ಹುಬ್ಬಳ್ಳಿ : ಸಿಹಿತಿಂಡಿ ಮತ್ತು ಖಾರ ತಿನಿಸುಗಳ ಬ್ರಾಂಡ್ಗಳಲ್ಲಿ ಒಂದಾದ ‘ಇಂಡಿಯಾ ಸ್ವೀಟ್ ಹೌಸ್’ ಇಲ್ಲಿನ ಗೋಕುಲ ರಸ್ತೆಯಲ್ಲಿ, ಇನೋರ್ಬಿಟ್ ಮಾಲ್ ಎದುರು ತನ್ನ 58ನೇ ಮಳಿಗೆಯನ್ನು ಸಂಸ್ಥಾಪಕರಾದ ವಿಶ್ವನಾಥ್ ವಿ., ಶ್ವೇತಾ ರಾಜಶೇಖರ್ ಮತ್ತು ರಾಜೇಶ್ ಮೆಹ್ತಾ ಹಾಗೂ ಕಂಪನಿಯ ನಾಯಕತ್ವ ತಂಡದವರ ಸಮ್ಮುಖ ದಲ್ಲಿ ಕನ್ನಡ ನಟಿ ಅಮೂಲ್ಯ ಮತ್ತು ಖ್ಯಾತ ಕನ್ನಡ ನಟ ಸಿಹಿ ಕಹಿ ಚಂದ್ರು ಮಳಿಗೆಯನ್ನು ಉದ್ಘಾಟಿಸಿದರು.
ಒಂದೇ ಒಂದು ಮಳಿಗೆಯಿಂದ 58 ಮಳಿಗೆಗಳವರೆಗೆ 2021ರಲ್ಲಿ ಸ್ಥಾಪನೆಯಾದ ‘ಇಂಡಿಯಾ ಸ್ವೀಟ್ ಹೌಸ್’ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ತನ್ನ ಮೊದಲ ಮಳಿಗೆಯೊಂದಿಗೆ ತನ್ನ ಪಯಣ ವನ್ನು ಆರಂಭಿಸಿತು. ಅಂದಿನಿಂದ, ಈ ಬ್ರ್ಯಾಂಡ್ ವೇಗವಾಗಿ ವಿಸ್ತರಸುತ್ತಾ, ಪ್ರತಿ ತಿಂಗಳು ಸರಾಸರಿ ಒಂದು ಹೊಸ ಮಳಿಗೆ ತೆರೆಯುವ ಮೂಲಕ ಗಮನಾರ್ಹ ಪ್ರಗತಿ ಸಾಧಿಸಿದೆ.
ಪ್ರಸ್ತುತ 58 ಮಳಿಗೆಗಳ ಹೊಂದಿರುವ ‘ಇಂಡಿಯಾ ಸ್ವೀಟ್ ಹೌಸ್’, ರಾಜ್ಯಾದ್ಯಂತ ತನ್ನ ಬಲವಾದ ಅಸ್ತಿತ್ವವನ್ನು ಕಂಡುಕೊಂಡಿದೆ. ಇದೀಗ ದಕ್ಷಿಣ ಭಾರತದಾದ್ಯಂತ ತನ್ನ ಮುಂದಿನ ಹಂತದ ವಿಸ್ತರಣೆಗೆ ಸಜ್ಜಾಗುತ್ತಿದೆ.
ಕರ್ನಾಟಕದ ಗಡಿ ದಾಟಿ ವಿಸ್ತರಣೆ: “2021ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಮ್ಮ ಮೊದಲ ಮಳಿಗೆ ಪ್ರಾರಂಭಿಸಿದಾಗಿನಿಂದ, ಭಾರತದ ವೈವಿಧ್ಯಮಯ ಸಿಹಿತಿಂಡಿ ಸಂಪ್ರದಾಯಗಳನ್ನು ಒಂದೇ ಸೂರಿನಡಿ ತರುವುದು ನಮ್ಮ ದೃಷ್ಟಿಕೋನವಾಗಿದೆ. ಇಂದು ಕರ್ನಾಟಕದಾದ್ಯಂತ 58 ಮಳಿಗೆಗಳನ್ನು ಹೊಂದಿರುವ ನಾವು, ಮುಂಬರುವ ಖಿ1 ಃIಂಐ (ಬೆಂಗಳೂರು ವಿಮಾನ ನಿಲ್ದಾಣ) ಮಳಿಗೆ ಹಾಗೂ ಡಿಸೆಂಬರ್ 2026ರಲ್ಲಿ ತೆರೆಯಲಿರುವ ತೆಲಂಗಾಣದ ಮೂರು ಮಳಿಗೆಗಳೊಂದಿಗೆ (ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿರುವ 7,000 ಚದರ ಅಡಿಯ ಪ್ರಮುಖ ‘ಎಕ್ಸ್ಪೀರಿಯೆನ್ಸ್ ಸೆಂಟರ್’ ಸೇರಿದಂತೆ) ಮತ್ತಷ್ಟು ವಿಸ್ತರಿಸಲು ಉತ್ಸುಕರಾಗಿದ್ದೇವೆ. ಮಾರ್ಚ್ 2027ರ ವೇಳೆಗೆ ಚೆನ್ನೈ ನಮ್ಮ ಮುಂದಿನ ಗುರಿಯಾಗಿದೆ.
ನಾವು ಬೆಳೆಯುತ್ತಿದ್ದಂತೆ, ನಮ್ಮ ಬದ್ಧತೆಯಲ್ಲೂ ಬದಲಾವಣೆಯಾಗಿಲ್ಲ ಗುಣಮಟ್ಟ ಮತ್ತು ರುಚಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಅತ್ಯುತ್ತಮ ಉತ್ಪನ್ನಗಳನ್ನು ಒದಗಿಸುವುದು.”
ವರದಿ:ಸುಧೀರ್ ಕುಲಕರ್ಣಿ


