ಇಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದಂತ ಅವರು, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ತೀರ್ಮಾನ ಆಗಿರುವ ವಿಷಯವಾಗಿದೆ.
ಡಿಕೆ ಶಿವಕುಮಾರ್ ಅವರೇ ನೀವು ಯಾವುದಕ್ಕೂ ಪ್ರತಿಕ್ರಿಯೆ ಕೊಡಬಾರದು. ಹೇಳಿಕೆ ಬರಬಹುದು. ಹೋಗಬಹುದು ಎಂದರು.
ಡಿಕೆ ಶಿವಕುಮಾರ್ ಸಿಎಂ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಯಾರು ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ. ಟೀಕೆ ಮಾಡುವವರು ವೈಯಕ್ತಿಕ ತೃಪ್ತಿಗೆ ಮಾಡುತ್ತಾರೆ ಅಷ್ಟೇ ಎಂದರು.
ಸಿಎಂ ಹುದ್ದೆ ವರವಲ್ಲ. ಅದು ಡಿಕೆ ಶಿವಕುಮಾರ್ ಸಂಪಾದನೆ ಮಾಡಿರುವಂತ ಶಕ್ತಿಯಾಗಿದೆ. ಅದನ್ನು ಡಿ.ಕೆ ಶಿವಕುಮಾರ್ ಸಂಪಾದನೆ ಮಾಡಿದ್ದಾರೆ ಎಂಬುದಾಗಿ ತಿಳಿಸಿದರು.

