Ad imageAd image

ದಸರಾ ಹಬ್ಬದ ಶುಭ ಕೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ನಾಡಿನ ಸಮಸ್ತ ಜನರ ಬದುಕು ಹಸಿರಿನಂತೆ ಹಸನಾಗಲಿ

Bharath Vaibhav
ದಸರಾ ಹಬ್ಬದ ಶುಭ ಕೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ನಾಡಿನ ಸಮಸ್ತ ಜನರ ಬದುಕು ಹಸಿರಿನಂತೆ ಹಸನಾಗಲಿ
Laxmi hebbalkar
WhatsApp Group Join Now
Telegram Group Join Now

ಬೆಂಗಳೂರು: –ನಾಡಿನ ಸಮಸ್ತ ಜನತೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ದಸರಾ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.

ದುಷ್ಟರ ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡಿದಂತಹ ದ್ಯೋತಕವಾಗಿ ಆಚರಿಸಲ್ಪಡುವ ದಸರಾ ಹಬ್ಬ ನಾಡಿನ ಜನರಿಗೆ ಒಳಿತು ಮಾಡಲಿ. ಶಿಷ್ಟರ ರಕ್ಷಣೆ ಮಾಡಿ ದುಷ್ಟರ ವಧೆ ಮಾಡಿದ ತಾಯಿ ಚಾಮುಂಡೇಶ್ವರಿ ದೇವಿಯು ಕೃಪೆ ಎಲ್ಲರ ಮೇಲಿರಲಿ. ಮಹಾನವಮಿಯ ಈ ಸಂದರ್ಭದಲ್ಲಿ ಈ ವರ್ಷ ಎಲ್ಲೆಡೆ ತುಂಬಾ ಮಳೆಯಾಗಿದ್ದು, ಸುಖ ಸಮೃದ್ದಿಯೊಂದಿಗೆ ಎಲ್ಲರ ಜೀವನದಲ್ಲಿ ಹಸಿರನ್ನು ತರುವಂತಹದ್ದಾಗಿದೆ ಎಂದು ಸಚಿವರು ಹೇಳಿದ್ದಾರೆ.

ಇದೇ ರೀತಿ ಬರುವಂತಹ ದಿನಗಳು, ಬರುವಂತಹ ವರ್ಷಗಳಲ್ಲಿ ನಾಡದೇವಿಯ ಆಶೀರ್ವಾದ ನಾಡಿನ ಎಲ್ಲ ಬಂಧು ಬಾಂಧವರ ಮೇಲೆ, ರಾಜ್ಯದ ಎಲ್ಲ ಜನರ ಮೇಲೆ ಸದಾ ಇರಲಿ. ತಾಯಿ ಚಾಮುಂಡೇಶ್ವರಿ ದೇವಿಯು ನಾಡಿನ ಜನರ ಕಷ್ಟಗಳನ್ನು ಕರಗಿಸಲಿ, ಜೀವನದಲ್ಲಿ ಆರೋಗ್ಯ, ಸುಖ, ಶಾಂತಿ, ಸಂಪತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.

ವರದಿ:- ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!