ಆಲೂರು: ಕರ್ನಾಟಕ ಕ್ರಿಕೆಟ್ ತಂಡವು ಸೌರಾಷ್ಟ್ರ ವಿರುದ್ಧ ಇಲ್ಲಿ ನಡೆದಿರುವ ರಣಜಿ ಟ್ರೋಫಿ ಪಂದ್ಯಾವಳಿಯ 2 ನೇ ಲೀಗ್ ಪಂದ್ಯದಲ್ಲಿಯೂ ಇನ್ನಿಂಗ್ಸ್ ಮುನ್ನಡೆ ಪಡೆಯಲು ವಿಫಲವಾಯಿತು.
ಇಲ್ಲಿನ ಆಲೂರು ಕೆಎಸ್ ಸಿಎ ಮೈದಾನದಲ್ಲಿ ಪಂದ್ಯದ 3 ನೇ ದಿನ 349 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡ ಸೌರಾಸ್ಟ್ರ 7 ರನ್ ಗಳ ಇನ್ನಿಂಗ್ಸ್ ಮುನ್ನಡೆ ಪಡೆಯಿತು. ಕರ್ನಾಟಕ ಸ್ವಲ್ಪದರಲ್ಲಿಯೇ ಇನ್ನಿಂಗ್ಸ್ ಮುನ್ನಡೆಯಿಂದ ತಪ್ಪಿಸಿಕೊಂಡಿತು.
ಕರ್ನಾಟಕ ದ್ವಿತೀಯ ಸರದಿಯಲ್ಲಿ 2 ವಿಕೆಟ್ ಗೆ 99 ರನ್ ಗಳಿಸಿದ್ದು, 92 ರನ್ ಗಳ ಮುನ್ನಡೆ ಪಡೆದಿದೆ.


