ಪಾವಗಡ :: ಪಾವಗಡ ತಾಲ್ಲೂಕು ಆಡಳಿತಕ್ಕೆ ಜನರ ಜೀವದ ಬೆಲೆನೇ ಇಲ್ವಾ.ಏಕಶಿಲಾ ದಿನಪತ್ರಿಕೆ. ಬಿವಿ5 ನ್ಯೂಸ್ ಚಾನೆಲ್. ರಾಮನಗರ ನ್ಯೂಸ್ ಪತ್ರಿಕೆ ಮಾಧ್ಯಮ ಮತ್ತು ದಿನಪತ್ರಿಕೆಗಳಲ್ಲಿ ದೊಡ್ಡದಾಗಿ ಸುದ್ದಿ ಬಂದಿದೆ. ಆಸ್ಪತ್ರೆ ಮುಂದೆ ಪಟಾಕಿ ಅಂಗಡಿ, ರೋಗಿಗಳ ಜೀವದ ಜೊತೆ ಚೆಲ್ಲಾಟ ಅಂತ ಇಡೀ ಪಾವಗಡ ತಾಲ್ಲೂಕಿಗೆ ಗೊತ್ತಾಗಿದೆ. ಆದರೂ ತಾಲ್ಲೂಕು ಆಡಳಿತದ ಅಧಿಕಾರಿಗಳು ಒಂದೇ ಒಂದು ಹೆಜ್ಜೆ ಇಟ್ಟಿಲ್ಲ.
ಸುದ್ದಿ ಮಾಡಿದ್ರೂ ಅಧಿಕಾರಿಗಳಿಗೆ ಕೇರ್ ಇಲ್ಲ.ಪತ್ರಿಕೆಗಳಲ್ಲಿ. ಚಾನೆಲ್ ಗಳಲ್ಲಿ ಸುದ್ದಿ ಬಂದರೂ ಅಧಿಕಾರಿಗಳಿಗೆ ಕೇರ್ ಇಲ್ಲ. ಸುದ್ದಿ ಮಾಡಿದವರನ್ನು ಕರೆದು ವಿಚಾರಿಸೋದಿಲ್ಲ. ಸ್ಥಳಕ್ಕೆ ಬಂದು ನೋಡೋದಿಲ್ಲ ಒಂದು ಅಂಗಡಿನೂ ತೆರವು ಮಾಡೋದಿಲ್ಲ. ಜನರು ಎಷ್ಟೇ ಹೇಳಿದ್ರೂ ಅಧಿಕಾರಿಗಳು ಕಿವಿ ಮುಚ್ಚಿಕೊಂಡಿದ್ದಾರೆ.
ಸಾರ್ವಜನಿಕರ ನೇರ ಪ್ರಶ್ನೆಗಳು:
1 ತಹಶೀಲ್ದಾರ್ ಅವರೇ. ನೀವು ಕುರ್ಚಿಯಲ್ಲಿ ಕೂತು ಏನು ಮಾಡ್ತಿದ್ದೀರಾ? ಸುದ್ದಿ ನೋಡಿಲ್ವಾ.
2 ಪುರಸಭೆ ಚೀಫ್ ಆಫೀಸ ಅವರೇ.ಆಸ್ಪತ್ರೆ ಮುಂದೆ ಅಂಗಡಿಗೆ NOC ಕೊಟ್ಟಿದ್ದು ಯಾರು.
3 ಪೊಲೀಸ್ ಅವರೇ, ಕಾನೂನು ನಿಮ್ಮ ಕೈಯಲ್ಲಿ ಇದ್ದೂ ಯಾಕೆ ಸುಮ್ಮನಿದ್ದೀರಾ.
4 ಆರೋಗ್ಯ ಇಲಾಖೆ ಅವರೇ, ರೋಗಿಗಳು ಸತ್ತರೆ ಹೊಣೆ ಯಾರು.
ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡುತ್ತಿದ್ದರು :
ಇದು ನಿರ್ಲಕ್ಷ್ಯ ಅಲ್ಲ. ಆಸ್ಪತ್ರೆ ಮುಂದೆ ಬೆಂಕಿ ಇಟ್ಟು ಜನರ ಜೀವದ ಜೊತೆ ಆಟ ಆಡ್ತಿದ್ದಾರೆ. ಅಧಿಕಾರಿಗಳು ಪಟಾಕಿ ಮಾಲೀಕರ ಜೊತೆ ಶಾಮಿಲು ಆಗಿದ್ದಾರೆ ಅನ್ನೋ ಅನುಮಾನ ನಮಗೆ ಕಾಡುತ್ತಿದೆ. ಇಲ್ಲಾಂದ್ರೆ ಇಷ್ಟು ಸುದ್ದಿ ಬಂದ್ಮೇಲೂ ಒಬ್ಬ ಅಧಿಕಾರಿನೂ ಯಾಕೆ ಬರಲ್ಲ. ಒಂದೇ ಅಂಗಡಿನೂ ಯಾಕೆ ತೆರವು ಆಗಲ್ಲ
ಇನ್ಮುಂದೆ ನಾವು ಸುಮ್ಮನಿರಲ್ಲ. ತಾಲ್ಲೂಕು ಆಡಳಿತದ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಜಿಲ್ಲಾ ವಾರ್ ಇಲಾಖೆಗಳ ಅಧಿಕಾರಿಗಳಿಗೆ ದೂರು ಕೊಡ್ತೀವಿ ಸಾರ್ವಜನಿಕರ ಒತ್ತಾಯ ಹೇಳುತ್ತಿದ್ದಾರೆ.
1 ಪಟಾಕಿ ಅಂಗಡಿಗಳನ್ನು ಇವತ್ತೇ ತೆರವು ಮಾಡಿಸಿ
2 ಅನುಮತಿ ಕೊಟ್ಟ ಅಧಿಕಾರಿಗಳ ವಿರುದ್ಧ ತನಿಖೆ ಮಾಡಿ, ಕಠಿಣ ಕ್ರಮ ತಗೊಳ್ಳಿ.
3 ಆಸ್ಪತ್ರೆ ಮುಂದೆ ಪಟಾಕಿ ಅಂಗಡಿ ಹಾಕಿದ ಮಾಲೀಕರ ಮೇಲೆ ಕಾನೂನು ಕ್ರಮ ತಗೊಳ್ಳಿ.
ಅಂತಿಮ ಎಚ್ಚರಿಕೆ.
24 ಗಂಟೆಯೊಳಗೆ ಕ್ರಮ ಆಗದಿದ್ದರೆ. ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ದೂರು ಕೊಡ್ತೀವಿ ಅಂತ ಸಾರ್ವಜನಿಕರು ಹೇಳಿದ್ದಾರೆ.
ವರದಿ: ಶಿವಾನಂದ ಪಾವಗಡ


