ಬೈಲಹೊಂಗಲ : ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೈಲಹೊಂಗಲ ಪಟ್ಟಣದ ಖ್ಯಾತ ವೈದ್ಯರಾದ ಡಾ. ಮಹಾಂತೇಶ ನಂದಿಹಳ್ಳಿ ಮಾತನಾಡಿ ಬದುಕಿನಲ್ಲಿ ಸಾಧನೆ ಮಾಡಬೇಕಾದರೆ ಬಾಹ್ಯ ಪ್ರೇರಣೆಗಿಂತ ಆಂತರಿಕ ಪ್ರೇರಣೆ ಬಹಳ ಮುಖ್ಯ ಎಂದರು. ವಿದ್ಯಾರ್ಥಿಗಳ ಸತತ ಪ್ರಯತ್ನ ಯಶಸ್ಸಿನ ಕೀಲಿ ಕೈ. ಕಲಿಯುವ ವಯಸ್ಸಿನಲ್ಲಿ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಮುಂದೆ ಉತ್ತಮ ಜೀವನ ಸಾಗಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಜಂಕ್ ಪುಡ್ ತಿನ್ನುವುದನ್ನು ಬಿಟ್ಟು ಪೌಷ್ಟಿಕಾಂಶಯುಳ್ಳ ಆಹಾರ ಸೇವಿಸುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಯೋಗ, ಧ್ಯಾನ ಏಕಾಗ್ರತೆ ಹೆಚ್ಚಿಸಿ ಉತ್ತಮ ಅಂಕಗಳನ್ನು ಪಡೆಯಲು ಸಹಕಾರಿ ಎಂದು ಅವರು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಅಶೋಕ ನಂದಿಹಳ್ಳಿ ಮಾತನಾಡಿ ಉತ್ತಮ ಶಿಕ್ಷಣ ಬಾಳಿಗೆ ಬೆಳಕು ನೀಡುತ್ತದೆ ಎಂದರು. ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ವಿದ್ಯಾರ್ಥಿಗಳು ಕ್ರಿಯಾಶೀಲತೆ ಹಾಗೂ ಶಿಸ್ತನ್ನು ಅಳವಡಿಸಿಕೊಂಡರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜೆ.ಆರ್.ನರಿ, ಪಿ.ಎಸ್.ಗುರುನಗೌಡರ, ಎಚ್.ವಿ.ಪುರಾಣಿಕ, ವಿ.ಆಯ್. ಕೋಟಗಾರ, ಜಿ.ಬಿ. ತುರಾದಿ, ಎ.ಎಂ. ಬೇಪಾರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾವೇರಿ ಬೋಬಡೆ ಸ್ವಾಗತಿಸಿದರು. ವಿದ್ಯಾ ಗರಗದ ನಿರೂಪಿಸಿದರು. ಚನಬಸವ್ವ ಸೊಗಲದ ವಂದಿಸಿದರು.
ವರದಿ : ದುಂಡಪ್ಪ ಹೂಲಿ


