ಬೆಳಗಾವಿ: ಜಿಲ್ಲೆ ಖಾನಾಪೂರ ತಾಲೂಕಿನ ಭೂರಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಾಸ್ಕೇನಟ್ಟಿ ಗ್ರಾಮದಲ್ಲಿ ಸೋಮವಾರದಂದು ವಿಪರಿತ ಗಾಳಿ ಹಾಗೂ ಒಂದು ಗಂಟೆ ಧಾರಾಕಾರ ಸುರಿದ ಮಳೆಗೆ ಸುಮಾರು 9 ರಿಂದ ಹತ್ತು ಮನೆಗಳ ಮೇಲಚಾವಣಿ ಹಾರಿ ಹೋಗಿ ಬಡ ಕುಟುಂಬಗಳ ಬದುಕು ಬೀದಿಗೆ ಬಿದ್ದಿವೆ.
[video width="848" height="480" mp4="https://bharathvaibhav.com/wp-content/uploads/2025/04/WhatsApp-Video-2025-04-22-at-3.35.10-PM-1.mp4"][/video]
ಗಾಳಿಯ ರಬಸಕ್ಕೆ ಮೇಲಚಾವಣಿಗಳು ಬಿದ್ದು ಕೆಲವು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ ಯಾವದೆ ಪ್ರಾಣಹಾನಿ ಸಂಭವಿಸಿಲ್ಲಾ ಮನೆಯಲ್ಲಿದ್ದ ಸಾಕಷ್ಟು ದವಸ ಧಾನ್ಯಗಳು ನೀರುಪಾಲಾಗಿವೆ ಈ ಘಟನೆಯಿಂದ ಕಂಗಾಲಾದ ಜನರು ಮಾನ್ಯ ತಹಸೀಲ್ದಾರ್ ಅವರು ಪ್ರಕೃತಿ ವಿಕೋಪದಡಿ ಹಾನಿಗೋಳಗಾದ ಕುಟುಂಬಗಳಿಗೆ ನೀಡುವ ಪರಿಹಾರ ಹೆಚ್ಚಿಸಬೇಕೆಂದು ಆಗ್ರಹಿಸಿದ್ದಾರೆ
ವರದಿ: ಡಾ ರಾಜು ಮೋರೆ ಖಾನಾಪುರ

