Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿರಾಟ್ ಭಾವನಾತ್ಮಕ ವಿದಾಯಕ್ಕೆ ಮಡದಿ ಅನುಷ್ಕಾ ಹೃದಯಸ್ಪರ್ಶಿ ಸ್ಪಂದನೆ

Advertisement
ಸ್ಟಾರ್ ಕ್ರಿಕೆಟಿಗ ಮತ್ತು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದು ಕ್ರಿಕೆಟ್ ಮತ್ತು ಕೊಹ್ಲಿ ಅಭಿಮಾನಿಗಳಿಗೆ ಆಘಾತ ತಂದಿದೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮುದ್ದಿನ ಮಡದಿ ಅನುಷ್ಕಾ ಶರ್ಮಾ ಕೂಡಾ ಭಾವನಾತ್ಮಕ ಬರಹ ಹಂಚಿಕೊಂಡಿದ್ದಾರೆ.

 ''ಅವರು ದಾಖಲೆಗಳು ಮತ್ತು ಮೈಲಿಗಲ್ಲುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ನೀವು ಎಂದಿಗೂ ತೋರಿಸದ ಕಣ್ಣೀರು, ಯಾರೂ ನೋಡದ ನಿಮ್ಮ ಯುದ್ಧಗಳು ಮತ್ತು ಈ ಆಟದ ಸ್ವರೂಪಕ್ಕೆ ನೀವು ನೀಡಿದ ಅಪಾರ ಪ್ರೀತಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇದೆಲ್ಲವೂ ನಿಮ್ಮಿಂದ ಎಷ್ಟರ ಮಟ್ಟಿಗೆ ತೆಗೆದುಕೊಂಡಿದೆ ಎಂಬುದು ನನಗೆ ತಿಳಿದಿದೆ. ಪ್ರತೀ ಟೆಸ್ಟ್ ಸರಣಿಯ ನಂತರ, ನೀವು ಸ್ವಲ್ಪ ಬುದ್ಧಿವಂತರಾಗಿ, ಸ್ವಲ್ಪ ವಿನಮ್ರರಾಗಿ ಹಿಂತಿರುಗಿದ್ದೀರಿ. ಅದರ ಮೂಲಕ ನೀವು ವಿಕಸನಗೊಳ್ಳುವುದನ್ನು ನೋಡುವುದು ಒಂದು ಸೌಭಾಗ್ಯ. ನಾನು ಯಾವಾಗಲೂ ನೀವು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬಿಳಿ ಉಡುಪಿನಲ್ಲಿ ನಿವೃತ್ತರಾಗುತ್ತೀರಿ ಎಂದು ಊಹಿಸಿದ್ದೆ. ಆದರೆ ಯಾವಾಗಲೂ ನೀವು ನಿಮ್ಮ ಹೃದಯದ ಮಾತನ್ನು ಕೇಳಿದ್ದೀರಿ. ಆದ್ದರಿಂದ ನಾನೀಗ ಹೇಳಲು ಬಯಸುವುದೇನೆಂದರೆ, ನೀವು ಈ ವಿದಾಯವನ್ನು ಗಳಿಸಿದ್ದೀರಿ'' ಎಂದು ಬರೆದುಕೊಂಡಿದ್ದಾರೆ.



 

ಅನುಷ್ಕಾ ಅವರು ಕೊಹ್ಲಿ ವೃತ್ತಿಜೀವನದ ಏರಿಳಿತಗಳಲ್ಲಿ ಯಾವಾಗಲೂ ಬೆಂಬಲದ ಬಂಡೆಯಾಗಿ ನಿಂತಿದ್ದಾರೆ. ಇದೀಗ ಅವರ ಪೋಸ್ಟ್​ ಅಭಿಮಾನಿಗಳಿಂದ ಮೆಚ್ಚುಗೆ ಸ್ವೀಕರಿಸಿದ್ದಾರೆ.

ವಿಶ್ವಾದ್ಯಂತ ಜನಪ್ರಿಯತೆ ಹೊಂದಿರುವ ಕೊಹ್ಲಿ ಇಂದು ಬೆಳಗ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್‌ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದರು. ಅವರ ಮಾತಿನಲ್ಲಿ ಹೇಳುವುದಾದರೆ, 'ತಮ್ಮನ್ನು ರೂಪಿಸಿದ ಮತ್ತು ಜೀವನಕ್ಕೆ ಪಾಠಗಳನ್ನು ಕಲಿಸಿದ ಸ್ವರೂಪ'ಕ್ಕೆ ಧನ್ಯವಾದ ಅರ್ಪಿಸಿದರು.

ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ದಂಪತಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಫೋಟೋ ವಿಡಿಯೋಗಳು ಆನ್​ಲೈನ್​ನಲ್ಲಿ ವೈರಲ್​ ಆಗಿವೆ. ಕೊಹ್ಲಿ 123 ಟೆಸ್ಟ್‌ಗಳು, 9,230 ರನ್‌ಗಳು ಮತ್ತು 30 ಶತಕಗಳೊಂದಿಗೆ ನಿವೃತ್ತಿ ಹೊಂದಿದ್ದಾರೆ.

2008ರ 'ರಬ್ ನೆ ಬನಾ ದಿ ಜೋಡಿ' ಸಿನಿಮಾ ಮೂಲಕ ನಟನೆ ಪ್ರಾರಂಭಿಸಿದ ಅನುಷ್ಕಾ ಶರ್ಮಾ ಕೊನೆಯದಾಗಿ 2018ರ 'ಝೀರೋ' ಚಿತ್ರದಲ್ಲಿ ಕಾಣಿಸಿಕೊಂಡರು. ಚೊಚ್ಚಲ ಮತ್ತು ಕೊನೆಯ ಸಿನಿಮಾಗಳೆರಡರಲ್ಲೂ ಬಾಲಿವುಡ್ ಸೂಪರ್​ ಸ್ಟಾರ್ ಶಾರುಖ್ ಖಾನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅತಿ ಕಡಿಮೆ ಅವಧಿಯಲ್ಲೇ ಜನಪ್ರಿಯರಾದ ಅನುಷ್ಕಾ 6-7 ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದಾರೆ. 2017ರ ಡಿಸೆಂಬರ್​ 11ರಂದು ವಿರಾಟ್​ ಕೊಹ್ಲಿ ಜೊತೆ ಹಸೆಮಣೆ ಏರಿದ ನಟಿ ಈಗ ಎರಡು ಮುದ್ದು ಮಕ್ಕಳ ತಾಯಿ. ಮುಂದಿನ ಸಿನಿಮಾಗಳಿಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್