Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ:ನಿಯಾಜ್ ಶಹಜಹಾನ ಡೊಂಗರಗಾಂವ

Advertisement
ಐಗಳಿ : ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ತಾನು ಹಿಡಿದ ಕಾರ್ಯದಲ್ಲಿ ಸತತ ಪ್ರಯತ್ನ, ಅಛಲವಾದ ಮನಸ್ಸು ಧ್ರಢವಾದ ನಂಬಿಕೆ ಇದ್ದರೆ ಮನುಷ್ಯ ಗುರಿ ಮುಟ್ಟಲು ಸಾಧ್ಯ ಎಂದು ಮೌಂಟ್ ಎವರೆಸ್ಟ ಏರಿ ಸಾಧನೆ ಮಾಡಿದ ಐಗಳಿ ಗ್ರಾಮದ ಯುವಕ ನಿಯಾಜ್ ಶಹಜಹಾನ ಡೊಂಗರಗಾAವ ಹೇಳಿದರು.
ಅವರು ಮೌಂಟ್ ಎವರೆಸ್ಟ ಸಾಗರಮಾತಾ ಏರಿದ ಪ್ರಯುಕ್ತ ಐಗಳಿ ಮತ್ತು ಕೊಹಳ್ಳಿ ಗ್ರಾಮಸ್ಥರು ಸೋಮವಾರ ಸ್ಥಳಿಯ ಗ್ರಾಪಂ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ನಿಯಾಜ್ ಶಹಜಹಾನ ಡೊಂಗರಗಾಂವ ಅನುಭವ ಹಂಚಿಕೊಳ್ಳುತ್ತಾ ಗ್ರಾಮೀಣ ಮಟ್ಟದಲ್ಲಿ ಪಡೆದ ಶಿಕ್ಷಣ, ನಾನು ಪಟ್ಟ ಕಷ್ಟ, ಗ್ರಾಮೀಣ ಕ್ರೀಡೆಗಳೆ ನನಗೆ ಎವರೆಸ್ಟ ಏರಲು ಸಹಕಾರಿಯಾದವು, ಎವರೆಸ್ಟ ಶಿಖರ ಹತ್ತುವಾಗ ಕಷ್ಟಗಳು, ಅಪಾಯಗಳು ಬರುತ್ತವೆ, ಇವುಗಳನ್ನು ಮೀರಿ ನಮ್ಮ ಗುರಿಯತ್ತ ಸಾಗಬೇಕು. ಎವರೆಸ್ಟ ಶಿಖರ ಹತ್ತುವ ವಿಚಾರ ನಮ್ಮಲ್ಲಿ ಬಾಲ್ಯದಿಂದ ಇದ್ದರೆ ನಾವು ತಂಬಾಕು ಸೇವೆನೆ, ಗುಟಕಾ, ಸಿಗರೇಟ, ಕುಡಿತದ ದುಶ್ಚÀಟದಿಂದ ದೂರವಿರಬೇಕು. ಇದರಿಂದ ಉಸಿರಾಟದ ತೊಂದರೆ ಅನುಭವಿಸಬೇಕಾಗುತ್ತದೆ.


ನಾನು ಚಿಕ್ಕಂದಿನಿAದಲೂ ಸಾಹಸ ಪ್ರವೃತ್ತಿ ಹೊಂದಿದ್ದಕ್ಕೆ ವಿಶ್ವದ ಅತೀ ಎತ್ತರದ ಮೌಂಟ್ ಎವರೆಸ್ಟ ಹತ್ತಲು ಸಾಧ್ಯವಾಯಿತು. ಮೌಂಟ ಎವರೆಸ್ಟ ಎರುವದು ೧೪ ದಿನದ ಕಾಲಾವ, ದೈಹಿಕವಾಗಿ ಗಟ್ಟಿಯಾದರೂ ಮಾರ್ಗದರ್ಶಕರ ಸಲಹೆ, ಮನೋಬಲ, ಆಕ್ಸಿಜನ್ ಬಹಳ ಮುಖ್ಯ, ಪ್ರತಿದಿನ ೧೦ ಕಿಮೀ ಮೇಲೆ ಹೋಗಬೇಕಾಗುತ್ತದೆ. ಆಹಾರ, ನಿದ್ರೆ ಕೊರತೆ ಇರುತ್ತೆ ಅವುಗಳನ್ನು ಮೆಟ್ಟಿ ನಿಂತು ಆತ್ಮವಿಶ್ವಾಸದಿಂದ ಮುನ್ನಡೆಯಬೇಕಾಗುತ್ತದೆ ಎಂದ ಅವರು ನಾನು ಎವರೇಸ್ಟ ಶಿಖರವನ್ನು ಮಾರ್ಚ ೨೫ ರಂದು ಏರಲು ಪ್ರಾರಂಬಿಸಿ, ಏಪ್ರೀಲ್ ೯ ರಂದು ಮರಳಿ ಬಂದಿದ್ದೇನೆ ಎಂದರು.

ಕಲಿಸಿದ ಗುರು, ಪ್ರಾಥಮಿಕ ಶಾಲಾ ಶಿಕ್ಷಕ ಎಸ್ ಎಂ ಜನಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕಲಿತು ವೃತ್ತಿಯಿಂದ ಸಾಪ್ಟವೇರ್ ಇಂಜಿನಿಯರ್ ಆಗಿ ಅಮೇರಿಕಾದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಯಾಜ್ ಮೌಂಟ ಎವರೆಸ್ಟ ಹತ್ತಿರುವದು ಒಂದು ಸಾಹಸವೇ ಸರಿ. ಆತನ ಹೆಸರು, ನಮ್ಮ ಶಾಲೆಯ, ಊರಿನ ಹೆಸರು ಇತಿಹಾಸದ ಪುಟದಲ್ಲಿ ಬರೆದಿಡುವಂತಹ ಸಂಗತಿ ಎಂದರು.

ಗ್ರಾಮದ ಹಿರಿಯರಾದ ಸಿ ಎಸ್ ನೇಮಗೌಡ ಮಾತನಾಡಿ, ಸಾಸುತ್ತೇನೆ ಎಂದು ಹೊರಟ ಯುವಕನಿಗೆ ತಂದೆ-ತಾಯಿ, ಗುರುಗಳ ಆಶೀರ್ವಾದ, ಕುಟುಂಬದ ಸಹಕಾರ, ಗೆಳೆಯರ ಧೈರ್ಯದ ಮಾತುಗಳು ಬಹಳ ಮುಖ್ಯ ಎಂದು ಹೇಳಿದರು.


ಈ ಸಂದರ್ಭದಲ್ಲಿ ಐಗಳಿ-ಕೋಹಳ್ಳಿ ಗ್ರಾಮದ ಹಿರಿಯರು, ಅಥಣಿ ತಾಲೂಕಾ ಒಣದ್ರಾಕ್ಷಿ ಘಟಕದ ಆಡಳಿತ ಮಂಡಳಿ, ಭಾರತ ಬ್ಯಾಂಕ, ಪ್ರಗತಿ ಬ್ಯಾಂಕ, ಪ್ರಾಥಮಿಕ ಶಾಲಾ ಶಿಕ್ಷಕರು, ಮುಸ್ಲಿಂ ಸಮಾಜ ಬಾಂಧವರು, ಮಾದಿಗ ಸಮಾಜ ಬಾಂದವರು ಸೇರಿದಂತೆ ಸ್ನೇಹಿತರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಆರ್ ಆರ್ ತೆಲಸಂಗ, ಸಿದ್ದಪ್ಪ ಬಳ್ಳೊಳ್ಳಿ, ನೂರಹ್ಮದ ಡೊಂಗರಗಾAವ, ಅಪ್ಪಾಸಾಬ ಪಾಟೀಲ, ಗುರಪ್ಪ ಬಿರಾದಾರ, ಶಿವಾನಂದ ಸಿಂಧೂರ, ಡಾ|| ಆರ್ ಡಿ ವಾಘಮೋರೆ, ಬಾಳ ಮುಜಾವರ, ರಿಯಾಜಹ್ಮದ ಡೊಂಗರಗಾAವ, ಬೈರು ಬಿಜ್ಜರಗಿ, ಮಲ್ಲು ಹಿಪ್ಪರಗಿ, ಅಪ್ಪಾಸಾಬ ಮಾಕಾಣಿ, ಪ್ರಲ್ಹಾದ ಪಾಟೀಲ, ಪ್ರಕಾಶ ಪಾಟೀಲ, ಕೋಹಳ್ಳಿ ಗ್ರಾಮದ ಸಿಖಂದರ ಮುಜಾವರ, ಕೇದಾರಿ ವಳಸಂಗ, ಸೋಮಲಿಂಗ ಝರೆ ಸೇರಿದಂತೆ ನೂರಾರು ಸ್ನೇಹಿತರು, ಗ್ರಾಮದ ಯುವಕರು ಇದ್ದರು.
ದುಂಡಪ್ಪ ದೊಡಮನಿ ಸ್ವಾಗತಿಸಿದರು. ಗಣೇಶ ಪೂಜಾರಿ ನಿರೂಪಿಸಿದರು, ಬಂದೆನಮಾಜ ಮುಜಾವರ ವಂದಿಸಿದರು.

 ವರದಿ :ಆಕಾಶ ಮಾದರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ