ಬೆಂಗಳೂರು: ತಮಿಳುನಾಡು ರಾಜಕಾರಣದಲ್ಲಿ ಸದಾ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಬಿಜೆಪಿಗೆ ಗುಡ್‌ಬೈ ಹೇಳಿದ ಕೆಲವೇ ಗಂಟೆಗಳಲ್ಲಿ ಹೊಸದೊಂದು ಜನಪರ ಚಳುವಳಿಗೆ ಮುನ್ನುಡಿ ಬರೆದಿದ್ದಾರೆ
ಅವರು ಆರಂಭಿಸಿರುವ ಇಧು ನಮ್ಮ ಇಯಕ್ಕಂ (ಇದು ನಮ್ಮ ಚಳವಳಿ) ಮತ್ತು ವಿ ದಿ ಲೀಡರ್ (We The Leader) ಅಭಿಯಾನಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಕೇವಲ 10 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡು ಹೊಸ ದಾಖಲೆ ಬರೆದಿದ್ದಾರೆ.
ಶುಕ್ರವಾರವಷ್ಟೇ ಔಪಚಾರಿಕವಾಗಿ ಬಿಜೆಪಿಯನ್ನು ತೊರೆದ ಅಣ್ಣಾಮಲೈ ಅವರ ಈ ತಳಮಟ್ಟದ ನಾಯಕತ್ವದ ಹೊಸ ಆಂದೋಲನಕ್ಕೆ ತಮಿಳುನಾಡಿನಲ್ಲಿ ಭಾರಿ ಜನಾಂದೋಲನ ಸೃಷ್ಟಿಯಾಗಿದ್ದು, ಇದರ ಕ್ರೇಜ್ ಈಗ ಕರ್ನಾಟಕದಲ್ಲೂ ಸದ್ದು ಮಾಡುತ್ತಿದೆ.

