Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರ್ ಬಿ ತಿಮ್ಮಾಪುರ ಅವರಿಗೆ ಮಂತ್ರಿ ಸ್ಥಾನ ನೀಡಬೇಕು : ಕೆಪಿಸಿಸಿ ಮಾಧ್ಯಮ ವಕ್ತಾರ ರಾವಸಾಬ ಐಹೊಳೆ

Advertisement

ಅಥಣಿ : ಉತ್ತರ ಕರ್ನಾಟಕದ ಪ್ರಭಾವಿ ಹಿರಿಯ ರಾಜಕಾರಣಿ, ದಲಿತ ಸಮುದಾಯದ ನಾಯಕ ಆರ್ ಬಿ ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ರಾಜ್ಯ ಮಾಧ್ಯಮ ವಕ್ತಾರ ರಾವಸಾಬ ಐಹೊಳೆ  ಹಾಗೂ ತಾಲೂಕ ಮಾದಿಗ ಮೀಸಲಾತಿ ಹೋರಾಟ ಸಮಿತಿಯ  ಮುಖಂಡರು ಸಿಎಂ ಡಿ. ಕೆ ಶಿವಕುಮಾರ ಹಾಗೂ  ಪಕ್ಷದ ವರಿಷ್ಠರಿಗೆ ಒತ್ತಾಯ ಮಾಡಿದ್ದಾರೆ.
ಅವರು ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ  ಆರ್ ಬಿ ತಿಮ್ಮಾಪುರ ಅವರು  ಉತ್ತರ ಕರ್ನಾಟಕದ ಹಿರಿಯ ಶಾಸಕರಾಗಿ  ಅನೇಕ ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇದಲ್ಲದೆ ಇತ್ತೀಚಿಗೆ ಬಾಗಲಕೋಟೆಯ ಉಪಚುನಾವಣೆಯಲ್ಲಿ ಉಮೇಶ್ ಮೇಟಿ ಅವರ ಗೆಲುವಿನಲ್ಲಿ  ಪ್ರಮುಖ ಪಾತ್ರ ವಹಿಸಿದ್ದರು.  ತಿಮ್ಮಾಪುರ ಅವರು ತಮ್ಮ ರಾಜಕೀಯ ಬದುಕಿನುದ್ದಕ್ಕೂ ಕಾಂಗ್ರೆಸ್‌ನ ತತ್ವ ಸಿದ್ದಾಂತಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಪಕ್ಷ ಸಂಘಟನೆಗೆ ನಿರಂತರ ಶ್ರಮಿಸಿದ್ದಾರೆ. ಪಕ್ಷ ಇವರ ಶ್ರಮವನ್ನು ಪರಿಗಣಿಸಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರದಲ್ಲಿ ಪ್ರಮುಖ ಖಾತೆಯ ಸಚಿವ ಸ್ಥಾನ  ನೀಡಬೇಕು  ಎಂದು ಆಗ್ರಹಿಸಿದ್ದಾರೆ.  

news_1781017853_0_348.webp

 

ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ನಿರ್ದೇಶಕಿ  ಹಾಗೂ ಎಐಸಿಸಿ ಸಂಯೋಜಕಿ ಸುನಿತಾ ಐಹೊಳೆ ಮಾತನಾಡಿ ಉತ್ತರ ಕರ್ನಾಟಕದ ದಲಿತ ಸಮುದಾಯದ ಹಿರಿಯ ನಾಯಕರಾಗಿರುವ ಆರ್ ಬಿ ತಿಮ್ಮಾಪುರ ನಾಲ್ಕೈದು ಬಾರಿ ಸಚಿವರಾಗಿ  ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕೊಡುಗೆಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ರಾಜ್ಯ ಮತ್ತು ಕೇಂದ್ರ ವರಿಷ್ಠರು ಆರ್ ಬಿ ತಿಮ್ಮಪೂರ್ ಅವರಿಗೆ  ಮಂತ್ರಿ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಿದರು. 
ಈ ಸಂದರ್ಭದಲ್ಲಿ ಅಥಣಿ ತಾಲೂಕ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ  ಹನುಮಂತ ಅರ್ದಾಯೂರ, ಸಮಾಜದ ಮುಖಂಡರಾದ  ಕುಮಾರ ಗಸ್ತಿ, ಸಂತೋಷ್ ಹಾದಿಮನಿ, ಸದಾಶಿವ ದೊಡ್ಡಮನಿ, ಸುದೀಪ್ ಐಹೊಳೆ, ಸತೀಶ್ ಕುಲ್ಲೊಳ್ಳಿ, ಪ್ರಶಾಂತ್ ಆಚಾರಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆರ್ ಬಿ ತಿಮ್ಮಾಪುರ ಅವರಿಗೆ ಮಂತ್ರಿ ಸ್ಥಾನ ನೀಡಬೇಕು : ಕೆಪಿಸಿಸಿ ಮಾಧ್ಯಮ ವಕ್ತಾರ ರಾವಸಾಬ ಐಹೊಳೆವಿಶೇಷ ಸಂಪನ್ಮೂಲ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೆಸ್ ನ ಮೂವರು, ಬಿಜೆಪಿ ಓರ್ವ ಅವಿರೋಧ ಆಯ್ಕೆ ಬಾಗಲಕೋಟೆಯಲ್ಲಿ ಸರ್ಕಾರಿ ನೌಕರನಿಗೆ ಡಿಜಿಟಲ್ ಅರೆಸ್ಟ್ : 83.82 ಲಕ್ಷ ರೂ. ದೂಚಿದ ಖದೀಮರು ಪತಿಯೊಂದಿಗೆ ಜಗಳವಾಡಿ ತವರಿಗೆ ತೆರಳುತ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್ : 10 ಜನ ಅರೆಸ್ಟ್  ಉತ್ತಮ ಸಮಾಜಕ್ಕೆ ಆರೋಗ್ಯವಂತ ಜನರೇ ಆಸ್ತಿ: ಶ್ರೀ ವಿಜಯಕುಮಾರ್ಬೆಂಗಳೂರಿನಲ್ಲಿ 50 ಡಿಟೋನೇಟರ್, 225 ಜಿಲೇಟಿನ್ ಕಡ್ಡಿಗಳು ವಶಕ್ಕೆಶಿವಾನಂದ ನೀಲಣ್ಣವರ್ ವಂಚನೆ ಕೇಸ್ : ಚಿತ್ರರಂಗದ ನಟ, ನಟಿಯರಿಗೆ ಶಾಕ್  ಜಗಳ ನೋಡಲು ಹೋದ ಮೂವರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆಕ್ಸ್‌ಫರ್ಡ್ ಶಾಲೆಯ ಮಾಲಿಕರು.ಮುಂಗಾರು ಪ್ರಾರಂಭವಾಗುತ್ತಿದ್ದಂತೆಯೇ ಕೃಷಿ ಅಧಿಕಾರಿಗಳಿಂದ ರೈತರಿಗೆ ರಸಗೊಬ್ಬರ ಬೀಜ ಕ್ರಿಮಿನಾಶಕ ಅನುಕೂಲತೆ ಬಗ್ಗೆ ಮಹತ್ವದ ಸಭೆ :  ಬಸನಗೌಡ ದದ್ದಲ್