
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಬಸ್ ನಿಲ್ದಾಣ ಜಲಾವೃತವಾಗಿದ್ದು, ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ನಿಲ್ಲಿಸಿದ್ದ ಬೈಕ್ ಗಳು ನೀರಿನಲ್ಲಿ ಮುಳುಗುವ ಹಂತ ತಲುಪಿತ್ತು.

ಗುಂಡ್ಲುಪೇಟೆ ನಂಜನಗೂಡು ರಸ್ತೆಯಲ್ಲಿ ಮಳೆಯ ನೀರು ಹೊಳೆ ಯಂತೆ ಹರಿಯುತ್ತಿತ್ತು. ಮಳೆಯ ನೀರು ಸರಾಗವಾಗಿ ಹರಿಯಲಾಗದ ಹಿನ್ನಲೆಯಲ್ಲಿ ತಗ್ಗು ಪ್ರದೇಶದತ್ತ ಮಳೆಯ ನೀರು ರಭಸವಾಗಿ ಹೊಳೆಯಂತೆ ಹರಿಯುತ್ತಿತ್ತು.
ವರದಿ : ಸ್ವಾಮಿ ಬಳೇಪೇಟೆ

