LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಬಾನಾಮತಿ ಕಾಟ ಎಂದು ಹೆತ್ತ ಮಗಳನ್ನೇ ಸರಪಳಿಯಿಂದ ಕಟ್ಟಿಹಾಕಿ ಅಮಾನವೀಯತೆ ಮೆರೆದ ಪೋಷಕರು

Advertisement
ಬೆಳಗಾವಿ: ಬಾನಾಮತಿ ಕಾಟ ಎಂದು ಮೂಢನಂಬಿಕೆಗೆ ಬೇದರಿ ಹೆತ್ತ ಮಗಳನ್ನೇ ಸರಪಳಿಯಿಂದ ಕಟ್ಟಿಹಾಕಿ ಅಮಾನವೀಯತೆ ಮೆರೆದ ಘಟನೆ ಬೆಳಗಾವಿಯ ಕಾಗವಾಡ ತಾಲೂಕಿನ ಮೂಳೆ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಬುದ್ದಿಮಾಂದ್ಯ ಯುವತಿಯನ್ನು ಹೆತ್ತವರೇ ಹಲವು ವರ್ಷ ಗಳಿಂದ ಸರಪಳಿಯಿಂದ ಕಟ್ಟಿಹಾಕಿ ಗೃಹ ಬಂಧನದಲ್ಲಿಟ್ಟಿದ್ದಾರೆ.

ಸಿದ್ರಾಯ ಎಂಬ ವ್ಯಕ್ತಿ ತನ್ನ ಮಗಳನ್ನು ಬಾನಾಮತಿ ಭಯದಿಂದ ಮನೆಯೊಳಗೆ ಸರಪಳಿ ಹಾಕಿ ಹಲವು ವರ್ಷ ಬಂಧನದಲ್ಲಿಟ್ಟಿದ್ದ ಎಂಬ ಆರೋಪ ಕೇಳಿಬಂದಿದೆ.

ಬಾನಾಮತಿ ಭಯದಿಂದ ಹೆತ್ತ ಮಗಳನ್ನೇ ತಂದೆ ಸಿದ್ರಾಯ ಗೃಹಬಂಧನದಲ್ಲಿಟ್ಟಿದ್ದಾರೆ. 10 ವರ್ಷಗಳ ಹಿಂದೆ ಸ್ನೇಹಾ ಎಲ್ಲರಂತೆ ಕಾಲೇಜಿಗೆ ಹೋಗುತ್ತಿದ್ದಳು. ಈ ವೇಳೆ ಯಾರೋ ಬಾನಾಮತಿ ಮಾಡಿದ್ದಾರೆ ಎಂದು ಕುಟುಂಬದವರು ನಂಬಿದ್ದಾರೆ.

ಅದಾದ ಬಳಿಕ ಸ್ನೇಹಾ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದು, ಅಸಾಮಾನ್ಯವಾಗಿ ಕುಣಿಯುವುದು, ಅತಿರೇಕದ ಚಲನೆಗಳನ್ನು ಮಾಡುವುದು ಕಂಡುಬಂದಿದೆ.

ಆಕೆಗೆ ಯಾರೋ ಬಾನಾಮತಿ ಮಾಡಿಸಿದ್ದಾರೆ ಎಂದು ಭಾವಿಸಿದ ಕುಟುಂಬಸ್ಥರು ಸ್ವಾಮೀಜಿ ಮೊರೆ ಹೋಗಿ ಅವರು, ಬಾನಾಮತಿ ನಿವಾರಣೆಗೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ ಎಂದು ತಿಳಿಸಿದ್ದರಿಂದ, ಚಿಕಿತ್ಸೆಗೂ ಮುಂದಾಗದೇ ಮಗಳನ್ನು ಮನೆಯಲ್ಲೇ ಗೃಹಬಂಧನದಲ್ಲಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸರಪಳಿ ತೆಗೆದರೆ ಜನರಿಗೆ ಕಲ್ಲು ಎಸೆಯುತ್ತಾಳೆ, ಓಡಿ ಹೋಗುತ್ತಾಳೆ" ಎಂಬ ಕಾರಣದಿಂದ ಹೀಗೆ ಕಟ್ಟಿಹಾಕಲಾಗಿದೆ ಎಂದು‌ ತಿಳಿದು ಬಂದಿದೆ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ