ಬೆಂಗಳೂರು: ಕಳೆದ ಕೆಲ ದಿನಗಳಿಂದ ಬಹಳ ಏರಿಕೆ ಕಂಡಿದ್ದ ಬಂಗಾರದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಜುಲೈ 4 ರಂದು ದಿಢೀರ್ ಬೆಲೆ ಕುಸಿತವಾಗಿದ್ದು, ಸುಮಾರು 600 ರೂಪಾಯಿ ಕುಸಿತ ಆಗಿದೆ.
24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 9873 ರೂಪಾಯಿ ಆಗಿದ್ದು, ಇಂದು 60 ರೂಪಾಯಿ ಇಳಿಕೆ ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೂಡಾ 55 ರೂಪಾಯಿ ಕಡಿಮೆ ಆಗಿ, ಇಂದಿನ ಬೆಲೆ 9050 ರೂಪಾಯಿಗೆ ಇಳಿಕೆ ಆಗಿದೆ.
ಬೆಂಗಳೂರಿನಲ್ಲಿ ಇಳಿಕೆ ಕಂಡ ಚಿನ್ನದ ದರ
ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ 600 ರೂಪಾಯಿ ಇಳಿಕೆ ಆಗಿದ್ದು, 10 ಗ್ರಾಂಗೆ 98,730 ರೂ ಆಗಿದೆ.
22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 550 ರೂ ಇಳಿಕೆ ಆಗಿದ್ದರೆ, ಒಟ್ಟು 10 ಗ್ರಾಂಗೆ 90,500 ರೂ ಆಗಿದೆ. ಇನ್ನು ಬೆಳ್ಳಿ ಕೆಜಿಗೆ 1000 ಇಳಿಕೆಯಾಗಿದ್ದು, ಒಟ್ಟು 1, 10,000 ಆಗಿದೆ.