Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಂಗನವಾಡಿ ಶಿಕ್ಷಕಿಯರ ಪಾತ್ರ ಶ್ಲಾಘನೀಯ : ಸುಜಾತ ಮುನಿರಾಜು

Advertisement
ಬೆಂಗಳೂರು: ಮಕ್ಕಳನ್ನು ಸುಧಾರಿಸಿ, ತಿದ್ದಿ ತೀಡಿ ಸಮಾಜಕ್ಕೆ ಒಂದು ಶಕ್ತಿಯನ್ನಾಗಿ ರೂಪಿಸುವಲ್ಲಿ ಅಂಗನವಾಡಿ ಶಿಕ್ಷಕಿಯರ ಪಾತ್ರ ಶ್ಲಾಘನೀಯ' ಎಂದು ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತ ಮುನಿರಾಜು ತಿಳಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆಯ ಶ್ರೀ ಸಾಯಿ ಕಲ್ಯಾಣ ಮಂಟಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾದ ಅಂಗನವಾಡಿಗಳಿಗೆ ಟಿವಿ, ಮೆಡಿಕಲ್ ಕಿಟ್ ಮತ್ತು ನೋಟ್ ಬುಕ್ಸ್ ವಿತರಿಸಿ ಮಾತನಾಡಿದರು.
ಸಿಡಿಪಿಓ( ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ) ಕೆ.ಎಸ್. ಶಕುಂತಲಾ ದೇವಿ ಮಾತನಾಡಿ,' ಅಂಗನವಾಡಿ ಕೇಂದ್ರಗಳಿಗೆ ಕಲಿಕೆಗೆ ಪೂರಕವಾದ ಪೀಠೋಪಕರಣ, ಆಟಿಕೆ ಸಾಮಗ್ರಿ ಮತ್ತು ನೋಟ್ ಬುಕ್ ಸಾಮಗ್ರಿಗಳನ್ನು ಉದ್ಯಮಿಗಳು ಮತ್ತು ದಾನಿಗಳಿಂದ ಶಾಸಕರು ಈಗಾಗಲೇ ಕೊಡಿಸಿದ್ದಾರೆ. ಅವರ ಸೇವೆ ಮರೆಯುವಂತಿಲ್ಲ' ಎಂದರು.
ಶಾಸಕ ಎಸ್. ಮುನಿರಾಜು ಮಾತನಾಡಿ,' ಮಕ್ಕಳಲ್ಲಿ ಬೌದ್ಧಿಕ ಮತ್ತು ಮಾನಸಿಕ ಶಕ್ತಿ ಬೆಳವಣಿಗೆಗೆ ಪಠ್ಯದ ಜೊತೆಗೆ ವಿವಿಧ ಆಟಿಕೆ ಸಾಮಗ್ರಿ, ಟಿವಿ, ಆರೋಗ್ಯಕ್ಕಾಗಿ ಮೆಡಿಕಲ್ ಕಿಟ್ ಸಹ ನೀಡಲಾಗುತ್ತಿದೆ'
ಕ್ಷೇತ್ರದ ಅನೇಕ ಭಾಗಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಟ್ಟಡದ ಕೊರತೆ ಇದೆ, ಮುಂದೆ ಅದನ್ನೆಲ್ಲ ಸರಿಪಡಿಸಿ ನನ್ನ ಕ್ಷೇತ್ರದ ಅಂಗನವಾಡಿ ಕೇಂದ್ರಗಳು ಮಾದರಿಯಾಗುವಂತೆ ಮಾಡಲಾಗುತ್ತದೆ'ಎಂದು ತಿಳಿಸಿದರು.
ಸಮಾರಂಭದಲ್ಲಿ ಸರ್ಕಾರಿ ಕಟ್ಟಡದ ಅಂಗನವಾಡಿ ಕೇಂದ್ರಗಳಿಗೆ ಟಿವಿ, ಇತರೆ ಅಂಗನವಾಡಿಗಳಿಗೆ ಮೆಡಿಕಲ್ ಕಿಟ್, ಸೂರಜ್ ಫೌಂಡೇಶನ್ ವತಿಯಿಂದ ಉಚಿತ ನೋಟ್ ಬುಕ್ಸ್ ನೀಡಲಾಯಿತು.
ಶಿಶು ಅಭಿವೃದ್ಧಿ ಯೋಜನ ಸಹಾಯಕ ಅಧಿಕಾರಿ ತೇಜಸ್ವಿನಿ, ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತ ಎಸ್ ಮುನಿರಾಜು, ಶಿಕ್ಷಕಿಯರು ಮತ್ತು ಮೇಲ್ವಿಚಾರಕಿಯರು ಇದ್ದರು.

ವರದಿ: ಅಯ್ಯಣ್ಣ ಮಾಸ್ಟರ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್