ನವದೆಹಲಿ : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಆತ್ಮಚರಿತ್ರೆ , 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಇಂದು ದೇಶಾದ್ಯಂತ ಇರುವ ಪುಸ್ತಕ ಮಳಿಗೆಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಕಾಶಕರಾದ ಹಾರ್ಪರ್‌ಕಾಲಿನ್ಸ್ (HarperCollins) ಪ್ರಕಾರ, ಈ ಬಹುನಿರೀಕ್ಷಿತ ಪುಸ್ತಕವು ಬೆಳಿಗ್ಗೆ 10 ಗಂಟೆಯಿಂದ ಲಭ್ಯವಿರುತ್ತದೆ.
ಪುಸ್ತಕ ಮಳಿಗೆಗಳು ಸಜ್ಜು
ಸೋಮವಾರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಹಾರ್ಪರ್‌ಕಾಲಿನ್ಸ್ ಸಂಸ್ಥೆಯು, ದೇಶಾದ್ಯಂತ ಈ ಬಹುನಿರೀಕ್ಷಿತ ಆತ್ಮಚರಿತ್ರೆಯನ್ನು ಸ್ವಾಗತಿಸಲು ಪುಸ್ತಕ ಮಳಿಗೆಗಳು ಸಿದ್ಧವಾಗುತ್ತಿದ್ದು, ಜನರ ಉತ್ಸಾಹ ಹೆಚ್ಚಾಗುತ್ತಿದೆ ಎಂದು ಹೇಳಿದೆ. ಈ ಪುಸ್ತಕವು ಒಬ್ಬ ಧೈರ್ಯಶಾಲಿ ಮಹಿಳೆಯ ಕಥೆಯಾಗಿದೆ.
ಒಬ್ಬ ವ್ಯಕ್ತಿ ಹಾಗೂ ಒಂದು ದೇಶದ ಮೇಲಿನ ಪ್ರೀತಿ, ತನ್ನ ಜೀವನವನ್ನು ಮರುರೂಪಿಸಿಕೊಳ್ಳಲು ಮತ್ತು ತಾನು ಸೇರಿರುವ ಭಾರತಕ್ಕೆ ಸೇವೆ ಸಲ್ಲಿಸಲು ಆಕೆ ಕಂಡುಕೊಂಡ ಶಕ್ತಿಯನ್ನು ಈ ಆತ್ಮಚರಿತ್ರೆ ಒಳಗೊಂಡಿದೆ ಎಂದು ಪ್ರಕಾಶಕರು ಬರೆದುಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಪುಸ್ತಕವು ಮಳಿಗೆಗಳಿಗೆ ತಲುಪಲಿದೆ ಎಂದು ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ದೇಶದ ಪ್ರಮುಖ ಮಳಿಗೆಗಳಲ್ಲಿ ಲಭ್ಯ
ಈ ಆತ್ಮಚರಿತ್ರೆಯು ಚೆನ್ನೈನ ಹಿಗ್ಗಿನ್‌ಬೋಥಮ್, ದೆಹಲಿಯ ಬಹ್ರಿಸನ್ಸ್ ಮತ್ತು ಮಿಡ್‌ಲ್ಯಾಂಡ್, ಮುಂಬೈನ ದಿ ವೈಟ್ ಕ್ರೋ ಮತ್ತು ಟೈಟಲ್ ವೇವ್ಸ್, ಕೇರಳದ ಮಾತೃಭೂಮಿ ಬುಕ್ಸ್, ಕರ್ನಾಟಕದ ಬ್ಲಾಸಮ್ಸ್ ಮತ್ತು ದಿ ಬುಕ್‌ವರ್ಮ್, ಹಾಗೂ ಮಹಾರಾಷ್ಟ್ರ, ಕರ್ನಾಟಕ, ದೆಹಲಿ-ಎನ್‌ಸಿಆರ್, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಕೇರಳದಾದ್ಯಂತ ಇರುವ ಕ್ರಾಸ್‌ವರ್ಡ್ ಮಳಿಗೆಗಳು ಸೇರಿದಂತೆ ದೇಶದ ಹಲವಾರು ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಬಿಡುಗಡೆಯಾಗಲಿದೆ.


