Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಂಬ್ ಹಾಕಲು ಜಮೀರ್ ಹೋಗಬೇಕಿನಿಲ್ಲ, ನಮ್ಮ ಸೈನಿಕರಿದ್ದಾರೆ : ಸತೀಶ್ ಜಾರಕಿಹೊಳಿ

Advertisement
ಹುಬ್ಬಳ್ಳಿ : ಜಮ್ಮು-ಕಾಶ್ಮೀರದ ಪಹಲ್ಗಾಮ್​​​ನಲ್ಲಿ ಏ.22ರಂದು ನಡೆದ ಪಾಕ್ ಪೋಷಿತ ಉಗ್ರ ದಾಳಿ ಪ್ರಕರಣ ಕುರಿತುಂತೆ ಪ್ರತಿಕ್ರಿಯೆ ನೀಡಿದ್ದ ಸಚಿವ ಜಮೀರ್ ಅಹಮದ್ ಅವರು ಖುದ್ದು ತಾವೇ ಬಾಂಬ್ ಕಟ್ಟಿಕೊಂಡು ಪಾಕ್ ವಿರುದ್ಧ ಯುದ್ಧಕ್ಕೆ ಸಿದ್ಧ ಎಂದಿದ್ದರು.

ಈ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರು, ಬಾಂಬ್ ಹಾಕಲು ಕಾಂಗ್ರೆಸ್, ಬಿಜೆಪಿಯವರು ಹೋಗಲ್ಲ. ಜಮೀರ್ ಅವರು ಹೋಗಬೇಕಿನಿಲ್ಲ. ಭದ್ರತಾ ಕರ್ತವ್ಯ ನಿರ್ವಹಿಸಲು ನಮ್ಮ ಸೈನಿಕರಿದ್ದಾರೆ ಎಂದರು.

ನಮ್ಮ ದೇಶ ಕಾಯುವ 22 ಲಕ್ಷ ಯೋಧರಿದ್ದು, ಅವರು ತಮ್ಮ ಕರ್ತವ್ಯ ಮಾಡುತ್ತಾರೆ. ಯುದ್ಧ ಮಾಡುವ ವಿಚಾರ ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು. ಯಾವಾಗ, ಏನು ಮಾಡಬೇಕು ಎಂದು ಕೇಂದ್ರ ಸರ್ಕಾರವೇ ನೀರ್ಧರಿಸುತ್ತದೆ. ಸೂಕ್ತ ಸಮಯದಲ್ಲಿ ಕೇಂದ್ರ ತೀರ್ಮಾನ ಕೈಗೊಳ್ಳಲಿದೆ. ಹೀಗಾಗಿ ಸಮೀರ್ ಅವರು ಬಾಂಬ್ ಹಾಕಲು ಹೋಗುವುದು ಬೇಡ ಎಂದು ಪರೋಕ್ಷವಾಗಿ ಹೇಳಿದರು.

ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ನಾನು ಸಿದ್ಧನಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅನುಮತಿ ನೀಡಿದರೆ ನಾನೇ ದೇಹಕ್ಕೆ ಬಾಂಬ್ ಕಟ್ಟಿಕೊಂಡು ಹೋಗಲು ರೆಡಿ.

ನಾನು ಜೋಶ್ ಅಥವಾ ತಮಾಷೆಗೆ ಈ ಮಾತು ಹೇಳುತ್ತಿಲ್ಲ. ಯುದ್ಧಕ್ಕೆ ಕರೆಯಲಿ ಅಲ್ಲಾಹು ಮತ್ತು ದೇವರ ಆಣೆಗೂ ಆತ್ಮಾಹುತಿ ಬಾಂಬರ್ ಆಗಿ ಪಾಕಿಸ್ತಾನಕ್ಕೆ ಹೋಗ್ತಿನಿ ಎಂದು ಇತ್ತೀಚೆಗೆ ಹೊಸಪೇಟೆಯಲ್ಲಿ ಜಮೀರ್ ಅವರು ಹೇಳಿಕೆ ನೀಡಿದ್ದರು.

ಅವರ ಈ ಹೇಳಿಕೆಗೆ ಬಿಜೆಪಿ ನಾಯಕರೂ ತೀವ್ರವಾಗಿ ಟೀಕಿಸಿದ್ದಾರೆ. ಜಮೀರ್ ಅವರು ಮಾತನಾಡದೇ ಸುಮ್ಮನ್ನಿದ್ದರೆ ಸಾಕು. ಅದೇ ದೇಶಕ್ಕೆ ಅವರು ಮಾಡುವ ದೊಡ್ಡ ಸೇವೆ. ಸುಮ್ಮನೇ ಬಾಲಿಶ ಹೇಳಿಕೆ ನೀಡುವ ಅಗತ್ಯವಿಲ್ಲ ಎಂದು ನಿನ್ನೆಯಷ್ಟೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೂ ಟಾಂಗ್ ನೀಡಿದ್ದರು.
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಭವ ಆಟ ಶ್ಲಾಘಿಸಿದ ನಾಯಕ ಶ್ರೇಯಸ್ ಅಯ್ಯರ ವೈಭವ ಸೂರ್ಯವಂಶಿ ಮತ್ತೊಂದು ವಿಶ್ವ ದಾಖಲೆಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆ