
ಶ್ರೀರಾಮ ನವಮಿಯ ಪ್ರಯುಕ್ತ ನೆರೆದಿದ್ದ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.ಈ ವೇಳೆ ಮಾತನಾಡಿದ ಅಭಿಷೇಕ್ ಎಲೆಕ್ಟ್ರಿಕಲ್ಸ್ ಸರ್ವೀಸ್ ನ ಮಾಲೀಕರು ಹಾಗೂ ಸಮಾಜ ಸೇವಕರಾದ ಪಿ ಕೃಷ್ಣಯ್ಯ, 'ನಮ್ಮ ಹಿಂದೂ ಹಬ್ಬಗಳನ್ನು ಆಚರಿಸುವುದರಿಂದ ನಮ್ಮ ಸಂಸ್ಕೃತಿಯನ್ನು ಕಾಪಾಡುವ ಮೂಲಕ ಜನರೆಲ್ಲರೂ ಭಾವೈಕ್ಯತೆಯಿಂದ ಬಾಳಲು ಸಹಕಾರವಾಗುತ್ತದೆ. ಹಾಗೆಯೇ ಬೋರ್ ವೆಲ್ ಉದ್ಘಾಟನೆಯಿಂದ ಸ್ಥಳೀಯರಿಗೆ ನೀರಿನ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ', ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜು ವೇಣುಗೋಪಾಲ್ , ಲೋಕೇಶ್ ಟೆಂಟ್ ಹೌಸ್ , ಸಿದ್ದಗಂಗಯ್ಯ ವಿನಾಯಕ ಗ್ಯಾರೇಜ್ ಪಾರ್ವತಿನಗರದ ಮುಖಂಡರು, ವ್ಯಾಪಾರಸ್ಥರು ಶ್ರೀ ದುಗ್ಗಲಮ್ಮ ಹಿರಿಯ ನಾಗರೀಕರ ಸಂಘದ ಪದಾಧಿಕಾರಿಗಳು ಸಮಸ್ತ ಬಂಧು ಭಗನಿಯರು ಉಪಸ್ಥಿತರಿದ್ದರು.
ವರದಿ:- ಅಯ್ಯಣ್ಣ ಮಾಸ್ಟರ್

