Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೇ.10ಕ್ಕೆ ಸಾಮೂಹಿಕ ವಿವಾಹ, ಉಪನಯನ

Advertisement
ಹುಬ್ಬಳ್ಳಿ : ಶ್ರೀ ಪ್ರಲ್ಲಾದ ಜೋಶಿ ಅವರ ಸಾರಥ್ಯದ ಕ್ಷಮತಾ ಸೇವಾ ಸಂಸ್ಥೆ ಹಾಗೂ ನವಯುಗ ಸಂಘಟನೆ(ರಿ) ಹುಬ್ಬಳ್ಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಏ.೧೦ರಂದು ರವಿವಾರ ನಗರದ ಗೋಕುಲ ರೋಡ್ ಅಕ್ಷಯ ಪಾರ್ಕ್ ಎದುರಿನ ಸಂತೆ ಮೈದಾನದಲ್ಲಿ ೨೪ನೇ ವರ್ಷದ ಸಾಮೂಹಿಕ ವಿವಾಹ ಮತ್ತು ಉಪನಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನವಯುಗ ಅಧ್ಯಕ್ಷ ಕೃಷ್ಣಾ ಗಂಡಗಾಳೇಕರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಾಹ ಮಾಡಿಕೊಳ್ಳುವ ವಧುವಿಗೆ ಬಂಗಾರದ ತಾಳಿ, ಎರಡು ಗುಂಡು, ಬೆಳ್ಳಿ ಕಾಲುಂಗರ, ಸೀರೆ-ರವಿಕೆ, ಹಾಗೂ ವರನಿಗೆ ಪಂಚೆ, ಶರ್ಟ, ಶೆಲ್ಲೆ, ಟೋಪಿ ಹಾಗೂ ಬಾಸಿಂಗ ಕೊಡಲಾಗುವುದು ಎಂದರು.
ವಧುವಿಗೆ ೧೮ ವರ್ಷ, ವರನಿಗೆ ೨೧ ವರ್ಷ ಆಗಿರಬೇಕು ಮತ್ತು ಮೊದಲನೇ ವಿವಾಹ ಎಂಬ ಪಂಚರ ಧೃಡೀಕರಣ ಪತ್ರ ಕೊಡಬೇಕು. ವಿವಾಹ ಮಾಡಿಕೊಳ್ಳುವ ನವ ವಧು-ವರರಿಗೆ ಕರ್ನಾಟಕ ರಾಜ್ಯ ಸರ್ಕಾರದ ವಿವಾಹ ಆದರ್ಶ ಯೋಜನೆ ಅಡಿಯಲ್ಲಿ ೧೦,೦೦೦ ರೂ.ಗಳನ್ನು ಹಾಗೂ ಸರ್ಕಾರದ ಸರಳ ವಿವಾಹ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನವಜೋಡಿಗೆ ೫೦,೦೦೦ ರೂ. ಗಳನ್ನು ಮತ್ತು ಅಂತರ ಜಾತಿ ವಿವಾಹ ಆದವರಿಗೆ ೦೩ ಲಕ್ಷ ರೂ. ಗಳನ್ನು ಸರ್ಕಾರದಿಂದ ಕೊಡಿಸಲಾಗುವುದು ಎಂದರು ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮೀಜಿ, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಮತ್ತು ಗೌರಿಗದ್ದೆ ಆಶ್ರಮದ ವಿನಯ ಗುರೂಜಿ, ಅಯ್ಯಪ್ಪಸ್ವಾಮಿ ಮಂದಿರದ ಆನಂದ ಗುರುಸ್ವಾಮಿ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಇನ್ನಿತರ ನಾಯಕರು ಉಪಸ್ಥಿತರಿರುವರು ಎಂದರು.

ಸAಘಟನೆಯ ವತಿಯಿಂದ ೨೦೨೪ರ ಫೆಬ್ರುವರಿ ೧೮ರಂದು ನಡೆದ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಅಂತರಜಾತಿ ಮದುವೆ ಮಾಡಿಕೊಂಡ ಸುನೀಲ ಪರಗಿ ಹಾಗೂ ಸಂಜನಾ ಬಳ್ಳಾರಿ ಹಾಗೂ ಕಮಲಾಕರ ಬೆಳಮಕರ, ಸಂಗೀತಾ ನಂದವಾಡಗಿ, ೨೦೨೫ರ ಮೇ ೪ರಂದು ನಡೆದ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಅಂತರಜಾತಿ ಮದುವೆ ಮಾಡಿಕೊಂಡ ವಿನಾಯಕ ಹಿರೇಮಠ, ಪ್ರಿಯಾಂಕಾ ಚಲವಾದಿ ಇವರು ಮದುವೆ ಮಾಡಿಕೊಂಡಿದ್ದು, ಸರಕಾರದಿಂದ ಕೊಡ ಮಾಡುವ ೩ ಲಕ್ಷ ರೂ. ಗಳನ್ನು ಇಲ್ಲಿಯವರೆಗೂ ಕೊಟ್ಟಿರುವುದಿಲ್ಲ. ಸರಕಾರ ಕೂಡಲೇ ಬಿಡುಗೊಳಿಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುಬ್ರಹ್ಮಣ್ಯ ಶಿರಕೋಳ, ಪ್ರಕಾಶ ಕ್ಯಾರಕಟ್ಟಿ, ನಾಗರಾಜ ಕಲಾಲ, ರವಿ ನಾಯಕ, ತೋಟಪ್ಪ ನಿಡಗುಂದಿ ಇತರರಿದ್ದರು.

ವರದಿ: ಸುಧೀರ್ ಕುಲಕರ್ಣಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ