Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್.ಐ.ಆರ್ ಯಶಸ್ವಿಯಾದರೆ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ : ಸಚ್ಚಿದಾನಂದ ಮೂರ್ತಿ

Advertisement

ತುರುವೇಕೆರೆ : ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಮೂವತ್ತು ದಿನಗಳ ಕಾಲ ಬಿಜೆಪಿ ಕಾರ್ಯಕರ್ತರು ಸಕ್ರಿಯವಾಗಿ ಶ್ರಮಿಸಿದರೆ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನೂರಕ್ಕೆ ನೂರರಷ್ಟು ಖಚಿತ ಎಂದು ರಾಜ್ಯ ಬಿಜೆಪಿ ಮುಖಂಡ ಸಚ್ಚಿದಾನಂದ ಮೂರ್ತಿ ತಿಳಿಸಿದರು.

ಪಟ್ಟಣದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ಬಿ.ಎಲ್.ಎ 2 ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿರುವ ಮತಗಳ ಬಗ್ಗೆ ತಿಳಿದ ಬಿ.ಎಲ್.ಎ 2 ಗಳು ಅಲ್ಲಿನ ಬಿ.ಎಲ್.ಒ ಸಂಪರ್ಕ ಬೆಳೆಸಿ 2002 ಮತ್ತು 2026 ರ ಎರಡೂ ಮತಪಟ್ಟಿ ಪಡೆದು ತಮ್ಮ ಮತದಾರರ ಇರುವಿಕೆ, ಹೊಸ ಮತದಾರರು, ಮೃತಪಟ್ಟವರು, ಊರು ಬಿಟ್ಟವರು ಸೇರಿದಂತೆ ಎಲ್ಲವನ್ನೂ ಪರಿಶೀಲಿಸಿ ಅನರ್ಹರ ಸೇರ್ಪಡೆ ತಡೆದು, ಪರಿಷ್ಕರಣೆ ಅರ್ಜಿಯನ್ನು ಮತದಾರರಿಂದ ಭರ್ತಿ ಮಾಡಿಸಿ ಅಗತ್ಯ ದಾಖಲೆಗಳೊಂದಿಗೆ ಬಿ.ಎಲ್.ಒ ಗೆ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್.) ಗೆ ಸಹಕರಿಸಿಬೇಕು. ಹೀಗೇ ಕೇವಲ ಮೂವತ್ತು ದಿನಗಳು ಸಕ್ರಿಯವಾಗಿ ಶ್ರಮಿಸಿದರೆ, ಸಮರ್ಪಕವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆದರೆ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂಬುದನ್ನು ಕಾರ್ಯಕರ್ತರು ಮರೆಯಬಾರದು ಎಂದರು. 

ಬಿಜೆಪಿ ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ, ದೇಶದಲ್ಲಿ ವಿರೋಧ ಪಕ್ಷಗಳ ವಿರೋಧದ ನಡುವೆಯೂ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್.) ಗೆ ದಿಟ್ಟ ಹೆಜ್ಜೆ ಇರಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ಅನ್ಯ ದೇಶದ ಅಕ್ರಮ ವಲಸಿಗರು ನಮ್ಮ ದೇಶದ ಮತದಾನದ ಹಕ್ಕನ್ನು ಪಡೆದಿದ್ದರು. ದೇಶದ ಭದ್ರತೆಯ ದೃಷ್ಟಿಯಿಂದ ಇದನ್ನು ಪರಿಷ್ಕರಿಸಲು ಸರ್ಕಾರ ಮುಂದಾಗಿದೆ. ಕಳೆದ 24 ವರ್ಷಗಳಿಂದ ಮತದಾರರ ಪಟ್ಟಿ ಪರಿಷ್ಕರಣೆಯಾಗಿರಲಿಲ್ಲ. ಎಸ್.ಐ.ಆರ್. ಆದರೆ ನಮಗೆ ಉಳಿಗಾಲವಿಲ್ಲ ಎಂಬ ಆತಂಕ ವಿರೋಧ ಪಕ್ಷಕ್ಕೆ ಕಾಡುತ್ತಿದೆ. ಈ ಕಾರಣಕ್ಕೆ ವಿರೋಧಿಸುತ್ತಿವೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಈಗಾಗಲೇ ದೇಶದಲ್ಲಿ ಕೋಟ್ಯಾಂತರ ಅಕ್ರಮ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದಾಗಿ ಎಲ್ಲೆಡೆ ಬಿಜೆಪಿ ಭರ್ಜರಿ ಜಯಸಾಧಿಸಲು ಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ತಾಲ್ಲೂಕಿನಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಮರ್ಪಕ ಹಾಗೂ ಸಕ್ರಿಯವಾಗಿ ಎಸ್.ಐ.ಆರ್. ಗೆ ಸಹಕರಿಸಬೇಕೆಂದರು. 

news_1782469162_1_596.webp

 

ರಾಜ್ಯ ಮುಖಂಡ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಯಶಸ್ವಿಯಾದರೆ ಶೇ.75ರಷ್ಟು ನಮ್ಮ ಚುನಾವಣಾ ಕಾರ್ಯ ಮುಗಿದಂತೆ ಎಂದೇ ಕಾರ್ಯಕರ್ತರು ಭಾವಿಸಿ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಪಕ್ಷದಿಂದ ನೇಮಕಗೊಂಡಿರುವ ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿನ ಬಿ.ಎಲ್.ಒ ಗೆ ಪರಿಷ್ಕರಣಾ ಕಾರ್ಯದಲ್ಲಿ ಅಗತ್ಯ ಸಹಕಾರ ನೀಡಿ. ಮುಂಬರುವ 2028 ರ ವಿಧಾನಸಭಾ ಚುನಾವಣೆಯಲ್ಲಿ ಮಸಾಲಾ ಜಯರಾಮ್ ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಮತದಾರರ ಪಟ್ಟಿ ಪರಿಷ್ಕರಣೆ ಅತ್ಯಂತ ಮಹತ್ವದ್ದಾಗಿದೆ ಎಂದರು. 

ಪ್ರತಿ ತಿಂಗಳ ಕೊನೆಯ ಭಾನುವಾರ ರಾತ್ರಿ 11 ಗಂಟೆಗೆ ಬರುವ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಅನ್ನು ಪಕ್ಷ ಸಿದ್ದಪಡಿಸಿರುವ ಸರಳ್ ಆಪ್ ಮೂಲಕ ಕೇಳಿ ದೇಶದ ವಿದ್ಯಮಾನಗಳ ಬಗ್ಗೆ ಅರಿತುಕೊಳ್ಳಿ. ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸುವ ಮೂಲಕ ಬಿಜೆಪಿ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸುವ ಕಾರ್ಯದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ತರಹದ ಅನುಮಾನಗಳಿದ್ದಲ್ಲಿ ಪಕ್ಷದ ಅಧ್ಯಕ್ಷ, ಪದಾಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ವಿಫಲವಾಗಬಾರದು ಎಂದರು. 

ತುರುವೇಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಉಸ್ತುವಾರಿ ರುದ್ರೇಶ್, ಬಸವರಾಜ್, ತಾಲೂಕು ಉಪಾಧ್ಯಕ್ಷ ಸಂತೋಷ್ ಕಂಟ್ಲಿ, ಮಂಜೇಗೌಡ, ನವೀನ್ ಬಾಬು, ಸಿದ್ದಪ್ಪಾಜಿ, ಖಜಾಂಚಿ ಹರಿಕಾರನಹಳ್ಳಿ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಯೋಗಾನಂದ್, ಮಹೇಶ್, ಯುವಮೋರ್ಚಾ ಅಧ್ಯಕ್ಷ ತೀರ್ಥಕುಮಾರ್, ನಗರ ಘಟಕದ ಅಧ್ಯಕ್ಷ ರಾಘವೇಂದ್ರ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಅನಿತಾ ನಂಜುಂಡಯ್ಯ, ಎಂ.ಡಿ.ಮೂರ್ತಿ, ಕಡೇಹಳ್ಳಿ ಸಿದ್ದೇಗೌಡ, ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್, ನವೀನ್ ಸೇರಿದಂತೆ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್.ಐ.ಆರ್ ಯಶಸ್ವಿಯಾದರೆ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ : ಸಚ್ಚಿದಾನಂದ ಮೂರ್ತಿಮುಂಗಾರು ಮಳೆ ವಿಳಂಬ : ರಾಜ್ಯದ 122 ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಅನುಮತಿ ಇಲ್ಲದೇ ಖಾಸಗಿ ಫೋಟೋ - ವಿಡಿಯೋ ಶೇರ್ ಮಾಡಿದ್ದರೇ ತಕ್ಷಣವೇ ಎಫ್‌ಐಆರ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಎರಡನೇ ಪತ್ನಿಗೂ ಸಮಾನ ಪರಿಹಾರ : ಹೈಕೋರ್ಟ್ ಆದೇಶರಾಜ್ಯದಲ್ಲಿ 91,152 ಅನರ್ಹರ ಪಿಂಚಣಿ ತಕ್ಷಣದಿಂದಲೇ ರದ್ದು : ರಾಜ್ಯ ಸರ್ಕಾರ ಆದೇಶ ಮಾದಕ ವಸ್ತುಗಳ ವಿರುದ್ಧ ಪಾವಗಡದಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಇಂದು ನೂತನ ದಾಖಲೆ ಬರೆಯುವರೇ ವೈಭವ್ ಸೂರ್ಯವಂಶಿ?ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ದುರುಪಯೋಗ : ಟ್ರಸ್ಟಿ ಸೇರಿ 8 ಜನ ಅರೆಸ್ಟ್ಪಾಸ್‌ಪೋರ್ಟ್ ಶುಲ್ಕ ಭಾರಿ ಹೆಚ್ಚಳ : ಜುಲೈ 1 ರಿಂದಲೇ ನೂತನ ದರ ಜಾರಿಗೆವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಎಲ್ಲಾ ನಿರ್ಭಂಧ ತಕ್ಷಣದಿಂದಲೇ ತೆರವು