LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ನಾನು 100 ವರ್ಷ ಬದುಕಬೇಕು : ಸಿದ್ದರಾಮಯ್ಯ

Advertisement

ಮೈಸೂರು: “ಕನ್ನಡ ನಾಡಿನಲ್ಲಿಯೇ ಕನ್ನಡ ಭಾಷೆಯನ್ನು ಕಾಯುವ ಕೆಲಸ ಮತ್ತು ಕಾವಲು ಸಮಿತಿ ಇರುವುದು ಅತ್ಯಂತ ಬೇಸರದ ಸಂಗತಿ ಮತ್ತು ದುರ್ದೈವ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ನೂತನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

“ನಾನು ಸಾಹಿತಿಯಲ್ಲ, ಕೇವಲ ಸಾಹಿತ್ಯದ ಅಭಿಮಾನಿ. ನಾನು ಮೊದಲ ಬಾರಿ ಶಾಸಕನಾದಾಗ ನನಗೆ ಬೇಡ ಎಂದರೂ ‘ಕನ್ನಡ ಕಾವಲು ಸಮಿತಿ’ಯ ಮೊದಲ ಅಧ್ಯಕ್ಷ ಸ್ಥಾನವನ್ನು ಕೊಟ್ಟಿದ್ದರು. ಆ ಹುದ್ದೆಯನ್ನು ವಹಿಸಿಕೊಂಡು ಕೆಲಸ ಮಾಡಿದ್ದೆ” ಎಂದು ಸಿದ್ದರಾಮಯ್ಯ ತಮ್ಮ ಆರಂಭಿಕ ರಾಜಕೀಯ ದಿನಗಳನ್ನು ಸ್ಮರಿಸಿಕೊಂಡರು.

“ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ನೆರೆಯ ಯಾವ ರಾಜ್ಯಗಳಲ್ಲೂ ಅವರ ಭಾಷೆಯನ್ನು ಕಾಯಲು ಇಂತಹ ‘ಕಾವಲು ಸಮಿತಿ’ಗಳಿಲ್ಲ. ಆದರೆ, ನಮ್ಮ ಕರ್ನಾಟಕದಲ್ಲಿ ಮಾತ್ರ ಭಾಷೆಯನ್ನು ಕಾಯಲು ಸಮಿತಿ ಇರುವುದು ನಿಜಕ್ಕೂ ಆಲೋಚಿಸಬೇಕಾದ ಮತ್ತು ಬೇಸರ ತರಿಸುವ ವಿಚಾರ” ಎಂದು ಕಳವಳ ವ್ಯಕ್ತಪಡಿಸಿದರು.

 

ಕಾರ್ಯಕ್ರಮದಲ್ಲಿ ತಮ್ಮ ಆಯುಷ್ಯ ಹಾಗೂ ವೀರಪ್ಪ ಮೊಯ್ಲಿಯವರ ಸಾಹಿತ್ಯ ಸೇವೆ ಕುರಿತು ಮನಬಿಚ್ಚಿ ಮಾತನಾಡಿದ ಸಿದ್ದರಾಮಯ್ಯ, ನನಗೆ 100 ವರ್ಷ ಬದುಕಬೇಕು ಎಂಬ ಆಸೆಯಿದೆ.

ಆದರೆ, ಅದನ್ನು ಖಚಿತವಾಗಿ ಹೇಳಲು ಬರುವುದಿಲ್ಲ. ಏಕೆಂದರೆ ಜೀವಿತಾವಧಿ ಎಂಬುದು ನಮ್ಮ ಕೈಯಲ್ಲಿ ಇಲ್ಲ” ಎಂದರು. “ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ನೂರಷ್ಟೇ ಅಲ್ಲ, 120 ವರ್ಷಗಳ ಕಾಲ ಸಕ್ರಿಯವಾಗಿ ಬದುಕಲಿ. ಅವರ ಬೃಹತ್ ಸಾಹಿತ್ಯಿಕ ಕೊಡುಗೆಗೆ ‘ಜ್ಞಾನಪೀಠ’ ಪ್ರಶಸ್ತಿ ಗೌರವ ದೊರೆಯುವಂತಾಗಲಿ” ಎಂದು ಹಾರೈಸಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೊಲೆಯಾದ ಮಹಿಳೆ ದಿಢೀರ್ ಪ್ರತ್ಯಕ್ಷ: ಪೊಲೀಸರ ಎಡವಟ್ಟಿಗೆ 2.5 ವರ್ಷ ಜೈಲು ಶಿಕ್ಷೆ ಅನುಭವಿಸಿದ ನಿರಪರಾಧಿ ವಿಎಒ ಪರೀಕ್ಷಾ ಅಕ್ರಮ: ನಾಲ್ವರು ಕಾನ್ಸ್‌ಟೆಬಲ್‌ಗಳು ಸಸ್ಪೆಂಡ್, ಪಿಎಸ್‌ಐ, ಸಿಪಿಐಗೆ ಸಂಕಷ್ಟ ಮಕ್ಕಳಾಗಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿ : ಚಾಕುವಿನಿಂದ ಇರಿದು ಕೊಂದ ಪತ್ನಿಬಾಗಲಕೋಟೆ ಜಿಲ್ಲೆಯ ಆರು ಪಟ್ಟಣ ಪಂಚಾಯತಿಗಳ ಮೇಲೆ ಲೋಕಾಯುಕ್ತ ದಾಳಿಡಿ.2ರಿಂದ ಬೆಳಗಾವಿ ಅಧಿವೇಶನ: 5,000ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆಬಂಗಾರದ ಬೆಲೆಯಲ್ಲಿ ಭಾರಿ ಕುಸಿತ : ಖರೀದಿಗೆ ಇದೇ ಬೆಸ್ಟ್ ಟೈಂ! ಭ್ರಷ್ಟಾಚಾರ ಆರೋಪ ಹೊತ್ತಿರುವ ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ: ದೂರು ನಾಪತ್ತೆಯಾಗಿದ್ದ ಅಧಿಕಾರಿಗಳು ಶವವಾಗಿ ಪತ್ತೆ :ಉಗ್ರರ ದಾಳಿ ಶಂಕೆ ಪಾವಗಡ  ತಾಲ್ಲೂಕು ಆಡಳಿತವೇ.ನಾಚಿಕೆ ಆಗಲ್ವಾ.ಕಳ್ಳತನ ಪ್ರಕರಣ ರಾಜಿ ಮಾಡಿಸಲು 50 ಸಾವಿರ ರೂ. ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಪೊಲೀಸ್ ಸಿಬ್ಬಂದಿ