ಬೆಂಗಳೂರು: –ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಬಾಗಲಗುಂಟೆ ವಾರ್ಡಿನ ವ್ಯಾಪ್ತಿಗೆ ಬರುವ ಸಿಡೇದಹಳ್ಳಿಯ ಸೌಂದರ್ಯ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸೌಂದರ್ಯ ವೆಂಕಟರಮಣ ಸ್ವಾಮಿ ದೇವಾಲಯವನ್ನು ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದರು.
ನಂತರ ಅವರು ಮಾನವನ ಧರ್ಮಕ್ಕೆ ಬಂದ ಮೇಲೆ ನಾವು ಮಾಡುವ ದುಡಿಮೆಯಲ್ಲಿ ಕೈಲಾದಷ್ಟು ದಾನ ಧರ್ಮ ಮಾಡಿದರೆ ಪುಣ್ಯ ಪ್ರಾಪ್ತಿ ಆಗುತ್ತದೆ ಎಂದು ನಮ್ಮ ಪೂರ್ವಿಕರು ಹೇಳುತ್ತಿರುವ ಮಾತು ಅಂದರೆ ಆ ಕೆಲಸ ಸೌಂದರ್ಯ ಮಂಜಪ್ಪ ರವರು ಸಮಾಜದಲ್ಲಿ ಎರಡು ಪ್ರಮುಖ ಕೊಡಿಗೆ ನೀಡಿದ್ದಾರೆ ಒಂದು ವಿದ್ಯಾಮಂದಿರ ಇನ್ನೋಂದು ದೇವರ ಮಂದಿರ ಇಂತಹ ಪುಣ್ಯದ ಕೆಲಸ ಮಾಡಿದ ವ್ಯಕ್ತಿ ಮಂಜಪ್ಪ ಅವರ ಧರ್ಮಪತ್ನಿ ಶ್ರೀಮತಿ ಸುನಿತಾ ಮಂಜಪ್ಪ ಕುಟುಂಬಸ್ಥರು ಇಂತಹ ಮನಸ್ಸು ಯಾರಿಗೆ ಬರುವುದಿಲ್ಲ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಲೋಕಾರ್ಪಣೆ ಮಾಡಿ ಸೌಂದರ್ಯ ಮಂಜಪ್ಪ ಮತ್ತು ಅವರ ಕುಟುಂಬಸ್ಥರನ್ನು ಹಾಡಿ ಹೊಗಳಿದ ಶ್ರೀಗಳು.
ವಿದ್ವಾನ್: ಕೆ.ಆರ್ ಶಶಾಂಕ ಇನ್ನಂಜೆತ್ತಾಯ,ನಾಲ್ಕೂರು ಬೆಳ್ತಂಗಡಿ ಅವರ ವೈದಿಕತ್ವದಲ್ಲಿ ಶಾಸ್ತ್ರೋಕ್ತ ಪೂಜಾ ವಿಧಿ ವಿಧಾನಗಳನ್ನು ಕಲಶಾಭಿಷೇಕ ಬ್ರಹ್ಮಕಲಶೋತ್ಸವ ಜರುಗಿದವು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್,ಸೌಂದರ್ಯ ಶಿಕ್ಷಣ ಸಂಸ್ಥೆಯ ಸಿಓ ಕೀರ್ತನ್ ಕುಮಾರ್, ಜನಾರ್ದನ್, ರವೀಂದ್ರ, ಎಫ್ ಕೆಸಿಸಿಪಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಗೌಡ,ಸಾಯಿ ರಾಮ್ ಪ್ರಸಾದ್, ಪ್ರಶಾಂತ್, ಚಂದ್ರ, ಬಿ. ಎಂ ಹೆಗಡೆ, ವರುಣ್ ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು ಮಹಿಳೆಯರು ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಇದ್ದರು.
ವರದಿ:- ಅಯ್ಯಣ್ಣ ಮಾಸ್ಟರ್