Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುನಿಯಪ್ಪಗೆ ಸಮಾಜ ಕಲ್ಯಾಣ ಇಲಾಖೆ ಖಾತೆಗೆ ಒತ್ತಾಯಿಸಿ ಪ್ರತಿಭಟನೆ 

Advertisement

ಚಿಟಗುಪ್ಪ:ಲೋಕಸಭಾ ಸದಸ್ಯರಾಗಿ ಹಾಗೂ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ಕೆ.ಎಚ್.ಮುನಿಯಪ್ಪ ಅವರನ್ನು ಉಪಮುಖ್ಯಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಚಿಟಗುಪ್ಪ ತಾಲ್ಲೂಕಿನ ಮನ್ನಾಏಖೇಳಿ ಗ್ರಾಮದ ಡಾ.ಅಂಬೇಡ್ಕರ್ ವೃತ್ತದ ಹತ್ತಿರ ಮಾದಿಗ ದಂಡೋರಾ ಹೋರಾಟ ಸಮಿತಿ ಬೀದರ ದಕ್ಷಿಣ ಹಾಗೂ ಮಾದಿಗ ಸಮುದಾಯ ಒಕ್ಕೂಟ ಬೀದರ ದಕ್ಷಿಣ ಕ್ಷೇತ್ರದ ವತಿಯಿಂದ  
ಶನಿವಾರ ಪ್ರತಿಭಟನೆ ನಡೆಸಲಾಯಿತು.

ಕೆ.ಎಚ್.ಮುನಿಯಪ್ಪ ಅವರು ಕಳೆದ ನಲವತ್ತು ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ.ಏಳು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿ, ಕೇಂದ್ರ ಸರ್ಕಾರದ ಕೇಂದ್ರೀಯ ಮಂತ್ರಿಗಳಾಗಿ ಸೇವೆ ಸಲ್ಲಿಸಿರುತ್ತಾರೆ.ಇಂತಹ ಹಿರಿಯ ರಾಜಕಾರಣಿಯನ್ನು ಡಿ.ಕೆ ಸಂಪುಟದಲ್ಲಿ ಪ್ರಬಲ ಖಾತೆ ನೀಡದೆ ಈ ಹಿಂದೆ ಇದ್ದ ಆಹಾರ ಖಾತೆಯನ್ನೆ ಪುನಃ ನೀಡಿರುವುದು ಮಾದಿಗರಿಗೆ ಅವಮಾನ ಮಾಡಿದಂತಿದೆ.ಮಾದಿಗ ಸಮುದಾಯದ ಅಭಿವೃದ್ಧಿಗಾಗಿ ಮುನಿಯಪ್ಪಗೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರನ್ನಾಗಿ ಮಾಡಬೇಕೆಂದು ಎಂದು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ ಸಿಬ್ಬಂದಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾದಿಗ ದಂಡೋರ ಒಳಮೀಸಲಾತಿ ಹೋರಾಟ ಸಮಿತಿ ಬೀದರ ದಕ್ಷಿಣ ಕ್ಷೇತ್ರದ ಅಧ್ಯಕ್ಷ ವೀರಾಶೇಟ್ಟಿ ಬಂಬಳಗಿ,ಉಪಾಧ್ಯಾಕ್ಷ ದಯಾನಂದ ರೇಕುಳಗಿ,ಮಾದಿಗ ದಂಡೋರ ಹೋರಾಟ ಸಮಿತಿ ಚಿಟಗುಪ್ಪ ತಾಲ್ಲೂಕು ಅಧ್ಯಕ್ಷ ಲಾಲಪ್ಪ ರಾಂಪುರೆ ನಿರ್ಣಾ,ಪದಾಧಿಕಾರಿಗಳಾದ ಉಮೇಶ ಬಗದಲ,ಶಾಲಿವಾನ ಬೋರಾಳ,ವೀರಶೈಟ್ಟಿ ಬಂಬುಳಗಿ,ಬಸವರಾಜ ನಿರ್ಣಾ,ವಿನೋದ ಮಂಗಲಗಿ,ರಾಮಚಂದ್ರ ಬೋರಾಳ,ಧನರಾಜ ಮಂಗಲಗಿ,ಪ್ರಹ್ಲಾದ ಮೇಲಕೇರಿ ಮಾಡಗುಳ,ಲಕ್ಷ್ಮಣ ಮಚಕುರೆ,ಯೋಹಾನ ಬಗದಲ,ಮನೋಜ ಬೋರಾಳ,ಪ್ರಭು ಬಂಬುಳಗಿ,ಆದರ್ಶ ಬೋರಾಳ ಸೇರಿ ಇತರರು ಉಪಸ್ಥಿತರಿದ್ದರು.


ವರದಿ :ಸಜೀಶ ಲಂಬುನೋರ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೃಹ ಜ್ಯೋತಿ ನೋಂದಣಿಗೆ ಜನರಿಗೆ  ಸರತಿ ಸಾಲಿನಲ್ಲಿ ನಿಲ್ಲುವ ಹಾಗೇ ಮಾಡಿದ ಸರ್ಕಾರದ ನಿರ್ಧಾರನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆ : ಪ್ರಧಾನಿ ಸೂಚನೆ ಮಗ ಆತ್ಮಹತ್ಯೆಗೆ ಶರಣಾದ ಸುದ್ದಿ ಕೇಳಿ ಆಘಾತದಿಂದ ತಾಯಿ ಸಾವು ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ಎಫೆಕ್ಟ್ : ದೆಹಲಿಯ 16 ಮೆಟ್ರೋ ನಿಲ್ದಾಣಗಳು ಬಂದ್ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ : ಡಿ. ಕೆ. ಶಿವಕುಮಾರ್ ನಿಟ್ ಅಕ್ರಮ ಖಂಡಿಸಿ ರಾಜ್ಯ ವ್ಯಾಪ್ತಿ ಬೃಹತ್ ಪ್ರತಿಭಟನೆ!ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ! ಡಿವೈಎಸ್ಪಿ, ಚಂದ್ರಶೇಖರ್ ಜಿ. ಚಾಲನೆ!₹16.16 ಲಕ್ಷ ಸಾಲಕ್ಕೆ ₹36.77 ಲಕ್ಷ ವಸೂಲಿ : ಸಂಕೇಶ್ವರದ ದುಷ್ಟನ ಬಂಧನ ನೀತಿ ಆಯೋಗದ ನೂತನ CEO ಆಗಿ ಹಿರಿಯ ಐಎಎಸ್ ಅಧಿಕಾರಿ ಅನುರಾಗ್ ಜೈನ್ ನೇಮಕ6,617 ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ