LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಎಲ್ಲರೂ ಸೇರಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕಿದೆ: ಡಿ. ಕೆ ಶಿವಕುಮಾರ್ 

Advertisement

ಬೆಂಗಳೂರು: "ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಎಲ್ಲರೂ ಒಟ್ಟಾಗಿ ಸೇರಿ ಬಗೆಹರಿಸಬೇಕು.

 ಇದು ಯಾರದೋ ಒಬ್ಬರ ಜವಾಬ್ದಾರಿಯಲ್ಲ. ಇದು ಎಲ್ಲರ ಜವಾಬ್ದಾರಿ‌.‌ ನಾನು ಒಬ್ಬರ ಮೇಲೆಯೆ ಹೊರೆ ಹಾಕಲು ಇಷ್ಟಪಡುವುದಿಲ್ಲ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು."ರೈತರು ಕಬ್ಬು ಬೆಳೆದರೆ ಕಾರ್ಖಾನೆ ಇರಲಿದೆ. ಕಾರ್ಖಾನೆಗಳು ಸಹ ನಷ್ಟವಾಗದಂತೆ ಕಬ್ಬನ್ನು ಅರೆಯಬೇಕಿದೆ.

ಆಗ ಇಬ್ಬರೂ ಉಳಿಯುತ್ತಾರೆ.‌ ಇದು ಎಲ್ಲರ ಬದುಕಿನ ಪ್ರಶ್ನೆ. ರೈತರ, ಸಕ್ಕರೆ ಕಾರ್ಖಾನೆಗಳ, ಸರ್ಕಾರದ ಸಮಸ್ಯೆಗಳು ಏನಿವೆ ಎಂದು ನಾವು ಒಟ್ಟಾಗಿ ಚರ್ಚಿಸಬೇಕಿದೆ" ಎಂದರು.

"ಬರ ಪರಿಹಾರ ವಿಚಾರವಾಗಿ ಚರ್ಚಿಸಲು ಕೇಂದ್ರ ಸರ್ಕಾರದ ಬಳಿ ಸಮಯ ಕೇಳಿದ್ದೇನೆ. ಆದರೆ ಇನ್ನೂ ಸಮಯ ನಿಗದಿಯಾಗಿಲ್ಲ. ಜನಪ್ರತಿನಿಧಿಗಳಿಗೆ ಕಬ್ಬು ಬೆಳಗಾರರ ಸಮಸ್ಯೆಗಳ ಚರ್ಚೆಯ ವಿಚಾರ ತಿಳಿಸಿದ್ದೇನೆ. ಸಕ್ಕರೆ ಕಾರ್ಖಾನೆಗಳ ಮಾಲೀಕರು, ರೈತರ ಬಳಿಯು ಪ್ರತ್ಯೇಕವಾಗಿ ಮಾತಾಡಬೇಕಿದೆ.

ಕೇಂದ್ರ ಮಂತ್ರಿಗಳ ಬಳಿಯೂ ಮಾತನಾಡುತ್ತೇನೆ.‌ ಅವರೂ ಸಹ ತಮ್ಮ ಕೈಲಾದಷದ್ಟು ಒಳ್ಳೆಯ ಕೆಲಸ‌ ಮಾಡಿದ್ದಾರೆ. ಈ ಸಮಸ್ಯೆಯನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಬಗೆಹರಿಸಬೇಕಿದೆ" ಎಂದು ಹೇಳಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಿಯತಮನನ್ನು ಗಲ್ಲಿಗೇರಿಸಿ : ಡೆತ್‌ನೋಟ್ ಬರೆದಿಟ್ಟು ಪ್ರಾಣ ಬಿಟ್ಟ ಶಿಕ್ಷಕಿ ಇನ್ನಿಂಗ್ಸ್ ಮುನ್ನಡೆಯನ್ನಾದರೂ ಪಡೆಯಲು ಕರ್ನಾಟಕ ಮತ್ತೇ ವಿಫಲ ಕಬ್ಬು ಬೆಳೆಗಾರರ ಸಮಸ್ಯೆಗೆ ಶೀಘ್ರ ಪರಿಹಾರ : ಪ್ರಧಾನಿಗೆ ಭೇಟಿಗಾಗಿ ಸಮಯ ಕೋರಿದ ಸಿಎಂ ಹಿಂಗಾರು ಕೃಪೆಯಿಂದ ನೀರಿನ ಸಮಸ್ಯೆ ನಿವಾರಣೆ: ಕೋಡಿ ಶ್ರೀಗಳ ಭವಿಷ್ಯಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಜಿ. ಪರಮೇಶ್ವರ್ ಜಾಲಿರೈಡ್ ಇಡಿ ದೇಶದಲ್ಲಿ ಕಬ್ಬು ಬೆಳೆಗಾರರಿಗೆ ನ್ಯಾಯ ನೀಡಿದ್ದು ಕೇಂದ್ರ ಸರ್ಕಾರ: ಬಿ.ವೈ. ವಿಜಯೇಂದ್ರ ಎಲ್ಲರೂ ಸೇರಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕಿದೆ: ಡಿ. ಕೆ ಶಿವಕುಮಾರ್ ಪಾಕಿಸ್ತಾನ- ಇಂಗ್ಲೆಂಡ್ ಪಂದ್ಯ ಇಂದು ಭಾರತ- ಜಿಂಬಾಬೆ ಮಹಿಳಾ ಕ್ರಿಕೆಟ್ ತಂಡಗಳ 3 ನೇ ಟಿ-20 ಪಂದ್ಯ ಇಂದು ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ : ಬೆಂಗಳೂರಿನಲ್ಲಿ 148 ಪ್ರಯಾಣಿಕರು ಸೇಫ್