
ಮತದಾನ ಜಾಗೃತಿ ಪ್ರಯುಕ್ತ ವಿನೂತನವಾಗಿ ರಂಗೋಲಿ ಬಿಡಿಸುವ ಮೂಲಕ ಜನರಲ್ಲಿ ಅರಿವಿನ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.
ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಿ, ವೋಟರ್ಸ್ ವೋಟ್ ಡೇ, ನನ್ನ ಮತ ಮಾರಟಕ್ಕಿಲ್ಲ ಧ್ವಜಸ್ತಂಭ ಎನ್ನುವ- ಚಿತ್ರಗಳು ರಂಗೋಲಿಯಲ್ಲಿ ಆಕರ್ಷಕವಾಗಿ ಮೂಡಿ ಬಂದವು.
ಪುರಸಭೆಯ ಕಂದಾಯ ಅಧಿಕಾರಿಯಾದ ದೇವರಾಜ ಅವರು ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಮೂಲಕ ಮತದಾನ ಮಹತ್ವ ತಿಳಿಸಿದರು.
ಈ ಸಂದರ್ಭ ಪುರಸಭೆ ಕಂದಾಯ ವಿಭಾಗದ ಅಧಿಕಾರಿಗಳಾದ ದೇವರಾಜ ಹಾಗೂ ,ಜಸ್ಸ್ ಪಾಲ್ ಸಿಂಗ್ ಮತ್ತು ನೈಮಲ್ಯ ಅಧಿಕಾರಿ ರೈಮತ್ ಹುನ್ನಿಸಾ ಬೇಗಂ, ಚನ್ನಮ್ಮ ದಳವಾಯಿ ಮಠ ಸಮುದಾಯ ಸಂಘಟಕರು, ಸಿಬ್ಬಂದಿ ಗಳಾದ ಮಾಲಿಂಗರಾಯ , ರೇಣುಕಾ,ದೀಪಾ ಹಾಗೂ ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು..
ವರದಿ : ಮಂಜುನಾಥ ಕುಂಬಾರ

