ಹುನಗುಂದ : ತಾಲ್ಲೂಕಿನ ಸೂಳೇಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಿಕೇರೆ ಅಮೃತ ಸರೋವರ ದಡದಲ್ಲಿ 11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಸಂಗಮ, ಹರಿತ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಯೋಗ ತರಬೇತಿದಾರ ಸಂಗಪ್ಪ ಗಡ್ಡಿ, ಯೋಗದ ಮಹತ್ವ, ಯೋಗದಿಂದ ಆಗುವ ಉಪಯೋಗಗಳು, ಯೋಗಾಸನಗಳ ಬಗ್ಗೆ ತಿಳಿಸಿದರು.
ನಂತರ ಕೆರೆ ದಡದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂಗಣ್ಣ ಕಳ್ಳೋಳ್ಳಿ, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಪಂ ಸದಸ್ಯರಾದ ಹುಲಗಪ್ಪ ಕುರಿ, ಗ್ಯಾನಪ್ಪ ಗೋನಾಳ, ಹನಮತ ಮಿನಜಗಿ, ಜಗದೀಶ್ ರಗಟಿ, ದ್ವಿತೀಯ ಲೆಕ್ಕ ಸಹಾಯಕ ಹನುಮಂತ ಮಾಗಿ, ಬಿಲ್ ಕಲೆಕ್ಟರ್ ಯಲ್ಲಪ್ಪ ಕೋರಿ, ಗ್ರಾಪಂ ಸಿಬ್ಬಂದಿ ವರ್ಗ, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.