LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬೆಳಗಾವಿ ರೈತರ ಜಮೀನು ಲೂಟಿ

Advertisement
ಬೆಳಗಾವಿಯಲ್ಲಿ ಅನ್ನದಾತನಿಗೆ ಬಿಗ್ ಶಾಕ್

​2 ವರ್ಷದ ಅಗ್ರಿಮೆಂಟ್... 20 ವರ್ಷಕ್ಕೆ ಎಡಿಟ್

​ಜಯ ಕರ್ನಾಟಕ ಸಂಘಟನೆಯಿಂದ ಭಾರಿ ಸ್ಫೋಟ

ಬೆಳಗಾವಿ :ಜಿಲ್ಲೆಯ ಖಾನಾಪುರದಲ್ಲಿ ಅನ್ನದಾತನಿಗೆ ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸವಾಗಿದೆ! ಮುಗ್ಧ ರೈತರ ಅನಕ್ಷರತೆಯನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಅವರ ಬದುಕಿನ ಆಧಾರವಾಗಿದ್ದ ಜಮೀನನ್ನೇ ಕಬಳಿಸಲು ಸ್ಕೆಚ್ ಹಾಕಿದ್ದಾರೆ. ಕೇವಲ 2 ವರ್ಷಕ್ಕೆ ಮಾಡಿಕೊಂಡಿದ್ದ ಕರಾರು ಪತ್ರ ಈಗ 20 ವರ್ಷಕ್ಕೆ ಬದಲಾಗಿದೆ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್."
​ ತೀರ್ಥಕುಂಡೆ ಗ್ರಾಮದ ಜಮೀನು, ಸಂತ್ರಸ್ತ ರೈತರು ಮತ್ತು ಜಯ ಕರ್ನಾಟಕ ಸಂಘಟನೆಯ ಪ್ರತಿಭಟನೆ/ಮನವಿ ಸಲ್ಲಿಸಿದರು "ಇವರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ತೀರ್ಥಕುಂಡೆ ಗ್ರಾಮದ ತಾತೋಬಾ ವಿಠಲ್ ಖಾಮಕರ್ ಮತ್ತು ತುಕಾರಾಮ್ ವಿಠಲ್ ಖಾಮಕರ್. ಈ ರೈತರು ತಮ್ಮ 3 ಎಕರೆ ಜಮೀನನ್ನು ರಾಘವೇಂದ್ರ ರಮೇಶ್ ನಾಯ್ ಎಂಬ ವ್ಯಕ್ತಿಗೆ 15 ಲಕ್ಷ ರೂಪಾಯಿ ಬದಲಿಗೆ ಕೇವಲ 2 ವರ್ಷಗಳ ಕಾಲ ಕರಾರು ಮಾಡಿಕೊಟ್ಟಿದ್ದರು. ಆದರೆ ಇಂದು ಅದೇ ಜಮೀನು ಅವರ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ. ಏಕೆಂದರೆ, ಆ 2 ವರ್ಷದ ಅವಧಿಯನ್ನು ಆರೋಪಿ ರಾಘವೇಂದ್ರ ಎಂಬಾತ ದಾಖಲೆಗಳಲ್ಲಿ ಅಕ್ರಮವಾಗಿ ತಿದ್ದುಪಡಿ ಮಾಡಿ ಬರೋಬ್ಬರಿ 20 ವರ್ಷ ಎಂದು ಬದಲಿಸಿಕೊಂಡಿದ್ದಾನೆ!"

​ವಂಚನೆಯ ಜಾಲ 2 ವರ್ಷದ ಕರಾರು ಪತ್ರ 20 ವರ್ಷಕ್ಕೆ ಎಡಿಟ್!
​ಹೆಚ್ಚುವರಿ ಜಮೀನು ಕಬಳಿಕೆ: ಒಪ್ಪಂದಕ್ಕಿಂತ ಹೆಚ್ಚಿನ ಭೂಮಿ ಅಕ್ರಮ ವಶ.
​ರಾಜಕೀಯ ಪ್ರಭಾವ: ಪೊಲೀಸ್ ದೂರು ನೀಡಿದರೂ ಕ್ರಮ ಕೈಗೊಳ್ಳದ ಖಾನಾಪುರ ಪೊಲೀಸ್ ಇಲಾಖೆ.
​ ರೈತರ ಮುಗ್ಧತೆಯನ್ನು ಅಸ್ತ್ರವಾಗಿಸಿಕೊಂಡು ಈ ವಂಚನೆ ಮಾಡಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ಗಂಭೀರ ಆರೋಪ ಮಾಡಿದೆ. ಕೇವಲ ಸಮಯದ ಬದಲಾವಣೆ ಮಾತ್ರವಲ್ಲ, ಒಪ್ಪಂದದಲ್ಲಿ ಇರುವುದಕ್ಕಿಂತ ಹೆಚ್ಚಿನ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆ ಎಂಬುದು ಸಂಘಟನೆಯ ವಾದ. ಈ ಬಗ್ಗೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಸಹ ಆರೋಪಿಯ ರಾಜಕೀಯ ಪ್ರಭಾವದಿಂದಾಗಿ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ."
​ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿ

ರೈತರಿಗೆ ಅನ್ಯಾಯವಾದರೆ ನಾವು ಸುಮ್ಮನಿರುವುದಿಲ್ಲ. ಹಣದ ಮದ ಮತ್ತು ರಾಜಕೀಯ ಪವರ್ ಬಳಸಿ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸವಾಗುತ್ತಿದೆ. ತಕ್ಷಣವೇ ತನಿಖೆಯಾಗಬೇಕು, ಇಲ್ಲವಾದರೆ ಉಗ್ರ ಪ್ರತಿಭಟನೆ ಮಾಡಲಾಗುವುದು."

ವರದಿ : ಮಹಾಂತೇಶ್ ಎಸ್ ಹುಲಿಕಟ್ಟಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
LLC ಕಾಲುವೆಯ ಕೊಟೇಹಾಳ ಡಿಪ್‌ನಲ್ಲಿ ನೀರಿನ ಅಭಾವ: ಕೆ.ಸೂಗೂರು, ರಾರಾವಿ, ಬಂಡ್ರಾಳು ಗ್ರಾಮಸ್ಥರ ಆಕ್ರೋಶ ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್