Ad imageAd image

ಕೇವಲ 5 ದಿನಗಳಲ್ಲಿ 19,589.54 ಕೋಟಿ ರೂ. ಆದಾಯ ಗಳಿಸಿದ ಎಸ್ ಬಿಐ

Bharath Vaibhav
ಕೇವಲ 5 ದಿನಗಳಲ್ಲಿ 19,589.54 ಕೋಟಿ ರೂ. ಆದಾಯ ಗಳಿಸಿದ ಎಸ್ ಬಿಐ
SBI
WhatsApp Group Join Now
Telegram Group Join Now

ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಮೇ 26 ರಿಂದ ಮೇ 30ರವರೆಗೆ ಕೇವಲ ಐದು ದಿನಗಳಲ್ಲಿ ತನ್ನ ಷೇರುಗಳು ಶೇಕಡಾ 2.27ರಷ್ಟು ಏರಿಕೆ ಕಂಡಿದ್ದರಿಂದ ಬರೋಬ್ಬರಿ 19,589.54 ಕೋಟಿ ರೂ. ಆದಾಯ ಗಳಿಸಿದೆ.

ಶುಕ್ರವಾರ, ಮೇ 30ರಂದು ಬ್ಯಾಂಕಿನ ಷೇರು ಬೆಲೆ 814 ರೂ.ಗೆ ಮುಕ್ತಾಯವಾಗಿದ್ದು, ಇದರೊಂದಿಗೆ ಬ್ಯಾಂಕಿನ ಮಾರುಕಟ್ಟೆ ಬಂಡವಾಳ 7,25,036.13 ಕೋಟಿ ರೂ. ತಲುಪಿದೆ.

ಷೇರು ಮಾರುಕಟ್ಟೆಯು ಸಾಮಾನ್ಯವಾಗಿ ದುರ್ಬಲ ಪ್ರದರ್ಶನ ನೀಡಿದ ಹೊರತಾಗಿಯೂ ಎಸ್‌ಬಿಐ ಮಾರುಕಟ್ಟೆ ಬಂಡವಾಳದಲ್ಲಿ ಈ ಏರಿಕೆ ಕಂಡುಬಂದಿರುವುದು ಗಮನಾರ್ಹ. ಈ ವಾರದಲ್ಲಿ ಬಿಎಸ್‌ಇ ಮಾನದಂಡ ಸೂಚ್ಯಂಕವು 270.07 ಅಂಕಗಳು ಅಥವಾ ಶೇಕಡಾ 0.33ರಷ್ಟು ಕುಸಿದಿದೆ.

ಇನ್ನು, ದೇಶದ ಟಾಪ್ 10 ಅತ್ಯಂತ ಮೌಲ್ಯಯುತ ಕಂಪನಿಗಳಲ್ಲಿ ನಾಲ್ಕು ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು ಈ ವಾರ 1,01,369.5 ಕೋಟಿ ರೂ. ಏರಿಕೆ ಕಂಡಿದೆ. ಈ ಏರಿಕೆಯಲ್ಲಿ ಮತ್ತೊಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮುಂಚೂಣಿಯಲ್ಲಿದೆ.

ಟಾಪ್ 10 ಕಂಪನಿಗಳಲ್ಲಿ, ಎಚ್‌ಡಿಎಫ್‌ಸಿ ಬ್ಯಾಂಕ್, ಸುನಿಲ್ ಮಿತ್ತಲ್ ಅವರ ಭಾರ್ತಿ ಏರ್‌ಟೆಲ್, ಎಸ್‌ಬಿಐ ಮತ್ತು ಎಲ್‌ಐಸಿ ತಮ್ಮ ಮಾರುಕಟ್ಟೆ ಮೌಲ್ಯದಲ್ಲಿ ಹೆಚ್ಚಳ ಕಂಡಿವೆ. ಆದರೆ, ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಬಜಾಜ್ ಫೈನಾನ್ಸ್ ಮತ್ತು ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ (ಎಚ್‌ಯುಎಲ್) ತಮ್ಮ ಮೌಲ್ಯಮಾಪನಗಳಲ್ಲಿ ಒಟ್ಟು 34,852.35 ಕೋಟಿ ರೂ. ಇಳಿಕೆ ಕಂಡಿವೆ.

ಎಲ್‌ಐಸಿ ಅತಿ ದೊಡ್ಡ ಲಾಭವನ್ನು ದಾಖಲಿಸಿದ್ದು, ಅದರ ಮಾರುಕಟ್ಟೆ ಬಂಡವಾಳ 59,233.61 ಕೋಟಿ ರೂ. ಏರಿಕೆಯಾಗಿ 6,03,120.16 ಕೋಟಿ ರೂ. ತಲುಪಿದೆ. ನಂತರದ ಸ್ಥಾನದಲ್ಲಿ ಎಸ್‌ಬಿಐ ಇದ್ದು, 19,589.54 ಕೋಟಿ ರೂ. ಗಳಿಸಿ ಒಟ್ಟು ಮೌಲ್ಯ 7,25,036.13 ಕೋಟಿ ರೂ.ಗೆ ಏರಿದೆ.

ರಿಲಯನ್ಸ್ ದೇಶದ ಅತ್ಯಂತ ಮೌಲ್ಯಯುತ ಕಂಪನಿಯಾಗಿಮುಂದುವರೆದಿದ್ದು, ನಂತರದ ಸ್ಥಾನಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಟಿಸಿಎಸ್, ಭಾರ್ತಿ ಏರ್‌ಟೆಲ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇನ್ಫೋಸಿಸ್, ಎಲ್‌ಐಸಿ, ಬಜಾಜ್ ಫೈನಾನ್ಸ್ ಮತ್ತು ಎಚ್‌ಯುಎಲ್ ಇವೆ.

WhatsApp Group Join Now
Telegram Group Join Now
Share This Article
error: Content is protected !!