Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾರಿಗೆ ಅಧಿಕಾರಿಗಳ ವಿರುದ್ದ ಸಾರ್ವಜನಿಕರ ಆಕ್ರೊಶ

Advertisement
ಐಗಳಿ: -ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಅಥಣಿ ಸಾರಿಗೆ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ ಹಲವಾರು ಬಾರಿ ಮನವಿ ಪತ್ರ ನೀಡಿ ಪತ್ರಿಕೆಯಲ್ಲಿ ಸಮಸ್ಯೆ ಕುರಿತು ಸುದ್ದಿ ಪ್ರಕಟವಾದರೂ ಸಾರಿಗೆ ಅಧಿಕಾರಿಗಳು ಮಾತ್ರ ಸ್ಪದಿಸುತ್ತಿಲ್ಲ ಎಂದು ಅಥಣಿ ತಾಲೂಕಿನ ಐಗಳಿ ಗ್ರಾಮಸ್ಥರು ಅಧಿಕಾರಿಗಳ ವಿರುಧ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಗಳಿ ಗ್ರಾಮಕ್ಕೆ ದಿನ ನಿತ್ಯ ಎರಡು ಬಸ್ ಮಾತ್ರ ಸಂಚಾರ ಮಾಡುತ್ತವೆ .

ಅವು ಕೂಡಾ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಇದರಿಂದ ಶಾಲಾ ವಿಧ್ಯಾರ್ಥಿಗಳು ನೌಕರರು ಸಾರ್ವಜನಿಕರು ದಿನ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈಗ ಇರುವ ಸಾರಿಗೆ ವ್ಯವಸ್ಥೆ ಅಥಣಿಯಿಂದ 8:00 ಗಂಟೆಗೆ ಐಗಳಿ ಗ್ರಾಮಕ್ಕೆ ಆಗಮಿಸಿ ಅರಟಾಳ ಗ್ರಾಮಕ್ಕೆ ಎರಡು ಬಾರಿ ಹೋಗಿ ಬರುವುದರಲ್ಲಿ 9:45: ಆಗುತ್ತದೆ.

ಇಲ್ಲಿಂದ ಹೋದ ಬಸ್ ಸಂಜೆ 3 : 30ಕ್ಕೆ ವಾಪಸ್ ಆಗುತ್ತದೆ. ಇದೆ ತರಹ ಅಥಣಿ ಬನ್ನೂರ ಬಸ್ ಮುಜಾಂನೆ 9:00 ಗಂಟೆಗೆ ಆಗಮಿಸಿ ವಾಪಸ್ 10: 45 ಕ್ಕೆ ಐಗಳಿ ಗ್ರಾಮದಿಂದ ಅಥಣಿಗೆ ತರೆಳಿ ವಾಪಸ್ ಮಧ್ಯಾಹ್ನ 12:00 ಗಂಟೆಗೆ ಆಗಮಿಸಿ 2 :00 ಗಂಟೆಗೆ ಐಗಳಿಗೆ ಆಗಮಿಸುತ್ತದೆ. ನಂತರ ಸಂಜೆ 4:00 ಗಂಟೆಗೆ ವಾಪಸ್ ಆಗುತ್ತದೆ .

ಈ ಎರಡು ಬಸ್ ಗಳು ಮಾತ್ರ ಈ ಮಾರ್ಗವಾಗಿ ಸಂಚಾರ ಮಾಡುತ್ತವೆ ಸರ್ಕಾರಿ ರಜೆ ದಿನ ಬಸ್ ಸಂಚಾರವೇ ಇರುವುದಿಲ್ಲ. ಇದರಿಂದ ವಿಧ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲು ಸಾಧ್ಯವಾಗುತ್ತಿಲ್ಲ. 2024ರ ಕಾಲದಲ್ಲಿಯೂ ಐಗಳಿ ಗ್ರಾಮಕ್ಕೆ ಎಂದು ಸ್ವಂತ ಬಸ್ ಇಲ್ಲದಿರುವುದು ವಿರ್ಪಸ . ಈ ಕುರಿತು ಕಳೆದ ತಿಂಗಳು ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಭೆಯಲ್ಲಿ ಅಧ್ಯಕ್ಷರಾದ ಸಿದ್ದಾರ್ಥ ಸಿಂಗೆ ಅವರು ಅಥಣಿ ಸಾರಿಗೆ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು ಕೂಡಾ ಐಗಳಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡುವಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಮನಸ್ಸು ಮಾಡಿಲ್ಲ ಈ ಕುರಿತು ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಅವರು ಗಮನಹರಿಸಿ ಐಗಳಿ ಗ್ರಾಮದ ಜನರಿಗೆ ಸಾರಿಗೆ ವ್ಯವಸ್ಥೆ ಅನೂಕೂಲ ಮಾಡಿಕೂಡಬೇಕು ಎಂದು ಒತ್ತಾಯಿಸಿದ್ದಾರೆ.

ಇದೆ ರೀತಿಯಾಗಿ ಸಾರಿಗೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದರೆ ಗ್ರಾಮದ ಮುಖಂಡರೊಂದಿಗೆ ಚರ್ಚಿಸಿ ವಿವಿಧ ಸಂಘಟನೆ ಒಕ್ಕೂಟ ಮತ್ತು ವಿಧ್ಯಾರ್ಥಿಗಳೊಂದಿಗೆ ಐಗಳಿ ಕ್ರಾಸ್ ಮುಖ್ಯ ಹೆದ್ದಾರಿ ಬಂದ ಮಾಡಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಂದೇನಮಾಜ ಜಗಲೀಸಾಬ್ ಮುಜಾವರ ಸಾಮಾಜೀಕ ಕಾರ್ಯಕರ್ತರಾದ ಎ ಆರ್ ಪಾಟೀಲ. ಅಮೀತ ನಿಂಬಾಳಕರ್ ಪ್ರಶಾಂತ್ ಬಿರಾದರ ಪ್ರಶಾಂತ್ ಕನಶೆಟ್ಟಿ ದಲಿತ ಮುಖಂಡರಾದ ಆಕಾಶ ಮಾದರ ಸೇರಿದಂತೆ ಮುಂತಾದವರು ಉಪಸ್ಥಿತಿ ಇದ್ದರು.

ಅಥಣಿ , ಯಂಕಚಿ, ಯಲಹಡಗಿ ಅಡಹಳ್ಳಿ , ಕೋಹಳ್ಳಿ ಐಗಳಿ , ತೆಲಸಂಗ ಮಾರ್ಗವಾಗಿ ಅಥಣಿ ವಿಜಯಪೂರ. ಮತ್ತು ವಿಜಯಪೂರ ಮಿರಜ . ಬಸ್ ಸಂಚಾರ ಪ್ರಾರಂಭ ಮಾಡಿದರೆ ವಿಜಯಪುರಕ್ಕೆ ತೆರಳುವ ಈ ಭಾಗದ. ಹಳ್ಳಿಗಳ ಸರ್ವಾಜನಿಕರಿಗೆ ವಿಧ್ಯಾರ್ಥಿಗಳಿ ಇನ್ನೂ ಅನೂಕೂಲವಾಗಲಿದೆ ಇದರಿಂದ ಸಾರಿಗೆ ಇಲಾಖೆಗೆ ಲಾಭದಾಯಕವಾಗಲಿದೆ.

ವರದಿ:- ಆಕಾಶ ಎಮ್
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಭವ ಆಟ ಶ್ಲಾಘಿಸಿದ ನಾಯಕ ಶ್ರೇಯಸ್ ಅಯ್ಯರ ವೈಭವ ಸೂರ್ಯವಂಶಿ ಮತ್ತೊಂದು ವಿಶ್ವ ದಾಖಲೆಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆ