ನೈಜೀರಿಯಾ : ನೈಜೀರಿಯಾದ (Nigeria) ನೈಋತ್ಯ ಭಾಗದ ಒಂಡೋ ರಾಜ್ಯದಲ್ಲಿ 32 ಜನರನ್ನು ಹೊತ್ತೊಯ್ದು ಸಾಗುತ್ತಿದ್ದ ಮಿಲಿಟರಿ ವಿಮಾನವೊಂದು ಪತನ (plane crashe)ಗೊಂಡಿದ್ದು, ಸ್ಥಳದಲ್ಲಿ ತೀವ್ರ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ.
ಬೆನಿನ್‌ನಿಂದ ಲಾಗೋಸ್‌ಗೆ ತೆರಳುತ್ತಿದ್ದ ಈ ವಿಮಾನ ಮಾರ್ಗಮಧ್ಯೆ ಇದ್ದಕ್ಕಿದ್ದಂತೆ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು.
ತೀವ್ರ ಹುಡುಕಾಟದ ನಂತರ ಇಗ್ಬೊಕೋಡಾದ ನೌಕಾ ನೆಲೆ ಸಮೀಪ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ನಾಗರಿಕ ವಿಮಾನಯಾನ ಸಚಿವ ಫೆಸ್ಟಸ್ ಕೆಯಾಮೊ ಸೋಮವಾರ ತಿಳಿಸಿದ್ದಾರೆ.
ನೈಜೀರಿಯನ್ ವಾಯುಪಡೆಗೆ ಸೇರಿದ ಮಿಲಿಟರಿ ವಿಮಾನವು ನಿಯಮಿತ ಕಾರ್ಯಾಚರಣೆಯಲ್ಲಿದ್ದಾಗ ತಾಂತ್ರಿಕ ದೋಷ ಅಥವಾ ಪ್ರತಿಕೂಲ ವಾತಾವರಣದ ಕಾರಣದಿಂದ ನಿಯಂತ್ರಣ ತಪ್ಪಿ ನೆಲಕ್ಕುರುಳಿದೆ ಎನ್ನಲಾಗಿದೆ.
ವಿಮಾನದಲ್ಲಿದ್ದ ಸೈನಿಕರು ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 32 ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ವಿಮಾನ ಪತನಗೊಂಡ ರಭಸಕ್ಕೆ ಸ್ಫೋಟ ಸಂಭವಿಸಿದ್ದು, ಭಾರೀ ಪ್ರಮಾಣದಲ್ಲಿ ಬೆಂಕಿ ಮತ್ತು ಹೊಗೆ ಆವರಿಸಿಕೊಂಡಿತ್ತು.


