LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬೈಲಹೊಂಗಲ ತಾಲೂಕು ಅಧ್ಯಕ್ಷರಾಗಿ ಶಿವು ಜೋಳದ ನೇಮಕ

ಪತ್ರಕರ್ತರ ಧ್ವನಿ ಸಂಘಟನೆಯ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

Advertisement

ಬೈಲಹೊಂಗಲ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಬೈಲಹೊಂಗಲ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಶಿವು ಜೋಳದ ಅವರನ್ನು ನೇಮಕ ಮಾಡಲಾಗಿದೆ. ಅವರೊಂದಿಗೆ ಸಂಘಟನೆಯ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜವಾಬ್ದಾರಿ ವಹಿಸಲಾಗಿದೆ.

ನೇಮಕಾತಿ ಆದೇಶ ನೀಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ಪತ್ರಿಕಾರಂಗವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮಹತ್ವದ ಜವಾಬ್ದಾರಿ ಹೊಂದಿದೆ. ಪತ್ರಕರ್ತರು ಯಾವುದೇ ಒತ್ತಡ, ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ವರದಿ ಮಾಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯನಿರ್ವಹಿಸಬೇಕು. ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಅವರ ಹಕ್ಕುಗಳಿಗಾಗಿ ಸಂಘಟನೆ ಸದಾ ಶ್ರಮಿಸಲಿದೆ ಎಂದರು.

ನೂತನ ಅಧ್ಯಕ್ಷ ಶಿವು ಜೋಳದ ಮಾತನಾಡಿ, ಪತ್ರಕರ್ತರು ಯಾವುದೇ ಗೊಂದಲಗಳಿಗೆ ಒಳಗಾಗದೆ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಪತ್ರಿಕಾರಂಗದ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಸಂಘಟನೆಯ ಎಲ್ಲ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪತ್ರಕರ್ತರ ಹಿತಕ್ಕಾಗಿ ಹಾಗೂ ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸುವುದಾಗಿ ತಿಳಿಸಿದರು.

ಸಂಘಟನೆಯ ಗೌರವಾಧ್ಯಕ್ಷರಾಗಿ ಬಿ.ಜಿ. ಕುಂಬಾರ, ಉಪಾಧ್ಯಕ್ಷರಾಗಿ ಭೀಮಸೇನ ಕುಂಬಾರ, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ ಕಡೇಮನವರ, ಕಾರ್ಯದರ್ಶಿಯಾಗಿ ಸಿದ್ದು ಕನಬರಗಿ, ಖಜಾಂಚಿಯಾಗಿ ವಿಜಯಜಿ ಶಾಸ್ತ್ರಿ, ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ ಗಂಗಸನವರ, ಮಾಧ್ಯಮ ಪ್ರಚಾರಕರಾಗಿ ಸಮೀರ್ ಮುಲ್ಲಾನವರ ಹಾಗೂ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಶಾನೂರ್ ಮತ್ತಿಹಾಳ ಅವರನ್ನು ನೇಮಕ ಮಾಡಲಾಗಿದೆ.

ವರದಿ : ಸಮೀರ್ ಮುಲ್ಲಾನವರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಬ್ಬು ಬೆಳೆಗಾರರ ಪ್ರತಿಭಟನೆ : ಅಸ್ವಸ್ಥ ರೈತನನ್ನ ನಿರ್ಜನ ಪ್ರದೇಶದಲ್ಲಿ ಬಿಟ್ಟ ಪೊಲೀಸ್..?? ಬಾಗಲಕೋಟೆಯಲ್ಲಿ ಉತಾರಕ್ಕೆ 10 ಸಾವಿರ ಲಂಚಕ್ಕೆ ಬೇಡಿಕೆ : ಮುಖ್ಯಾಧಿಕಾರಿ ಸೇರಿ ಮೂವರು ಲೋಕಾಯುಕ್ತ ಬಲೆಗೆಕುಡಿಯುವ ನೀರು, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯಿಲ್ಲದೆ ಸಾರ್ವಜನಿಕರಿಗೆ ತೀವ್ರ ತೊಂದರೆಜನವರಿ 17 ರ ವರೆಗೆ ರಣಜಿ ಟ್ರೋಫಿ ಪಂದ್ಯಗಳಿಗೆ ಬ್ರೇಕ್ ತಿಗಣೆಗಳಿಂದ ಕಾಪಾಡಮ್ಮಾ ಸವದತ್ತಿ ಯಲ್ಲಮ್ಮಾ : ಹುಂಡಿಯಲ್ಲಿ ಭಕ್ತನ ಹರಕೆಬಾಗಲಕೋಟೆಯಲ್ಲೂ ಸ್ಟಿಂಗ್, ಹನಿಟ್ರ್ಯಾಪ್ ಸದ್ದು: ವಿಜಯಾನಂದ‌ ಕಾಶಪ್ಪನವರ, ದೊಡ್ಡನಗೌಡ ಪಾಟೀಲ ಮಧ್ಯೆ ವಾಕ್ಸಮರಸಾರ್ವಜನಿಕರಿಗೆ ಶಾಕ್ ಮೇಲೆ ಶಾಕ್: ಸಕ್ಕರೆ ಕೆಜಿಗೆ 4 ರೂ. ಏರಿಕೆ ಮಾಡಿದ ಕೇಂದ್ರ ಸರ್ಕಾರ ಎಕ್ಸಪ್ರೆಸ್ ಬಸ್ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಎನ್.ಎಸ್. ಬೋಸರಾಜುವೆಸ್ಟ್ ಇಂಡೀಸ್ ಗೆ ಆರಂಭಿಕ ಅಘಾತ ಕಿಂಗ್ ಕೊಹ್ಲಿಗೆ ಮತ್ತೊಂದು ದಾಖಲೆ ಮೈಲಿಗಲ್ಲು