Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಂದಾಯ ಇಲಾಖೆಯಿಂದ ಕ್ರಾಂತಿಕಾರಿ ನನ್ನ ಭೂಮಿ ಅಭಿಯಾನ 

Advertisement
ದಾವಣಗೆರೆ : ರೈತರು ಮತ್ತು ಸಾರ್ವಜನಿಕರು ಕಂದಾಯ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಅವರ ಮನೆ ಬಾಗಿಲಿಗೇ ಸೇವೆ ತಲುಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ದಾವಣಗೆರೆಯಲ್ಲಿ ಕಂದಾಯ ಇಲಾಖೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಯಲ್ಲಿ ಆಗಿರುವ ಪ್ರಮುಖ ಸುಧಾರಣೆಗಳನ್ನು ಹಂಚಿಕೊಂಡರು.

'ನನ್ನ ಭೂಮಿ' ಮತ್ತು ಪೋಡಿ ಮುಕ್ತ ಅಭಿಯಾನದಡಿ ಕಳೆದ ಒಂದು ವರ್ಷದಲ್ಲಿ ರಾಜ್ಯಾದ್ಯಂತ 1,89,300 ರೈತರ ಜಮೀನುಗಳ ಪೋಡಿ ದುರಸ್ತನ್ನು ಮಾಡಿಕೊಡಲಾಗಿದೆ. ಮುಂದಿನ 3-4 ತಿಂಗಳಲ್ಲಿ ಈ ಸಂಖ್ಯೆಯನ್ನು 2.5 ರಿಂದ 3 ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ. ಜಿಲ್ಲೆಯಲ್ಲಿ ಮೃತಪಟ್ಟವರ ಹೆಸರಿನಲ್ಲಿದ್ದ ಸುಮಾರು 90,000 ಜಮೀನುಗಳ ಪೈಕಿ, ಮಾರ್ಚ್ ಅಂತ್ಯದೊಳಗೆ ಕನಿಷ್ಠ 50% ರಷ್ಟು ಪೌತಿ ಖಾತೆ ಆಂದೋಲನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ, ಇದಕ್ಕಾಗಿ ರೈತರು ಅರ್ಜಿ ಹಾಕುವಂತಿಲ್ಲ, ಅಧಿಕಾರಿಗಳೇ ರೈತರ ಮನೆ ಬಾಗಿಲಿಗೆ ಹೋಗಿ ಕನಿಷ್ಠ ದಾಖಲಾತಿಗಳನ್ನು ಪಡೆದು ಪೋಡಿ ಖಾತೆ ದುರಸ್ತನ್ನು ಮಾಡಿಕೊಡಲಾಗುತ್ತಿದೆ.

ಈ ಹಿಂದೆ 2013 ರಿಂದ 2018 ರವರೆಗೆ 5840 ಪ್ರಕರಣಗಳು ಹಾಗೂ 2018 ರಿಂದ 2022 ರವರೆಗೆ 8500 ಪ್ರಕರಣ ಪೋಡಿ ಖಾತೆ ದುರಸ್ತನ್ನು ಮಾಡಲಾಗಿದೆ, ನನ್ನ ಅವಧಿಯಲ್ಲಿ ಕೇವಲ ಒಂದೇ ವರ್ಷದಲ್ಲಿ 1,89,300 ರೈತರ ಜಮೀನುಗಳ ಪೋಡಿ ದುರಸ್ತನ್ನು ಮಾಡಲಾಗಿದೆ ಎಂದು ತಿಳಿಸಿದರು.

ತಾಂಡಾ, ಹಟ್ಟಿ ಮತ್ತು ಆಡಿಗಳ ನಿವಾಸಿಗಳು ಸೇರಿದಂತೆ ಕೆಲವು ವಸತಿ ಪ್ರದೇಶಗಳಲ್ಲಿ ಜನರ ಬಳಿ ದಾಖಲೆಗಳು ಇಲ್ಲದೆ ವಾಸಿಸುತ್ತಿದ್ದರು, ಅವುಗಳನ್ನು ಗುರುತಿಸಿ ಹೊಸ ಕಂದಾಯ ಗ್ರಾಮಗಳೆಂದು ಘೋಷಿಸಿ ಅವರಿಗೆಲ್ಲ ಹಕ್ಕುಪತ್ರ ನೀಡಲಾಗುತ್ತಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಒಟ್ಟು 2,70,000 ಹಕ್ಕು ಪತ್ರಗಳನ್ನು ಸಿದ್ಧಪಡಿಸಲಾಗಿದೆ.

ಹೊಸಪೇಟೆಯಲ್ಲಿ ಸುಮಾರು 1,11,000 ಕಂದಾಯ ಗ್ರಾಮಗಳ ಹಕ್ಕು ಪತ್ರಗಳನ್ನು ವಿತರಿಸಲಾಗಿತ್ತು. ಫೆಬ್ರವರಿ 14 ರಂದು ಹಾವೇರಿಯಲ್ಲಿ ಸುಮಾರು 1,10,000 ಹಕ್ಕುಪತ್ರಗಳನ್ನು ವಿತರಿಸಲಾಗುವುದು.

ರಾಜ್ಯದಲ್ಲಿ 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿವೆ, ಅವುಗಳನ್ನು ಗುರುತಿಸಿ ವಾರಸುದಾರ ಖಾತೆಗೆ ವರ್ಗಾವಣೆ ಮಾಡಲು ಕ್ರಮವಹಿಸಲಾಗಿದೆ, ಅದರಲ್ಲಿ 11 ಲಕ್ಷ ಜಮೀನನ್ನು ಇ-ಪೌತಿ ಅಭಿಯಾನದಡಿ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮವಹಿಸಲಾಗಿದೆ ಎಂದರು.

 

 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಸಭೆ - ವಿಧಾನಪರಿಷತ್‌ನ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ : ಕಣದಲ್ಲಿ 8 ಜನನೀರಿನ ಟ್ಯಾಂಕ್‌ಗೆ ಬಿದ್ದು 18 ತಿಂಗಳ ಹೆಣ್ಣು ಮಗು : ಉಪ್ಪಿನಲ್ಲಿ ಮಲಗಿಸಿ ಖುರಾನ್ ಪಠಿಸಿದ ಪೋಷಕರು ಚೇಳೂರಿನಲ್ಲಿ ವಿಶೇಷ ಸ್ವಚ್ಛತಾ ಕಾರ್ಯ : ಪಿಡಿಒ ಕೆ. ವೆಂಕಟಾಚಲಪತಿ ನೇತೃತ್ವದಲ್ಲಿ ಕಸ ತೆರವುಶಿಕ್ಷಕರು ನಿಸ್ವಾರ್ಥದಿಂದ ಸೇವೆ ಮಾಡಿದರೆ ಸಮಾಜ ಅಂತವರನ್ನು ಎಂದಿಗೂ ಮರೆಯದು: ಮಿರ್ಜಿಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದು ಅಪರಾಧವಲ್ಲ : ಸುಪ್ರೀಂ ಕೋರ್ಟ್ ಅಗ್ನಿವೀರರಾಗಿ ಆಯ್ಕೆಯಾದ ಒಂದೇ ಶಾಲೆಯ ಕಲಿತ 17 ವಿದ್ಯಾರ್ಥಿಗಳು ವಿಜಯಪುರ ಪಾನ್ ಶಾಪ್ ನಲ್ಲಿ ನಿಗೂಢ ಸ್ಫೋಟ : ಜನರಲ್ಲಿ ಆತಂಕ ಸಂಚರಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ದುರ್ಮರಣ 2013ರಲ್ಲಿ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ : ಜಿ. ಪರಮೇಶ್ವರ್ಸರ್ಕಾರಿ ಕೆಲಸ ಕೊಡಿಸುವುದಾಗಿ ಉತ್ತರ ಕರ್ನಾಟಕದ 45 ಜನರಿಗೆ 5.35 ಕೋಟಿ ವಂಚನೆ : ಅಪ್ಪ ಮಗಳು ಅರೆಸ್ಟ್