Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯಾರೇ ಏನೇ ಹೇಳಿದರೂ ವೀರಶೈವ ಲಿಂಗಾಯತ ಸಭೆ ನಡೆಸುತ್ತೇವೆ : ರೇಣುಕಾಚಾರ್ಯ 

Advertisement
ಬೆಂಗಳೂರು : ವೀರಶೈವ ಲಿಂಗಾಯತ ಸಭೆ ನಡೆಸದಂತೆ ಬಿಎಸ್ ವೈ ಹಾಗೂ ಬಿವೈ ವಿಜಯೇಂದ್ರ ತಿಳಿಸಿದ್ದರು ಕೂಡ ಮಾಜಿ ಸಚಿವ ರೇಣುಕಾಚಾರ್ಯ ಅವರ ಬಣ ಈ ಆದೇಶವನ್ನು ಗಾಳಿಯಲ್ಲಿ ತೂರಿ ಸಭೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ರೇಣುಕಾಚಾರ್ಯ ಬಣ ವೀರಶೈವ ಲಿಂಗಾಯತ ಸಭೆ ನಡೆಸಲು ತೀರ್ಮಾನಿಸಿದಕ್ಕೆ ಬುಧವಾರ ರೇಣುಕಾಚಾರ್ಯರನ್ನು ಬಿಎಸ್ ಯಡಿಯೂರಪ್ಪ ತಮ್ಮ ಮನೆಗೆ ಕರೆಸಿ ನೀವು ಸಮಾವೇಶ ನಡೆಸಿದರೆ ಇದಕ್ಕೆ ಯಡಿಯೂರಪ್ಪ ಕುಟುಂಬವೇ ಚಿತಾವಣೆ ನೀಡಿದೆ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ.


ಇದು ಪಕ್ಷದ ಒಟ್ಟಾರೆ ಬೆಳವಣಿಗೆ ದೃಷ್ಟಿಯಿಂದ ಉಪಯುಕ್ತವಾದುದಲ್ಲ. ಇದರಿಂದ ಸಮುದಾಯದ ಒಟ್ಟಾರೆ ಐಕ್ಯತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆಮೇಲೆ ಸಭೆಗೆ ಅವರು ಬಂದಿಲ್ಲ, ಇವರು ಬಂದಿಲ್ಲ ಎಂದು ಮನಸ್ತಾಪ ಉಂಟಾಗಿ ಸಮಾಜದ ವಿಭಜನೆಗೂ ಕಾರಣವಾಗುತ್ತದೆ. ಹೀಗಾಗಿ ಶಕ್ತಿ ಪ್ರದರ್ಶನ ದೃಷ್ಟಿಯಿಂದ ಇಂಥ ಸಮಾವೇಶ ಬೇಡ ಎಂದು ಎಂದು ಯಡಿಯೂರಪ್ಪ ತಿಳಿಸಿದ್ದರು.


ಆದರೆ ಇದೀಗ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದು, ನಾವು ಕೂಡ ಅನ್ಯ ಸಮಾಜಗಳಂತೆ ನಾವು ನಮ್ಮ ಸಮಾಜದ ಸಂಘಟನೆಗಳು ಸಭೆ ಮಾಡುತ್ತಿದ್ದೇವೆ. ವೀರಶೈವ - ಲಿಂಗಾಯಿತ ಒಳಪಂಗಡಗಳು ಒಂದಾಗಬೇಕು, ನಮ್ಮ ಶಕ್ತಿ ಎನು ಅಂತ ತೋರಿಸಬೇಕು ಇದೇ ನನ್ನ ಉದ್ದೇಶ ಎಂದು ಹೇಳಿದರು.


ಎಲ್ಲರೂ ಆರ್ಥಿಕ, ಸಾಮಾಜಿಕವಾಗಿ ಬಲಾಡ್ಯರಿಲ್ಲ ಅಂತಹವರಿಗೆ 2ಎ ಮೀಸಲಾತಿ ಸಿಗಬೇಕು. ಸಮಾಜ ಒಡೆದು ಹೋಗಬಾರದು ಇತ್ತೀಚೆಗೆ ನಡೆದ ಜಾತಿ ಗಣತಿ ಅವೈಜ್ಞಾನಿಕವಾಗಿವೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಮಹಾಸಂಗಮ ನಡೆಸುತ್ತೇವೆ. ಈ ಸಭೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ರೇಣುಕಾಚಾರ್ಯ ತಿಳಿಸಿದರು.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಭವ ಆಟ ಶ್ಲಾಘಿಸಿದ ನಾಯಕ ಶ್ರೇಯಸ್ ಅಯ್ಯರ ವೈಭವ ಸೂರ್ಯವಂಶಿ ಮತ್ತೊಂದು ವಿಶ್ವ ದಾಖಲೆಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆ