Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಗ್ನಿ ಅವಘಡದ ಮುಂಜಾಗ್ರತಾ ಕ್ರಮದ ಉಪನ್ಯಾಸ ಮತ್ತು ಅಣಕು ಪ್ರದರ್ಶನ

Advertisement
----------------------------------------ಅಗ್ನಿಶಾಮಕ ದಳದ ಅಧಿಕಾರಿಗಳಿಗೆ  ಸನ್ಮಾನ

ಇಲಕಲ್ :ತಾಲೂಕಿನ ಕಂದಗಲ್ಲ. ಬೆಂಕಿ, ಅಪಾಯಕಾರಿ ವಸ್ತುಗಳು, ಮತ್ತು ಇತರೆ ತುರ್ತು ಪರಿಸ್ಥಿಗಳಲ್ಲಿ ತಮ್ಮ್ ಜೀವನದ ಹಂಗು ತೊರೆದು ಕಾರ್ಯನಿರ್ವಹಿಸುವ ವೀರರನ್ನು ಹೊಂದಿರುವ ಸಂಸ್ಥೆ ಅಗ್ನಿಶಾಮಕದಳ ಸಂಸ್ಥೆಯಾಗಿದ್ದು ಇವರಿಂದ ಅಪತ್ಕಾಲದಲ್ಲಿ ಉಂಟಾಗುವ ಪ್ರಾಣಹಾನಿ,ಅಸ್ತಿ ಪಾಸ್ತಿ, ನಷ್ಟ ಕಡಿಮೆಯಾಗುತ್ತವೆ, ನಾವು ಕೂಡಾ ಇವರ ಸಲಹೆಗಳನ್ನು ತಿಳಿದುಕೊಂಡು ಆಗುವ ಅನಾಹುತಗಳನ್ನು ಆದಷ್ಟು ಪ್ರಯತ್ನಿಸಿ ತಪ್ಪಿಸಬೇಕು ಎಂದು ವಿಶ್ವ ಚೇತನ ಪಬ್ಲಿಕ್ ಸ್ಕೂಲ್ ಕಂದಗಲ್ಲನ ಸಂಸ್ಥೆಯ ಸಂಸ್ತಾಪಕರು ಈ ಸಾಲಿನ ತಾಲೂಕ್ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತರಾದ ಸಂಗಣ್ಣ ಹವಲ್ದಾರ ಹೇಳಿದರು.

ಶಾಲೆಯ "ಗುರುಮಹಾಂತ ರಂಗಮಂದಿರ ಮತ್ತು ಶಾಲೆಯ ಆವರಣ "ದಲ್ಲಿ " ಅಗ್ನಿ ಶಾಮಕ ಇಲಾಖೆಯಿಂದ ಅಗ್ನಿ ಅವಘಡದ ಮುಂಜಾಗ್ರತಾ ಕ್ರಮದ ಉಪನ್ಯಾಸ ಮತ್ತು ಅಣಕು ಪ್ರದರ್ಶನ " ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬೆಂಕಿ ಅವಘಡದ ಕುರಿತು ವಿಶೇಷ ಉಪನ್ಯಾಸವನ್ನು ಅಗ್ನಿ ಶಾಮಕ ದಳದ ಅಧಿಕಾರಿ ಜಗದೀಶ ಗಿರಡ್ಡಿ ಅವರು ಅಣುಕು ಪ್ರದರ್ಶನ ಮಾಡುವದರ ಮುಖಾಂತರ ನೀಡಿದರು. ಅಧಿಕಾರಿಗಳಾದ ಮಾರುತಿ ಜಾದವ್ , ಖಾಜೇಸಾಬ ಗುಂತಗುಳಿ, ಮಲ್ಲೇಶ ಡಂಬಳ, ದಯಾನಂದ ಹಡಪದ, ಉಪಸ್ಥಿತರಿದ್ದರು. ಗ್ರಾಮದ ನಿವೃತ್ತ ಶಿಕ್ಷಕ ಶೇಖರಪ್ಪ ಭೋವಿ ಮು ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ಕುರಿತು ಮಾತನಾಡಿದರು.

ಅಧಿಕಾರಿಗಳನ್ನು ಸನ್ಮಾನಿಸಲಾಯಿತು.ಮು ಗುರುಮಾತೆ ರೇಷ್ಮ ಗಾವಡಿ ಸೇರಿದಂತೆ ಗ್ರಾಮದ ವಿವಿಧ ಶಾಲೆಯ ಶಿಕ್ಷಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರೂಪಣೆಯನ್ನು ಗುರುಮಾತೆ ಕು.ಭವ್ಯಶ್ರೀ ಭಂಡಾರಿ, ಸ್ವಾಗತ ಭಾಷಣವನ್ನು ಗುರುಮಾತೆ ಶ್ವೇತಾ ತುಂಬದ . ವಂದನಾರ್ಪಣೆಯನ್ನುಕು ಪ್ರಸಾದ ನಾಯಕ ಮಾಡಿದರು.

ಕಾರ್ಯಕ್ರಮದ ಕೇಂದ್ರ ಬಿಂದುವಾದ ಅಣಕು ಪ್ರದರ್ಶನವು ಆಕರ್ಷಣೀಯ ಮತ್ತು ಕುತೂಹಲಕಾರಿಯಾಗಿತ್ತು. ಶಾಲೆಯ ಎಲ್ಲಾ ಶಿಕ್ಷಕವೃಂದ, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು, ಪಾಲಕವೃಂದ, ಆಡಳಿತ ಮಂಡಳಿಯವರು  ಉಪಸ್ಥಿತರಿದ್ದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್