LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರವಾಗಿ ಪ್ರಧಾನಿಗೆ ಪತ್ರ: ಡಿ.ಕೆ. ಶಿವಕುಮಾರ್

Advertisement

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿರುವ ತೀರ್ಮಾನವನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸುವ ಬಗ್ಗೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯಲಾಗುವುದು. ಮೋದಿ ಭೇಟಿ ಸಾಧ್ಯವಾದರೆ ಈ ವಿಚಾರವಾಗಿ ಚರ್ಚೆ ಮಾಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಕಾಸಸೌಧದ ಸಭಾಂಗಣದಲ್ಲಿ ಎಸ್.ಸಿ.ಎಸ್.ಪಿ /ಟಿ.ಎಸ್.ಪಿ ಕಾರ್ಯಕ್ರಮಗಳ 2026-27 ನೇ ಸಾಲಿನ ಕ್ರಿಯಾ ಯೋಜನೆ ಕುರಿತಾದ ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಹಲವು ಮಾಹಿತಿ ಹಂಚಿಕೊಂಡಿದ್ದಾರೆ.

ಇಂದು ಬೆಳಿಗ್ಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಶಾಸಕರು, ಸಚಿವರು, ವಿವಿಧ ನಿಗಮಗಳ ಅಧ್ಯಕ್ಷರುಗಳನ್ನು ಒಳಗೊಂಡಂತೆ ಸಭೆ ನಡೆಸಲಾಗಿದೆ. ಮೀಸಲಾತಿ ಹೆಚ್ಚಳ, ಒಳ ಮೀಸಲಾತಿ ವಿಚಾರವಾಗಿ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್​​ನಲ್ಲಿ ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ಯಾರು ರಾಜ್ಯದ ಪರವಾಗಿ ವಾದ ಮಾಡಬೇಕು ಎಂಬ ಬಗ್ಗೆ ಮತ್ತು ಈ ಪ್ರಕರಣದ ಮೇಲ್ವಿಚಾರಣೆಗೆ ಡಿಸಿಎಂ ಪರಮೇಶ್ವರ್, ಮುನಿಯಪ್ಪ ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ನಾಟಕ ತಂಡಕ್ಕೆ ಮತ್ತೊಂದು ಸೋಲುಮೂರು ಬಾರಿ ಗೆದ್ದರೂ ಸಿಗದ ಮಂತ್ರಿಗಿರಿ: ಹಂಪಯ್ಯ ನಾಯಕರ ಕಡೆಗಣನೆಗೆ ಸಮುದಾಯ ಕಾರ್ಯಕರ್ತರ ಆಕ್ರೋಶಒಂದೊಂದು ಹುದ್ದೆಗೆ ಒಂದೊಂದು ರೇಟ್ : ಕೆಪಿಎಸ್‌ಸಿ ಅಧ್ಯಕ್ಷಕನ ಲಂಚಾವತಾರ ಚಾರ್ಜ್‌ಶೀಟ್ ನಲ್ಲಿ ಉಲ್ಲೇಖ ಪ್ರೀತಿಸಿ ಮದ್ವೆಯಾದ ಕೇವಲ 45 ದಿನದಲ್ಲೇ ನವದಂಪತಿ ದುರ್ಮರಣKPSC ಇತಿಹಾಸದಲ್ಲೇ ದಾಖಲೆ ವೇಗ: ಕೇವಲ 5 ದಿನದಲ್ಲಿ KAS ಪೂರ್ವಭಾವಿ ರಿಸಲ್ಟ್ಕ್ರೀಂ ಬಳಸಿ ಎಂದ ಯುಟ್ಯೂಬರ್​ ಮಾತು ನಂಬಿದ ಬಾಲಕಿ ಸಾವಿನಂಚಿನಲ್ಲಿ: ಕಿಡ್ನಿ ಫೇಲ್ಸೂರ್ಯಕುಮಾರ್ ಕಮ್ ಬ್ಯಾಕ್ : ಬಿಸಿಸಿಐ ಮೂಲಗಳ ನಿರಾಕರಣೆ ಕೊನೆಯ ದಿನ 8 ವಿಕೆಟ್ ಪಡೆದರೆ ಭಾರತ ತಂಡಕ್ಕೆ ಗೆಲುವು ಎಂಟು ವರ್ಷಗಳ ಬಳಿಕ ಲಡಾಕ್‌ನಲ್ಲಿ ಚುನಾವಣೆ : ಕೊರೆಯುವ ಚಳಿಯಲ್ಲೂ ಶೇ. 70ಕ್ಕೂ ಮತದಾನ ಕಾರು , ಬೈಕ್, ಕಳುವಾದರೆ ಇನ್ಮುಂದೆ ಠಾಣೆಗೆ ಬರೋದು ಬೇಡ : ಮೊಬೈಲ್‌ನಲ್ಲೇ ದಾಖಲಿಸಿ ಎ-ಎಫ್ ಐಆರ್