿಗೆ ಮನವಿ ಪತ್ರ ಕೊಡುವುದಕ್ಕೆ  ಜನಸಾಗರ!ನೈಜೀರಿಯಾದಲ್ಲಿ ಸೇನಾ ವಿಮಾನ ಪತನ : 32 ಮಂದಿ ಸಾವು