Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಮಶಾನ ಭೂಮಿ ಮಂಜೂರು ಮಾಡಲು ಗ್ರಾಮಸ್ಥರ ಆಗ್ರಹ

Advertisement

ಸಿಂಧನೂರು :ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಲದಿನ್ನಿ ಕಡೆಹೊಲ ಗ್ರಾಮದ ನಿವಾಸಿಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡುವ ಕುರಿತು ಮಾನ್ಯ ತಾಸಿಲ್ದಾರ್ ಸಿಂಧನೂರು ಅವರಿಗೆ ಮನವಿ ಪತ್ರ ಸಲ್ಲಿಸಿ ತಾಲ್ಲೂಕಿನ ಮಲದಿನ್ನಿ ಕಡೆಹೊಲ ಗ್ರಾಮದ ನಿವಾಸಿಗಳಾಗಿದ್ದು, ಹಲವು ವರ್ಷಗಳಿಂದ ಈ ಗ್ರಾಮದಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಗ್ರಾಮದಲ್ಲಿ ನೂರಾರು ಕುಟುಂಬಗಳು ನೆಲೆಸಿದ್ದು, ಕೃಷಿ ಹಾಗೂ ಕೂಲಿ ಕೆಲಸವನ್ನು ಅವಲಂಬಿಸಿ ಜೀವನ ಸಾಗಿಸುತ್ತಿವೆ.

ಆದರೆ ನಮ್ಮ ಗ್ರಾಮದಲ್ಲಿ ಇದುವರೆಗೆ ಯಾವುದೇ ಸ್ಮಶಾನ ಭೂಮಿ ಇಲ್ಲದ ಕಾರಣ, ಯಾರಾದರೂ ಮರಣ ಹೊಂದಿದ ಸಂದರ್ಭದಲ್ಲಿ ಅಂತ್ಯಸಂಸ್ಕಾರ ನಡೆಸಲು ತೀವು ತೊಂದರೆ ಅನುಭವಿಸಬೇಕು ಗ್ರಾಮದಲ್ಲಿ ಸ್ಮಶಾನ ಭೂಮಿಯ ಕೊರತೆಯಿಂದ ಮೃತರ ಅಂತ್ಯಸಂಸ್ಕಾರ ನಡೆಸಲು ಸೂಕ್ತ ಸ್ಥಳದ ಅಭಾವ ಉಂಟಾಗಿದೆ.

ಆದ್ದರಿಂದ ನಮ್ಮ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ, ಮಲದಿನ್ನಿ ಕಡೆಹೊಲ ಗ್ರಾಮದ ನಿವಾಸಿಗಳ ಬಳಕೆಗೆ ಸೂಕ್ತ ಸರ್ಕಾರಿ ಜಮೀನನ್ನು ಗುರುತಿಸಿ ಸ್ಮಶಾನ ಭೂಮಿಯಾಗಿ ಮಂಜೂರು ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಇದರಿಂದ ಬಹುಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ. ಆದ್ದರಿಂದ ಈ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಿ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಂಡು ಸ್ಮಶಾನ ಭೂಮಿಯನ್ನು ಮಂಜೂರು ಮಾಡಿಕೊಡಬೇಕಾಗಿ ತಾವುಗಳು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದಲ್ಲಿ ಯಾರೂ ಮರಣ ಹೊಂದಿದರೆ ತಮ್ಮ ಕಚೇರಿಗೆ ತಂದು ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದರು  
 

ಈ ಸಂದರ್ಭದಲ್ಲಿ : ಬಾಲೆ ಸಾಬ್. ಅಯ್ಯಪ್ಪ. ಅರುಣ್ ಸಾಬ್. ದುರ್ಗಪ್ಪ. ಸುರೇಶ. ತಿಮ್ಮಪ್ಪ. ಖಾಜಾ ಪಾಟೀಲ್. 
ಹುಸೇನ್ ಸಾಬ್. ಮೈಬೂಬ್ ಪಾಷಾ. ನಂದಾಪ. ಚಿದಾನಂದ. ಸಂಗಪ್ಪ. ದುರ್ಗಪ್ಪ.ನಿತೀಶ್. ವಿಶ್ವನಾಥ್. ತಿಮ್ಮಣ್ಣ.. ನಾಗಣ್ಣ.  ಬುಡ್ಡ ಸಾಬ್ ಶರಣಪ್ಪ. ಬಾಳಪ್ಪ. ವೆಂಕಟೇಶ್. ಸೇರಿದಂತೆ ಅನೇಕ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು

 

ವರದಿ :ಬಸವರಾಜ ಬುಕ್ಕನಹಟ್ಟಿ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಾತಂತ್ರ್ಯ ಸಂಭ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಿ : ಶಾಸಕ ಎಂ.ಟಿ.ಕೃಷ್ಣಪ್ಪ ಕರೆವಿಶೇಷಚೇತನರಿಗೆ ವ್ಹೀಲ್ ಛೇರ್, ಮೆಡಿಕಲ್ ಕಿಟ್ ವಿತರಣೆಆಹಾರ ಸುರಕ್ಷತಾ ವಿಭಾಗದಲ್ಲಿ ಖಾಲಿಯಿರುವ 84 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ವಿರೋಧ ಪಕ್ಷಗಳ ತೀವ್ರ ಗದ್ದಲ ನಡುವೆಯೇ ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ವಿಧೇಯಕ ಮಂಡನೆ ಸಾವಿನಲ್ಲೂ ಒಂದಾದ ದಂಪತಿ : 45 ವರ್ಷಗಳ ದಾಂಪತ್ಯ ಇನ್ನಿಲ್ಲ ದಾಸರಹಳ್ಳಿಯಲ್ಲಿ ವಿಜೃಂಭಣೆಯಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ 9ನೇ ವರ್ಷದ ಜಾತ್ರಾ ಮಹೋತ್ಸವಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ : ಡಿ. ಕೆ ಶಿವಕುಮಾರ್27ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಬಾಗಲಕೋಟೆಯಲ್ಲಿ ಭಾವಪೂರ್ಣ ಬೈಕ್ ರ‍್ಯಾಲಿ; ವೃದ್ಧಾಶ್ರಮದಲ್ಲಿ ಸಿಹಿ ಹಂಚಿ ಅರ್ಥಪೂರ್ಣ ಆಚರಣೆಪ್ರಾಚೀನ ವಿಠ್ಠಲ ದೇವಸ್ಥಾನದಲ್ಲಿ ಅಭೂತಪೂರ್ವ ಉತ್ಸಾಹದಿಂದ ಆಷಾಢ ಏಕಾದಶಿಯನ್ನು ಆಚರಿಸಲಾಯಿತು!   ಕಾರ್ಗಿಲ್ ವಿಜಯೋತ್ಸವದಲ್ಲಿ ಯೋಧರ ತ್ಯಾಗ ಅನನ್ಯ