ಶಿವಮೊಗ್ಗ:ಪಾಲಿಕೆ ವಿರುದ್ಧ ಮಾಜಿ ಶಾಸಕರ ಆಕ್ರೋಶ!
ಶಿವಮೊಗ್ಗ ಪಾಲಿಕೆ ನಿದ್ರಿಸುತ್ತಿದೆ ಎಂದು ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.
ಅವರು ಶಿವಮೊಗ್ಗ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಈಗ ಅಧಿಕಾರಿಗಳ ಕೈಯಲ್ಲಿದೆ ಆದರೆ ಈ ಅಧಿಕಾರಿಗಳು ನಗರ ಅಭಿವೃದ್ಧಿಯನ್ನು ಮರೆತಿದ್ದಾರೆ.
ಇಡೀ ನಗರದಲ್ಲಿ ಸ್ವಚ್ಛತೆ ಇಲ್ಲದೆ ಕಸದ ರಾಶಿ ಎಲ್ಲೆಡೆ ಕಂಡು ಬರುತ್ತಿದೆ, ಅವ್ಯವಸ್ಥೆಯ ಆಗರವಾಗಿದೆ.
ನಿಯಂತ್ರಣ ಇಲ್ಲವೇ ಇಲ್ಲ ಪರಿಣಾಮ ನಗರದಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳು ತೊಡಗಿದೆ ಎಂದರು.
ವರದಿ:ಮಂಜುನಾಥ ರಜಪೂತ

