ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್‌ಗಳಲ್ಲಿ ಲಗೇಜು ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ನಿಗಮವು ತೆರೆ ಎಳೆದಿದೆ. ಇಂದು ಲಗೇಜು ಶುಲ್ಕಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಸುತ್ತೋಲೆಯನ್ನು ಹೊರಡಿಸಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ನಿಗಮ, ದಿನಾಂಕ ನವೆಂಬರ್ 7ರಿಂದ ಅನ್ವಯವಾಗುವಂತೆ ಜಾರಿಗೆ ತರಲಾದ ಬಸ್ ಪ್ರಯಾಣ ದರ ಏರಿಕೆಯ (ಶೇ. 23) ಸಂದರ್ಭದಲ್ಲಿಯೇ, ಬಸ್ ಪಾಸ್ ಹಾಗೂ ಲಗೇಜು ದರಗಳ ಪರಿಷ್ಕರಣೆಯನ್ನು ಕೂಡ ಏಕಕಾಲದಲ್ಲಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದೆ.
20 ಕೆ.ಜಿ. ವರೆಗೆ ಯಾವುದೇ ಶುಲ್ಕವಿಲ್ಲ:
ಪ್ರಯಾಣಿಕರ ಹಿತದೃಷ್ಟಿಯಿಂದ ಈ ಹಿಂದಿನ ನಿಯಮಗಳೇ ಮುಂದುವರಿಯಲಿದ್ದು, ಪ್ರತಿಯೊಬ್ಬ ಪ್ರಯಾಣಿಕರು ತಮ್ಮೊಂದಿಗೆ ಕೊಂಡೊಯ್ಯುವ 20 ಕೆ.ಜಿ. ವರೆಗಿನ ವೈಯಕ್ತಿಕ ಲಗೇಜಿಗೆ ಯಾವುದೇ ಶುಲ್ಕ ಇರುವುದಿಲ್ಲ. ನಿಗದಿತ 20 ಕೆ.ಜಿ. ಮಿತಿಗಿಂತ ಹೆಚ್ಚಿನ ತೂಕದ ಹೆಚ್ಚುವರಿ ಲಗೇಜಿಗೆ ಮಾತ್ರ ಪರಿಷ್ಕೃತ ನಿಯಮಾವಳಿ ಪ್ರಕಾರ ಶುಲ್ಕ ವಿಧಿಸಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ.


