ಸಿಂಧನೂರು : 2025-26ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90 ಅಂಕಗಳನ್ನು ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಕರ್ನಾಟಕ ಭೋವಿ (ವಡ್ಡರ್) ಸಮಾಜ ತಾಲೂಕು ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಅಧಿಕಾರಿಗಳಾದ ಟಿ,ಅಂಬಣ್ಣ ನಿವೃತ್ತ ಸರ್ಕಾರಿ ಅಭಿಯೋಜಕರು, ಹನುಮಂತಪ್ಪ ಉಮಾಲೂಟಿ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಾಂತರರು ಇವರ ಸೇವಾ ನಿವೃತ್ತಿ ನಿಮಿತ್ಯ ಅಭಿನಂದನ ಸಮಾರಂಭ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಯಿತು ಜೂನ್ 14 ರವಿವಾರ ನಗರದ ಕುಷ್ಟಗಿ ರಸ್ತೆ ರಸ್ತೆಯಲ್ಲಿರುವ ಸರ್ಕ್ಯೂಟ್ ಹೌಸ್ ನ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಆತ್ಮವಿಶ್ವಾಸವನ್ನು ಮೂಡಿಸುವ ಹಿನ್ನೆಲೆಯಲ್ಲಿ ಪ್ರತಿಭಾ ಪುರಸ್ಕಾರದ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು . ಸಮಾಜದ ನಿವೃತ್ತ ಅಧಿಕಾರಿಗಳಾದ ಟಿ.ಅಂಬಣ್ಣ, ಹಾಗೂ ಹನುಮಂತಪ್ಪ ಉಮಲೂಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರಾದ ನಾರಾಯಣಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಭೀಮರಾಯ ಸೇರಿದಂತೆ ತಾಲೂಕು ಹಾಗೂ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು. 
ಈ ಸಂದರ್ಭದಲ್ಲಿ ಭೋವಿ ಸಮಾಜದ ಮಾಜಿ ಅಧ್ಯಕ್ಷ ಲಕ್ಷ್ಮಣ ಭೋವಿ,ಗೌರವಾಧ್ಯಕ್ಷ ಕೆ.ನಾಗಪ್ಪ ಕಲ್ಲೂರು, ತಾಲೂಕು ಅಧ್ಯಕ್ಷ ಆನಂದ ಆಯನೂರು, ಯುವ ಘಟಕದ ಅಧ್ಯಕ್ಷ ಹನುಮೇಶ ಭೋವಿ, ಮಾಜಿ ಅಧ್ಯಕ್ಷ ಮರಿಯಪ್ಪ ಬಂಡಿ, ಶಂಕರಪ್ಪ ಬ್ಯಾಡಗಿ ವಿರುಪಾಪುರ, ವೀರೇಶ್ ಸಿದ್ರಾಮಪುರ. ದುರ್ಗಪ್ಪ ಹಂಚಿನಾಳ. ಅಂಬಣ್ಣ ಗುಂಜಳ್ಳಿ.ಜಿಲ್ಲಾ ಸಮಿತಿ ಸಲಹೆಗಾರ ಲಕ್ಷ್ಮಣ ಸಾಲಗುಂದ, ನಗರ ಘಟಕದ ಅಧ್ಯಕ್ಷ. ರವಿ ಗೆಜ್ಜಳ್ಳಿ, ಸೋಮಲಾಪುರ ಸೇರಿದಂತೆ ಇನ್ನಿತರರು ಇದ್ದರು.
ವರದಿ;ಬಸವರಾಜ ಬುಕ್ಕನಹಟ್ಟಿ


